Site icon Vistara News

BBK SEASON 10: ಈ ಬಾರಿಯೂ ಲಕ್ಷುರಿ ಬಜೆಟ್‌ ಹೊಗೆ; ವಿನಯ್‌ಗೆ ಹೆಚ್ಚಿತು ಆತಂಕ!

Bigg Boss Contestants lost Luxury Budget

ಬೆಂಗಳೂರು: ʻಬಿಗ್‌ ಬಾಸ್‌ʼ ಸೀಸನ್‌ 10ರಲ್ಲಿ (BBK SEASON 10) ಸ್ಪರ್ಧಿಗಳು ಗಮನ ಸೆಳೆಯುವುದಕ್ಕಿಂತ ಲಕ್ಷುರಿ ಬಜೆಟ್‌ ಬಗ್ಗೆಯೇ ಚರ್ಚೆಗಳು ಜೋರಾಗಿವೆ. ಈ ಬಾರಿ ಕೂಡ ಸ್ಪರ್ಧಿಗಳು ಲಕ್ಷುರಿ ಬಜೆಟ್‌ ಕಳೆದುಕೊಂಡಿದ್ದು, ಎರಡನೇ ಬಾರಿ ʻಬಿಗ್‌ ಬಾಸ್‌ʼ ಟೀಕಿಸಿ ಚಾನ್ಸ್‌ ಕೊಟ್ಟಿದ್ದಾರೆ. ಜತೆಗೆ ವಿನಯ್‌ ಅವರಿಗೂ ಆತಂಕ ಹೆಚ್ಚಾಗಿದೆ. ಈ ಬಾರಿ ಈ ಬಗ್ಗೆ ಸುದೀಪ್‌ ಅವರು ಏನೂ ಹೇಳಬಹುದು ಎಂಬ ಆತಂಕ ಅವರಿಗೆ.

13 ವಾರವಾದರೂ ಸ್ಪರ್ಧಿಗಳು ಒಂದು ಬಾರಿಯೂ ಸರಿಯಾಗಿ ಲಕ್ಷುರಿ ಬಜೆಟ್‌ ಪಡೆದುಕೊಂಡಿಲ್ಲ. ಕಾರ್ತಿಕ್ ಅವರು ಲೆಕ್ಕ ಬರೆಯಲು ನಿಂತಿದ್ದರು. ಆದರೆ, ಈ ಲೆಕ್ಕಾಚಾರವನ್ನು ಸರಿಯಾಗಿ ಬರೆದಿಲ್ಲ. ಹೀಗಾಗಿ, ಲಕ್ಷುರಿ ಬಜೆಟ್ ಮಿಸ್ ಆಯಿತು. ಈ ಬಗ್ಗೆ ವಿನಯ್ ಹಾಗೂ ಕಾರ್ತಿಕ್ ಚರ್ಚೆ ಮಾಡಿದ್ದಾರೆ. ‘ಸುದೀಪ್ ಸರ್​ಗೆ ಹೇಗೆ ಮುಖ ತೋರಿಸಬೇಕು ಎಂಬುದೇ ತಿಳಿಯುತ್ತಿಲ್ಲ. ಅವರು ಈ ಬಾರಿ ಸರಿಯಾಗಿ ಉಗಿಯುತ್ತಾರೆ’ ಎಂದು ವಿನಯ್ ಆತಂಕ ಹೊರ ಹಾಕಿದರು.

ಲಕ್ಷುರಿ ಸಾಮಗ್ರಿಗಳಾದ ಚಿಕನ್, ತುಪ್ಪ, ಕಾಫಿ ಪುಡಿಯನ್ನ ಸ್ಪರ್ಧಿಗಳು ಖರೀದಿ ಮಾಡಿದರು. ಲೆಕ್ಕಾಚಾರ ಮಾಡುವಾಗ ಕಾರ್ತಿಕ್ ತಪ್ಪು ಮಾಡಿದರು. ಲೆಕ್ಕಾಚಾರ ತಪ್ಪಾದ ಕಾರಣ ಲಕ್ಷುರಿ ಬಜೆಟ್‌ ಮಿಸ್ ಆಯಿತು.

ಟೀಕಿಸಿದ ಬಿಗ್‌ ಬಾಸ್‌

’ಈ ಮನೆಯ ಸದಸ್ಯರು ಲಕ್ಷುರಿ ಬಜೆಟ್‌ ವಸ್ತುಗಳನ್ನು ಪಡೆಯುವ ವೈಖರಿ ಕಳೆದ 9 ಸೀಸನ್‌ನ ಸ್ಪರ್ಧಿಗಳು ಮೂಕವಿಸ್ಮಿತರಾಗಿದ್ದಾರೆ. ವೀಕ್ಷಕರಂತೂ ಮುಂದಿನ ಲಕ್ಷುರಿ ಬಜೆಟ್ ಯಾವಾಗ ಬರುವುದೋ? ಮುಂದಿನ ಬಾರಿ ನೀವು ಹೇಗೆ ಲಕ್ಷುರಿ ಬಜೆಟ್‌ ಗಳಿಸುತ್ತೀರಿ ಎಂಬುದನ್ನು ನೋಡಲು ದಿನಗಳನ್ನು ಎಣಿಸುತ್ತಿರುತ್ತಾರೆ. ಎಲ್ಲರೂ ಒಮ್ಮೆ ಕಣ್ಮುಚ್ಚಿ ಈ ದೃಶ್ಯವನ್ನು ಕಲ್ಪಿಸಿಕೊಳ್ಳಿ. ಈ ಕಲ್ಪನೆ ನಿಜವಾದರೆ ಎಷ್ಟು ಚೆನ್ನಾಗಿರುತ್ತೆ ಅಲ್ವೇ? ಈ ಕಲ್ಪನೆ ನಿಜವಾಗಿಸುವ ಅವಕಾಶವನ್ನು ಈಗ ‘ಬಿಗ್ ಬಾಸ್’ ನಿಮಗೆ ನೀಡುತ್ತಿದ್ದಾರೆ. ಸಹ ಸ್ಪರ್ಧಿಗಳು ಎಷ್ಟು ನಗುತ್ತಾರೆ ಎಂಬ ಆಧಾರದ ಮೇಲೆ ‘ಬಿಗ್ ಬಾಸ್‌’ ಇಂದು ನೀವು ಕಳೆದುಕೊಂಡ ಲಕ್ಷುರಿ ಬಜೆಟ್ ವಸ್ತುಗಳನ್ನು ಕಳುಹಿಸಿಕೊಡುತ್ತಾರೆ. ಈ ಬಾರಿಯಾದರೂ ಈ ಮನೆ ಲಕ್ಷುರಿ ಬಜೆಟ್ ಗಳಿಸುತ್ತದೆಯೆಂದು ‘ಬಿಗ್ ಬಾಸ್’ ಆಶಿಸುತ್ತಾರೆ’’ ಎಂದು ‘ಬಿಗ್ ಬಾಸ್‌’ ಸೂಚಿಸಿದರು.

ಇದನ್ನೂ ಓದಿ: BBK SEASON 10: ಮನೆಗೆ ಮರಳುತ್ತಿದ್ದಂತೆ ದೇವರಿಗೆ ಊದಿನ ಕಡ್ಡಿ ಹಚ್ಚಿ ಪೂಜೆ ಮಾಡಿದ ಡ್ರೋನ್‌ ಪ್ರತಾಪ್‌!

ಸಂಗೀತಾರನ್ನ ನಮ್ರತಾ, ಕಾರ್ತಿಕ್ ಅವರನ್ನ ವರ್ತೂರು ಸಂತೋಷ್, ನಮ್ರತಾ ಅವರನ್ನ ಸಂಗೀತಾ ಅನುಕರಿಸಿದರು. ವಿನಯ್, ಕಾರ್ತಿಕ್, ತುಕಾಲಿ ಸಂತು – ಹಾಸ್ಯ ಸ್ಕಿಟ್ ಮಾಡಿದರು.

Exit mobile version