Site icon Vistara News

Big Boss Kannada | ಬಿಗ್​ ಬಾಸ್ ಸ್ಪರ್ಧಿಗಳಿಗೆ ‘ಕೈ ಪಟ್ಟಿ’ ಸಂಭ್ರಮ

Big Boss Kannada

ಬೆಂಗಳೂರು: ರಿಯಾಲಿಟಿ ಶೋಗಳ ಬಾಸ್ ಎಂದು ಕರೆಸಿಕೊಳ್ಳುವ ಬಿಗ್ ಬಾಸ್​ ಒಂದಲ್ಲ ಒಂದು ವಿಶೇಷತೆ ಹೊತ್ತು ತರುತ್ತದೆ. ಇದೇ ರೀತಿ ಇದೀಗ ಬಿಗ್ ​ಬಾಸ್ ಟೆಲಿವಿಷನ್ (Big Boss Kannada) ಶೋ ಅಥವಾ ಬಿಗ್​ ಬಾಸ್-9 ಸರ್ಪ್ರೈಸ್ ಮೇಲೆ ಸರ್ಪ್ರೈಸ್ ಕೊಡುತ್ತಿದೆ. ಈಗಾಗಲೇ ಮನೆ ಒಳಗೆ ಕಾವು ಹೆಚ್ಚಾಗಿರುವ ಸಂದರ್ಭದಲ್ಲೇ ‘ಕೈ ಪಟ್ಟಿ’ ಕಟ್ಟುವ ಸಂಭ್ರಮ ಬಲು ಜೋರಾಗಿತ್ತು.

ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಒಟ್ಟು 18 ಸ್ಪರ್ಧಿಗಳಿದ್ದಾರೆ. ಈ ಪೈಕಿ 9 ಸ್ಪರ್ಧಿಗಳು ಜೂನಿಯರ್ಸ್ ಹಾಗೂ 9 ಮಂದಿ ಸೀನಿಯರ್ಸ್. 100 ದಿನ ಇವರು ಒಟ್ಟಿಗೆ ಇದ್ದು ಗೆಲುವಿಗಾಗಿ ಫೈಟ್ ಮಾಡಬೇಕಿದೆ. ಹೀಗಾಗಿ ಫೈಟ್ ಮಧ್ಯೆ ಸೌಹಾರ್ದತೆ ಮೂಡಿಸಲು ‘ಕೈ ಪಟ್ಟಿ’ ಕಟ್ಟುವ ಆಟ ಮಸ್ತ್ ಆಗಿ ನಡೆಯಿತು. ಬಿಗ್ ಬಾಸ್ ಶುರುವಾದ ದಿನ ನಟ ಕಿಚ್ಚ ಸುದೀಪ್ ಅವರು ವೇದಿಕೆ ಮೇಲೆ ಸ್ಪರ್ಧಿಗಳಿಗೆ ಟ್ಯಾಗ್ ಕೊಟ್ಟಿದ್ದರು. ಅದನ್ನು ಕಟ್ಟುವ ಸಮಯ ಇಂದು ಕೂಡಿ ಬಂದಿತ್ತು.

ರೂಪೇಶ್ ರಾಜಣ್ಣಗೆ ಕೈ ಪಟ್ಟಿ ಕಟ್ಟಿದ ಕಾವ್ಯಶ್ರೀ ಗೌಡ.

ಯಾರಿಗೆ ಯಾವ ಪಟ್ಟಿ?
ಬಿಗ್​ ಬಾಸ್ ಒಟಿಟಿ ಸೀಸನ್-1 ಹಿಟ್ ಆದ ಬಳಿಕ ಇದೀಗ ಬಿಗ್ ​ಬಾಸ್ ಟೆಲಿವಿಷನ್ ಶೋ ಕೂಡ ಭರ್ಜರಿಯಾಗಿ ಸಾಗುತ್ತಿದೆ. ಬಿಗ್​ ಬಾಸ್-9 ಮೂಲಕ ಪ್ರವೀಣರ ಜೊತೆ ನವೀನರೆಂಬ ಹೊಸ ಪರಿಕಲ್ಪನೆ ಕೂಡ ಶುರುವಾಗಿದ್ದು, ‘ಕೈ ಪಟ್ಟಿ’ ಕಟ್ಟುವ ಜೋಶ್ ಸುಂದರವಾಗಿತ್ತು. ಬಿಗ್ ಬಾಸ್ ಒಟಿಟಿ ಸೀಸನ್​​ನಲ್ಲಿ ಸದ್ದು ಮಾಡಿದ್ದ ರಾಕೇಶ್ ತಮ್ಮ ಬಳಿ ಇದ್ದ ‘ಚಿಂತಾಗ್ರಹಕ’ ಪಟ್ಟಿಯನ್ನು ಮಯೂರಿ ಅವರಿಗೆ ಕಟ್ಟಿದ್ದಾರೆ.

ಅನುಪಮಾ ಅವರು ‘ವಿದೂಷಕ’ ಪಟ್ಟಿಯನ್ನು ನಟ ಅರುಣ್ ಸಾಗರ್ ಅವರಿಗೆ ಕಟ್ಟಿದ್ದಾರೆ. ಕಾವ್ಯಶ್ರೀ ಗೌಡ ಕೈ ಪಟ್ಟಿಯನ್ನು ರೂಪೇಶ್ ರಾಜಣ್ಣ ಅವರಿಗೆ ಕಟ್ಟಿದ್ದರೆ, ವಿನೋದ್ ಗೊಬ್ಬರಗಾಲಾ ತಂದ ಕಿಲಾಡಿ ಪಟ್ಟಿಯನ್ನು ಪ್ರಶಾಂತ್ ಸಂಬರಗಿ ಅವರಿಗೆ ಕಟ್ಟಿದ್ದಾರೆ. ಹೀಗೆ ಒಬ್ಬರು ಮತ್ತೊಬ್ಬರಿಗೆ ಪಟ್ಟಿ ಕಟ್ಟಿದ್ದು ಇಂದಿನ ಸಂಚಿಕೆಯಲ್ಲಿ ಅದರ ಕಂಪ್ಲೀಟ್ ಡಿಟೇಲ್ಸ್ ಇದೆ.

ಒಟ್ಟಾರೆ ‘ಕೈ ಪಟ್ಟಿ’ ಕಟ್ಟುವ ಮೂಲಕ ಬಿಗ್​ ಬಾಸ್-9 ಕಳೆಗಟ್ಟಿದೆ. ಕೆಲವರ ನಡುವೆ ಈಗಾಗಲೇ ಮುನಿಸು ಶುರುವಾಗಿದ್ದು, ಇನ್ನೇನು ಮುಂಬರುವ ದಿನಗಳಲ್ಲಿ ಸೀಸನ್ ಮತ್ತಷ್ಟು ಕುತೂಹಲಕಾರಿ ಘಟ್ಟ ತಲುಪುವುದು ಪಕ್ಕಾ. ಜತೆಗೆ ಟಾಸ್ಕ್​ಗಳ ವಿಚಾರದಲ್ಲಿ ಏನೆಲ್ಲ ಫೈಟ್ ನಡೆಯಬಹುದು ಎಂಬುದನ್ನು ಕಾದುನೋಡಬೇಕಿದೆ. ಯಾರಿಗೆ ಯಾರು ಯಾವ ಪಟ್ಟಿ ಕಟ್ಟಿದ್ದಾರೆ ಎಂಬುದನ್ನು ತಿಳಿಯಲು ಇಂದಿನ ಸಂಚಿಕೆಯನ್ನು ತಪ್ಪದೇ ನೋಡಿ.

ಇದನ್ನೂ ಓದಿ: Big Boss Kannada | ಬಿಗ್​ ಬಾಸ್ ಸ್ಪರ್ಧಿಗಳ ನಡುವೆ ಕಾಳಗ ಶುರು!

Exit mobile version