Site icon Vistara News

Anurag Dobhal: ʻಬಿಗ್ ಬಾಸ್‌ʼ ಮಾಜಿ ಸ್ಪರ್ಧಿಯ ಲ್ಯಾಂಬೊರ್ಗಿನಿ ಕಾರು ವಶ, 3 ಕೋಟಿ ರೂ. ದಂಡ!

Bigg Boss contestant Anurag Dobhal

ಬೆಂಗಳೂರು: ‘ಬಿಗ್ ಬಾಸ್ 17’ ಸ್ಪರ್ಧಿಗಳು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಇದೀಗ ಯೂಟ್ಯೂಬರ್ ಅನುರಾಗ್ ದೋಬಲ್ (Anurag Dobhal), ಯುಕೆ 07 ರೈಡರ್ ಹೆಸರಿನ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು ಅವರ ಐಶಾರಾಮಿ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ (Lamborghini seized). ಜತೆಗೆ ಮೂರು ಕೋಟಿ ದಂಡ ವಿಧಿಸಿದ್ದಾರೆ. ಐಪಿಎಲ್ ಆಗಿದ್ದರಿಂದ (Bigg Boss contestant Anurag Dobhal) ವಿಡಿಯೊ ಮಾಡಲೆಂದು ಚೆನ್ನೈಗೆ ತಮ್ಮ ದುಬಾರಿ ಲ್ಯಾಂಬೊರ್ಗಿನಿ ಕಾರನ್ನು ಅನುರಾಗ್ ದೋಬಲ್ ತಂದಿದ್ದರು. ಕ್ರಿಕೆಟಿಗ ಸುರೇಶ್ ರೈನಾ ಜತೆ ವಿಡಿಯೊ ಮಾಡಿ ಹೊರಡಬೇಕಾದರೆ ಅವರ ಕಾರನ್ನು ಚೆನ್ನೈ ಪೊಲೀಸರು ಸೀಜ್ ಮಾಡಿದ್ದಾರೆ.

ಚಿತ್ರೀಕರಣ ಮುಗಿದ ನಂತರ, ಅನುರಾಗ್ ಮುಂಬೈಗೆ ಪ್ರಯಾಣಿಸುವ ಉದ್ದೇಶವನ್ನು ಹೊಂದಿದ್ದರು. ಕಾರನ್ನು ಫ್ಲ್ಯಾಟ್ ಬೆಡ್ ಮೇಲೆ ಇರಿಸಿ ಲಾರಿಯೊಂದಕ್ಕೆ ಕಾರನ್ನು ಹಾಕಿ ದೆಹಲಿಗೆ ಕಳಿಸಿ ತಾವು ದೆಹಲಿಗೆ ವಿಮಾನದಲ್ಲಿ ಹೋಗಲು ತಯಾರಾಗಿದ್ದರು. ಆದರೆ ಆ ಲಾರಿಗೆ ದಾಖಲೆಗಳು ಇಲ್ಲದ ಕಾರಣ ಚೆನ್ನೈ ಪೊಲೀಸರು ಲಾರಿ ಜತೆಗೆ ಲ್ಯಾಂಬೊರ್ಗಿನಿ ಕಾರನ್ನು ಸಹ ಸೀಜ್ ಮಾಡಿದ್ದಾರೆ. ಅಷ್ಟೇ ಅಲ್ಲ, 3-3.5 ಕೋಟಿ ರೂ. ದಂಡವನ್ನೂ ವಿಧಿಸಿದ್ದಾರೆ.

ಅನುರಾಗ್ ಅವರು ತಮ್ಮ ‘ಬಿಗ್ ಬಾಸ್ 17’ ಸಹ-ಸ್ಪರ್ಧಿ ಖಾಂಜಾದಿ ಅವರೊಂದಿಗೆ ಮಿಜಾಜಿ ಮತ್ತು ಮುಫೀದ್ ಹಾಡಿರುವ ‘ರಂಗ್ರೇಜಾ’ ಎಂಬ ವಿಡಿಯೊದಲ್ಲಿ ಕಾಣಿಸಿಕೊಂಡಿದ್ದರು. ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗಳು ಒಂದಲ್ಲ ಒಂದು ವಿಚಾರಕ್ಕೆ ಪೊಲೀಸರು ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.

ಇದನ್ನೂ ಓದಿ: Munawar Faruqui: ʻಬಿಗ್ ಬಾಸ್ 17ʼರ ವಿಜೇತ ಮುನಾವರ್ ಫಾರೂಕಿ ಮತ್ತೆ ಅರೆಸ್ಟ್‌!

ಮುನಾವರ್ ಫಾರೂಕಿ ಮತ್ತೆ ಅರೆಸ್ಟ್‌!

ಮುಂಬೈ ಬಂದರು ಪ್ರದೇಶದ ಹುಕ್ಕಾ ಬಾರ್‌ನಲ್ಲಿ ಪೊಲೀಸರು ಮಾ.26ರ ಮಂಗಳವಾರ ದಾಳಿ ನಡೆಸಿದ್ದರು. ಬಿಗ್ ಬಾಸ್ 17ರ ವಿಜೇತ ಮುನಾವರ್ ಫಾರೂಕಿ (Munawar Faruqui) ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು. ಇದೀಗ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿಚಾರಣೆ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2021ರಲ್ಲಿ ಮಧ್ಯಪ್ರದೇಶದಲ್ಲಿ ನಡೆದ ಶೋ ಒಂದರಲ್ಲಿ ʻಬಿಗ್‌ ಬಾಸ್‌ ಸೀಸನ್‌ 17ʼರ ವಿನ್ನರ್‌ ಮುನಾವರ್‌ ಫಾರೂಕಿ (Munawar Faruqui) ಅವರು ಜೋಕ್‌ ಮಾಡುವ ಭರದಲ್ಲಿ ನೀಡಿದ ಹೇಳಿಕೆಯಿಂದ ವಿವಾದ ಸೃಷ್ಟಿಯಾಗಿತ್ತು. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು. ಇದಕ್ಕಾಗಿ ಅವರು ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರು.

ಹಾವಿನ ವಿಷ ಬಳಸಿದ  ಪ್ರಕರಣ

ಬಿಗ್ ಬಾಸ್ OTT 2 (Elvish Yadav ) ವಿಜೇತ ಮತ್ತು ಯೂಟ್ಯೂಬರ್ ಎಲ್ವಿಶ್ ಯಾದವ್ (Elvish Yadav ) ಅವರನ್ನು ನೋಯ್ಡಾ ಪೊಲೀಸರು ಹಾವಿನ ವಿಷ ಬಳಸಿದ ಪ್ರಕರಣದಲ್ಲಿ ಮಾ.17ರಂದು ಬಂಧಿಸಿದ್ದರು. ಬಂಧನವಾದ ಕೆಲವೇ ಗಂಟೆಗಳಲ್ಲಿ ರೇವ್ ಪಾರ್ಟಿಗಳಿಗೆ ಹಾವಿನ ವಿಷವನ್ನು ಬಳಸಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಯ್ತು. ಆ ಬಳಿಕ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ.

ಯೂಟ್ಯೂಬರ್‌ ಮೇಲೆ ಹಲ್ಲೆ ನಡೆಸಿದ್ದ ಎಲ್ವಿಶ್‌

ಎಲ್ವಿಶ್ ಯಾದವ್ ವಿವಾದಗಳು ಹೊಸದೇನಲ್ಲ. ಕೆಲವು ದಿನಗಳ ಹಿಂದೆಯಷ್ಟೇ ‘ಬಿಗ್ ಬಾಸ್ ಹಿಂದಿ ಒಟಿಟಿ 2’ (Bigg Boss OTT) ಮೂಲಕ ಖ್ಯಾತಿ ಪಡೆದಿದ್ದ ಎಲ್ವಿಶ್​ ಯಾದವ್ ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ಮಾಡಿದ್ದರು. ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಗುರುಗ್ರಾಮ್ ಪೊಲೀಸರು ಬಿಗ್ ಬಾಸ್ ವಿಜೇತ ಮತ್ತು ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಿದ್ದರು.

Exit mobile version