Site icon Vistara News

Bigg Boss 17: ನಾಳೆಯಿಂದ ಹಿಂದಿ ಬಿಗ್‌ ಬಾಸ್‌ ಹವಾ; ಮನೆ ಫುಲ್‌ ಚೇಂಜ್‌; ವಿಡಿಯೊ ಔಟ್‌!

Bigg Boss 17 house

ಬೆಂಗಳೂರು: ಈಗಾಗಲೇ ಕನ್ನಡ ಬಿಗ್‌ ಬಾಸ್‌ ಪ್ರಸಾರದ ದಿನಾಂಕವನ್ನು ವಾಹಿನಿ ರಿವೀಲ್‌ ಮಾಡಿದೆ. ಹಿಂದಿ ಬಿಗ್​ಬಾಸ್ ಟಿವಿ ಆವೃತ್ತಿಯ (Bigg Boss 17) ಹೊಸ ಸೀಸನ್ ಘೋಷಣೆ ಮಾಡಲಾಗಿದೆ. ಒಟಿಟಿ ಆವೃತ್ತಿಯನ್ನು ಸಲ್ಮಾನ್ ಖಾನ್ ನಿರೂಪಣೆ ಮಾಡಿದ್ದರು. ಇದೀಗ ಟಿವಿ ಆವೃತ್ತಿಯನ್ನೂ ಅವರೇ ನಿರೂಪಣೆ ಮಾಡಲಾಗಿದ್ದಾರೆ. ಈಗಾಗಲೇ ಹೊಸ ಸೀಸನ್‌ ಪ್ರೋಮೊ ಬಿಡುಗಡೆಗೊಂಡಿದೆ. ಇದೀಗ ಬಿಗ್ ಬಾಸ್ 17 ರ ಮನೆಯ ಫೋಟೊಗಳು ರಿವೀಲ್‌ ಆಗಿವೆ. ಹಿಂದಿನ ಸೀಸನ್‌ಗಳಿಗಿಂತ ಭಿನ್ನವಾಗಿ, ಮನೆಯು ವರ್ಣರಂಜಿತದಿಂದ ಕೂಡಿದೆ. ಮನೆಯು ಅದ್ಧೂರಿ ಒಳಾಂಗಣವನ್ನು ಹೊಂದಿಲ್ಲ, ಬದಲಿಗೆ ಕಲ್ಲು ಮತ್ತು ಇಟ್ಟಿಗೆ ನೆಲಹಾಸು ಇದೆ.

ಚೆಸ್ ಥೀಮ್, ಇಟ್ಟಿಗೆ ಮತ್ತು ಕಲ್ಲಿನಿಂದ ಕೂಡಿದೆ ಒಳಾಂಗಣಗಳು

ಚೆಸ್ ಥೀಮ್ ಗೋಡೆಯ ಕೆತ್ತನೆಗಳು ಮನೆಯ ಹೈಲೈಟ್. ಪ್ರವೇಶದ್ವಾರದಲ್ಲಿ ಕಲ್ಲಿನಲ್ಲಿ ಮೂಡಿದ ರೆಕ್ಕೆಗಳನ್ನು ಹೊಂದಿರುವ ದೊಡ್ಡ ಕುದುರೆ ಇದೆ. ಡೈನಿಂಗ್ ಟೇಬಲ್ ಕೂಡ ಕಲ್ಲಿನಿಂದ ಮಾಡಲ್ಪಟ್ಟಿದೆ. ಮನೆಯಲ್ಲಿ ಮೂರು ಬಗೆಯ ಮಲಗುವ ಕೋಣೆಗಳು ಕಾಣಸಿಗುತ್ತವೆ. ಲ್ಯಾವೆಂಡರ್ ಸೆಟ್ಟಿಂಗ್‌ನಲ್ಲಿ ಒಳಾಂಗಣವನ್ನು ಹೊಂದಿದ್ದು, ಗೋಡೆಗಳು ಹೂವುಗಳಿಂದ ಅಲಂಕರಿಸಲ್ಪಟ್ಟಿದೆ. ಸ್ಪರ್ಧಿಗಳಿಗೆ ವಿಶ್ರಾಂತಿ ಪಡೆಯಲು ಮತ್ತು ಹರಟೆ ಹೊಡೆಯಲು ಮಂಚಗಳಿವೆ. ಕೋಣೆಯ ಇನ್ನೊಂದು ಭಾಗದಲ್ಲಿ ಸಣ್ಣ ಡೈನಿಂಗ್ ಟೇಬಲ್ ಇದೆ ಮತ್ತು ಒಂದೇ ಸೋಫಾವನ್ನು ಸಹ ಗುರುತಿಸಬಹುದು. ಮಧ್ಯದಲ್ಲಿ ಕೇವಲ ಒಂದು ಡಬಲ್ ಬೆಡ್ ಮತ್ತು ಅದರ ಜತೆಗೆ ಸೋಫಾ ಕುರ್ಚಿ ಇದೆ. ಮನೆಯ ಒಟ್ಟು ಚಿತ್ರಣವನ್ನು ವಿಡಿಯೊ ಮೂಲಕ ಹಂಚಿಕೊಂಡಿದೆ.

ಇದನ್ನೂ ಓದಿ: Bigg Boss 17: ಹಿಂದಿ ಬಿಗ್‌ ಬಾಸ್‌ ಪ್ರಸಾರಕ್ಕೆ ಮುಹೂರ್ತ ಫಿಕ್ಸ್‌; ತಮಿಳು ಬಿಗ್‌ ಬಾಸ್‌ ಯಾವಾಗ?

ಹಿಂದಿ ಬಿಗ್‌ ಬಾಸ್‌ ಅಕ್ಟೋಬರ್‌ 15ರಿಂದ ಪ್ರಸಾರ ಕಾಣುತ್ತಿದೆ. ಪ್ರತಿದಿನವೂ 10 ಗಂಟೆಗೆ ಶನಿವಾರ ಮತ್ತು ಭಾನುವಾರ ಮಾತ್ರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ವಾರಾಂತ್ಯದ ಎಪಿಸೋಡ್​ಗಳಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಳ್ಳಲಿದ್ದಾರೆ. ಈ ಬಾರಿ ಬಿಗ್​ಬಾಸ್​ನಲ್ಲಿ ಪಕ್ಷಪಾತ ಇರಲಿದ್ದು, ಸ್ಪರ್ಧಿಗಳಲ್ಲಿ ಕೆಲವರಿಗೆ ಸ್ವತಃ ಬಿಗ್​ಬಾಸ್ ಮಾರ್ಗದರ್ಶನ ಮಾಡಲಿದೆ ಎಂಬುದು ಪ್ರೋಮೊದಲ್ಲಿ ರಿವೀಲ್‌ ಆಗಿದೆ. ಕೆಲ ದಿನಗಳ ಹಿಂದಿ ಬಿಗ್ ಬಾಸ್ ಒಟಿಟಿ 2 ಶೋ ಅಂತ್ಯವಾಯಿತು. ಈ ಸೀಸನ್‌ನಲ್ಲಿ ಎಲ್ವೀಶ್ ಯಾದವ್ ವಿನ್ನರ್ ಆದರು. ಅಂಕಿತಾ ಲೋಖಂಡೆ,
ವಿಕ್ಕಿ ಜೈನ್, ಇಶಾ ಮಾಳವಿಯಾ, ಇಂದಿರಾ ಕೃಷ್ಣ, ಅರ್ಜಿತ್ ತನೇಜಾ ಮತ್ತು ಐಶ್ವರ್ಯ ಶರ್ಮಾ ಸೀಸನ್‌ 17ರ ಸ್ಪರ್ಧಿಗಳು ಎಂಬ ವರದಿಯಿದೆ.

Exit mobile version