ಬೆಂಗಳೂರು: ಈ ವರ್ಷ ಅಕ್ಟೋಬರ್‌ನಲ್ಲಿ ಪ್ರದರ್ಶನಗೊಂಡ ʻಬಿಗ್ ಬಾಸ್ 17ʼ (Bigg Boss 17) ಮುಂದಿನ ತಿಂಗಳು ಪೂರ್ಣಗೊಳ್ಳಲು ರೆಡಿಯಾಗಿ ನಿಂತಿದೆ. ಹಿಂದಿ ಬಿಗ್ ಬಾಸ್ ಆರಂಭದಲ್ಲಿ ಶೋ ವಿಸ್ತರಣೆಯಾಗಲಿದೆ ಎಂದು ವರದಿಯಾಗಿತ್ತು. ಆದರೀಗ ವರದಿಯ ಪ್ರಕಾರ 100 ದಿನಕ್ಕೆ ಶೋ ಪೂರ್ಣಗೊಳ್ಳುತ್ತಿದ್ದು, ಸಂಚಿಕೆ ವಿಸ್ತರಣೆಯಾಗುತ್ತಿಲ್ಲ ಎನ್ನಲಾಗಿದೆ. ಬಿಗ್ ಬಾಸ್ 17 ಜನವರಿಯಲ್ಲಿ ಮುಕ್ತಾಯಗೊಳ್ಳಲಿದೆ. ʻಬಿಗ್ ಬಾಸ್ 17ʼ ಜನವರಿ 28ರಂದು ಅಂತಿಮ ಸಂಚಿಕೆ ಪ್ರಸಾರವಾಗಲಿದೆ.
ಕಿರುತೆರೆಯ ಅತ್ಯಂತ ಜನಪ್ರಿಯ ಮತ್ತು ಅಷ್ಟೇ ವಿವಾದಾತ್ಮಕ ರಿಯಾಲಿಟಿ ಶೋ ಎಂದರೆ ಅದು ‘ಬಿಗ್ ಬಾಸ್’. ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು ಮೊದಲಾದ ಭಾಷೆಗಳಲ್ಲೂ ಈ ಶೋ ಪ್ರಸಾರ ಕಾಣುತ್ತಿದೆ. ಈಗಾಗಲೇ ʻತೆಲುಗು ಬಿಗ್ ಬಾಸ್ʼ ವಿನ್ನರ್ ಘೋಷಿಸಿದ್ದಾಗಿದೆ. ʻಕನ್ನಡ ಬಿಗ್ ಬಾಸ್ʼ (Bigg Boss) ಈ ಬಾರಿ 100 ದಿನಕ್ಕೆ ಪೂರ್ಣಗೊಳ್ಳುತ್ತಿಲ್ಲ. ಎಂಟನೇ ಸೀಸನ್ 117 ದಿನಗಳ ಕಾಲ ಇತ್ತು. ಏಳನೇ ಸೀಸನ್ 112 ದಿನ ನಡೆದಿತ್ತು. ಈ ಸೀಸನ್ನಲ್ಲೂ ಎರಡು ವಾರ ಹೆಚ್ಚುವರಿಯಾಗಿ ನಡೆಸಲು ವಾಹಿನಿ ನಿರ್ಧರಿಸಿದೆ ಎನ್ನಲಾಗುತ್ತಿದೆ.
ಆದರೆ ಕಳೆದ ಎರಡು ವಾರಗಳಲ್ಲಿ ‘ಬಿಗ್ ಬಾಸ್ ಹಿಂದಿ ಸೀಸನ್ 17’ರ ಟಿಆರ್ಪಿ ಹೆಚ್ಚಾಗಿದೆ. ಆದರೆ, ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ. ಹೀಗಾಗಿ, ಕಳೆದ ಐದು ವರ್ಷಗಳಲ್ಲಿ ಮೊದಲ ಬಾರಿಗೆ ಈ ಶೋನ 100 ದಿನಕ್ಕೆ ಪೂರ್ಣಗೊಳಿಸಲು ನಿರ್ಧರಿಸಾಗಿದೆ. ‘ಬಿಗ್ ಬಾಸ್ 17′ ಮುಗಿದ ನಂತರ ಕಲರ್ಸ್ ಟಿವಿಯಲ್ಲಿ ‘ಡ್ಯಾನ್ಸ್ ದೀವಾನೆ’ ಹೆಸರಿನ ಡ್ಯಾನ್ಸ್ ಶೋ ಆರಂಭವಾಗಲಿದೆ. ಕಾರ್ಯಕ್ರಮದ ಗ್ರ್ಯಾಂಡ್ ಪ್ರೀಮಿಯರ್ 2024ರ ಫೆಬ್ರವರಿ 3ರಂದು ನಡೆಯಲಿದೆ.
ಇದನ್ನೂ ಓದಿ: Bigg Boss 17: ಬಿಗ್ ಬಾಸ್ ಮನೆಯಲ್ಲಿ ಹೆಂಡತಿ ಕೆನ್ನೆಗೆ ಹೊಡೆಯಲು ಹೋದ ಗಂಡ!
ಇಂದು ʻಬಿಗ್ ಬಾಸ್ 17ʼರಲ್ಲಿ, ಒಬ್ಬ ಸ್ಪರ್ಧಿ ಹೊರ ಹೋಗುತ್ತಾರೆ. ಅಂಕಿತಾ ಲೋಖಂಡೆ, ಐಶ್ವರ್ಯ ಶರ್ಮಾ, ನೀಲ್ ಭಟ್ ಮತ್ತು ಅನುರಾಗ್ ದೋಭಾಲ್ ಅವರು ಈ ವಾರ ನಾಮಿನೇಟ್ ಆಗಿದ್ದಾರೆ. ಫಿನಾಲೆ ಸಮೀಪಿಸುತ್ತಿರುವುದರಿಂದ, ಬಿಗ್ ಬಾಸ್ 17 ರ ಗ್ರ್ಯಾಂಡ್ ಫಿನಾಲೆಯಲ್ಲಿ ಯಾವ ಟಾಪ್ ಫೈನಲಿಸ್ಟ್‌ಗಳು ಇರಲಿದ್ದಾರೆ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
ʻಬಿಗ್ ಬಾಸ್ ಹಿಂದಿ 17’ರ ಮನೆಯಲ್ಲಿ ಒಟ್ಟೂ 12 ಸದಸ್ಯರಿದ್ದಾರೆ. ಅಂಕಿತಾ ಲೋಖಂಡೆ, ವಿಕ್ಕಿ ಜೈನ್, ನೀಲ್ ಭಟ್, ಅರುಣ್ ಮಹಾಶೆಟ್ಟಿ, ಔರಾ, ಮುನಾವರ್ ಫಾರೂಕಿ, ಮನ್ನಾರಾ ಚೋಪ್ರಾ, ಅನುರಾಗ್ ದೋವಲ್, ರಿಂಕು ಧವನ್, ಇಶಾ ಮಾಳವೀಯ, ಅಭಿಷೇಕ್ ಕುಮಾರ್ ಮತ್ತು ಸಮರ್ಥ್ ಜುರೈಲ್ ಗಮನ ಸೆಳೆಯುತ್ತಿದ್ದಾರೆ. ಜನವರಿಯ ಎರಡನೇ ವಾರದಲ್ಲಿ ‘ವೀಕೆಂಡ್ ಕಾ ವಾರ್’ ಸಂಚಿಕೆಯಲ್ಲಿ ಸಲ್ಮಾನ್ ಖಾನ್ ಇರುವುದಿಲ್ಲ.ಅವರಿಗೆ ಬಿಗ್ ಬಾಸ್ ಹೋಸ್ಟ್ ಮಾಡಲು ಸಾಧ್ಯವಾಗದ ದಿನ ಕರಣ್ ಜೋಹರ್ ಶೋ ನಡೆಸಿಕೊಡುತ್ತಾರೆ.
ಇದನ್ನೂ ಓದಿ: Bigg Boss 17: ಗಂಡ- ಹೆಂಡತಿ ಕಿತ್ತಾಟ ನಡುವೆ ಮಾಜಿ ಗರ್ಲ್‌ಫ್ರೆಂಡ್! ಬಿಗ್ ಬಾಸ್‌ನಲ್ಲಿ ಡ್ರಾಮಾ!
ಅಕ್ಟೋಬರ್ 15 ರಂದು ʻಬಿಗ್ ಬಾಸ್ ಸೀಸನ್ 17ʼ ಶುರುವಾಯ್ತು. ಜಿಯೋ ಸಿನಿಮಾದಲ್ಲಿ ಸ್ಟ್ರೀಮ್ ಆಗುತ್ತಿದೆ. ಪರ್ಯಾಯವಾಗಿ, ಕಾರ್ಯಕ್ರಮವು ಕಲರ್ಸ್ ಟಿವಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರ ಕಾಣುತ್ತಿದೆ. ಈ ಬಾರಿಯ ಬಿಗ್ ಬಾಸ್ ಹಲವಾರು ಹೊಸ ಮತ್ತು ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ.