Site icon Vistara News

Bigg Boss Hindi: `ಬಿಗ್‌ ಬಾಸ್‌’ ಸ್ಪರ್ಧಿ ಮೇಲೆ ಸ್ನೇಹಿತನಿಂದಲೇ ಅತ್ಯಾಚಾರ!

Big Bos contestant and television actor accused her friend of raping

ಮುಂಬೈ: ʻಬಿಗ್‌ ಬಾಸ್‌ʼ ರಿಯಾಲಿಟಿ ಶೋ ವೀಕ್ಷಕರನ್ನು (Bigg Boss Hindi) ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅದೇ ರೀತಿ ʻಬಿಗ್‌ಬಾಸ್ʼ ಹಾಗೂ ʻಬಿಗ್‌ಬಾಸ್ʼ ಸ್ಪರ್ಧಿಗಳು ಹಲವು ವಿವಾದಕ್ಕೂ ಕಾರಣವಾಗುತ್ತಲೇ ಇರುತ್ತಾರೆ. ಇದೀಗ ʻಹಿಂದಿ ಬಿಗ್‌ಬಾಸ್ 11ನೇʼ ಆವೃತ್ತಿಯ ಮಹಿಳಾ ಸ್ಪರ್ಧಿ ಮೇಲೆ ಅತ್ಯಾಚಾರವಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಮಾಜಿ “ಬಿಗ್ ಬಾಸ್” ಸ್ಪರ್ಧಿ ಮತ್ತು ಕಿರುತೆರೆ ನಟಿ ತನ್ನ ಸ್ನೇಹಿತನಿಂದಲೇ ಅತ್ಯಾಚಾರವಾಗಿದೆ ಎಂದು ಆರೋಪಿಸಿದ್ದಾರೆ. ದಕ್ಷಿಣ ದೆಹಲಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ʻʻ2023ರಲ್ಲಿ ಡಿಯೋಲಿ ರಸ್ತೆಯ ಫ್ಲಾಟ್‌ನಲ್ಲಿ ಈ ಕೃತ್ಯವನ್ನು ನನ್ನ ಸ್ನೇಹಿತ ಎಸಗಿದ್ದಾನೆ. ಕುಡಿಯಲು ಡ್ರಿಂಕ್ಸ್‌ ಕೊಟ್ಟಿದ್ದ. ನಂತರ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆʼʼ ಎಂದು ಮಹಿಳಾ ಬಿಗ್‌ ಬಾಸ್‌ ಸ್ಪರ್ಧಿ ದೂರಿನಲ್ಲಿ ತಿಳಿಸಿದ್ದಾರೆ. ʻʻಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದೇವೆ. ಇನ್ನೂ ಆರೋಪಿಯ ಅರೆಸ್ಟ್‌ ಆಗಿಲ್ಲ. ಎಫ್‌ಐಆರ್ ದಾಖಲಿಸಿದ್ದೇವೆ. ಈ ವಿಷಯದ ಬಗ್ಗೆ ತನಿಖೆ ನಡೆಸಲು ತಂಡಗಳನ್ನು ರಚಿಸಲಾಗಿದೆʼʼ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Shiva Rajkumar: ಹೇಮಂತ್‌ ರಾವ್‌ ನಿರ್ದೇಶನದ ʻಶಿವಣ್ಣʼನ ಸಿನಿಮಾ ಹೇಗಿರಲಿದೆ?

ʻʻಈ ನೋವಿನಿಂದ ಹೊರಬರಲು ಇಷ್ಟು ದಿನ ತೆಗೆದುಕೊಂಡಿದ್ದೇನೆ. ಇದೀಗ ಧೈರ್ಯ ಮಾಡಿ ದೂರು ದಾಖಲಿಸಿದ್ದೇನೆʼʼ ಎಂದು ಬಿಗ್‌ಬಾಸ್ ಮಹಿಳಾ ಸ್ಪರ್ಧಿ ಹೇಳಿದ್ದಾರೆ. ಬಿಗ್‌ಬಾಸ್ 11ನೇ ಆವೃತ್ತಿಯಲ್ಲಿ ಮಿಂಚಿದ ಈ ಮಹಿಳಾ ಸ್ಪರ್ಧಿ ವಿವಾದಗಳಿಂದಲೇ ಸುದ್ದಿಯಾಗಿದ್ದರು. ಈ ಹಿಂದೆ ಇದೇ ರೀತಿ ಕೆಲ ಆರೋಪಗಳನ್ನು ಮಾಡಿ ಸುದ್ದಿಯಾಗಿದ್ದರು ಎಂದು ವರದಿಯಾಗಿದೆ.

Exit mobile version