Site icon Vistara News

BBK SEASON 10: ʻಬಿಗ್‌ಬಾಸ್‌ʼ ಈಗ ನ್ಯೂಸ್‌ ರೂಮ್; ಜೋರಾಗಿದೆ ಡಿಸ್ಕಷನ್‌!

Bigg Boss is now a newsroom

ಬೆಂಗಳೂರು: ಭಾನುವಾರದ ‘ಸೂಪರ್‌ ಸಂಡೆ ವಿತ್‌ ಸುದೀಪ್‌’ ಎಪಿಸೋಡ್‌ನಲ್ಲಿ ಮಡಿಕೆ ಒಡೆಯುವ ‘ಅಗ್ರೆಸಿವ್‌’ ಆಕ್ಟಿವಿಟಿ ನಡೆಸಿದ್ದ ಸ್ಪರ್ಧಿಗಳ ಕಿಚ್ಚು ಇನ್ನೂ ಆರಿದಂತಿಲ್ಲ. ಬದಲಿಗೆ ಹೊಸ ವಾರದ ಮೊದಲ ದಿನ ಅದು ಜೊರಾಗಿಯೇ ಭಗಭಗಿಸುತ್ತಿದೆ! ಅದರ ಪರಿಣಾಮ ಹೇಗಿದೆ ಎಂಬುದು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ತಿಳಿಯುವಂತಿದೆ.

ಬಿಗ್‌ಬಾಸ್‌ ಮನೆಯ ಸುದ್ದಿಗಳು ನ್ಯೂಸ್‌ ಚಾನೆಲ್‌ಗಳಲ್ಲಿ ಪ್ರಸಾರವಾಗುವುದು, ಚರ್ಚೆಯಾಗುವುದನ್ನು ದಿನವೂ ನೋಡುತ್ತೇವೆ. ಆದರೆ ಈ ವಾರ ಬಿಗ್‌ಬಾಸ್‌ ಮನೆಯೊಳಗೇ ಒಂದು ಸ್ಪೆಷಲ್‌ ಇದೆ. ‘ನಮಸ್ಕಾರ, ಬಿಗ್‌ಬಾಸ್‌ ನ್ಯೂಸ್‌ಗೆ ಸ್ವಾಗತ ಸುಸ್ವಾಗತ… ಹೆಡ್‌ಲೈನ್ಸ್‌…’ ಎಂಬ ಧ್ವನಿ ಬಿಗ್‌ಬಾಸ್ ಮನೆಯೊಳಗೇ ಮೊಳಗಿದೆ.

ಅಂದಹಾಗೆ, ಇದು ಈ ವಾರ ಬಿಗ್‌ಬಾಸ್‌, ಮನೆಯ ಸದಸ್ಯರಿಗೆ ನೀಡಿದ ಹೊಸ ಟಾಸ್ಕ್‌. ಈ ಟಾಸ್ಕ್‌ನ ಅನ್ವಯ ಸ್ಪರ್ಧಿಗಳು ಬಿಗ್‌ಬಾಸ್ ಮನೆಯೊಳಗಿನ ಘಟನಾವಳಿಗಳು, ಸ್ಪರ್ಧಿಗಳ ವರ್ತನೆಗಳು, ಅವರ ಕುರಿತಾದ ಅಭಿಪ್ರಾಯಗಳನ್ನು ಸುದ್ದಿರೂಪದಲ್ಲಿ ಓದುತ್ತಾರೆ.

ಅದರ ಬಗ್ಗೆ ಪ್ಯಾನಲ್ ಡಿಸ್ಕಶನ್‌ಗಳು ನಡೆಯಲಿವೆ. ತಮ್ಮ ಹೇಳಿಕೆಗಳಿಗೆ ಸ್ಪರ್ಧಿಗಳು ಸ್ಪಷ್ಟೀಕರಣ ನೀಡುತ್ತಾರೆ. ಅದರ ವಿರುದ್ಧವಾಗಿರುವವರು ಅದಕ್ಕೆ ಕೌಂಟರ್ ಕೊಡುತ್ತಾರೆ. ಒಟ್ಟಾರೆ ಇಷ್ಟು ದಿನ ಬಿನ್‌ ಬ್ಯಾಗ್‌ಗಳಲ್ಲಿ, ಕಿಚನ್‌ನಲ್ಲಿ, ಬೆಡ್‌ರೂಮ್‌ನಲ್ಲಿ, ಜೈಲ್‌ ಬಾಗಿಲಲ್ಲಿ ನಡೆಯುತ್ತಿದ್ದ ಗುಸುಗುಸು ಪಿಸಪಿಸ ಮಾತುಗಳನ್ನು, ಚರ್ಚೆಗಳನ್ನು ಸ್ಪರ್ಧಿಗಳು ಉಳಿದ ಸ್ಪರ್ಧಿಗಳ ಎದುರಿಗೇ ಆಡಬೇಕಿದೆ. ವಾದ ವಾಗ್ವಾದ ಮಾಡಬೇಕಿದೆ.

‘ಕಾರ್ತಿಕ್ ವಿನಯ್​ಗೆ ಬಕೆಟ್​ ಹಿಡಿಯುತ್ತಾರೆ’ ಎಂದು ಸಂಗೀತಾ ಹೇಳಿದರು. ಇದಕ್ಕೆ ಕಾರ್ತಿಕ್ ಸಿಟ್ಟಾಗಿದ್ದಾರೆ. ಈ ವಾರವೂ ಆ ಬಗ್ಗೆ ಚರ್ಚೆ ಜೋರಾಗಿದೆ. ಸಂಗೀತಾ, ತನಿಷಾ ಹಾಗೂ ಕಾರ್ತಿಕ್ ಮಧ್ಯೆ ಈ ವಿಚಾರಕ್ಕೆ ಜಗಳ ಜೋರಾಗಿದೆ. ಸೈಡ್​ನಲ್ಲಿ ನಿಂತು ವಿನಯ್​ ಅವರು ಇದನ್ನು ಎಂಜಾಯ್ ಮಾಡಿದ್ದಾರೆ.

ಏನಿದು ಟಾಸ್ಕ್‌? ಇದರ ಪರಿಣಾಮಗಳೇನು? ಈ ವಾರದ ಕ್ಯಾಪ್ಟನ್ಸಿ ಟಾಸ್ಕ್‌ಗೆ ಇದುಹೇಗೆ ಪೂರಕವಾಗಲಿದೆ? ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: BBK SEASON 10: ʻಬಿಗ್‌ ಬಾಸ್‌ʼ ಕೋಳಿ ತರ ಕಾಣ್ತಾರಂತೆ; ತುಕಾಲಿ ಚಿತ್ರಕ್ಕೆ ಬಿದ್ದುಬಿದ್ದು ನಕ್ಕರು!

ಕಾರ್ತಿಕ್‌ಗೆ ‘ಬಕೆಟ್‌’ ಎಂದಿದ್ದ ಸಂಗೀತಾ!

ವೀಕೆಂಡ್‌ನಲ್ಲಿ ಒಂದು ಬೆರ್ಚಪ್ಪನನ್ನು ನಿಲ್ಲಿಸಲಾಗಿತ್ತು. ಅದರ ಮೇಲೆ ಒಂದು ಮಡಿಕೆ ಇತ್ತು. ಅದರ ಮೇಲೆ ಸದಸ್ಯರು ಒಬ್ಬರ ಫೋಟೊ ಹಾಕಿ, ಯಾವ ವಿಚಾರಕ್ಕೆ ಅವರ ಮೇಲೆ ಕೋಪ ಇದೆ ಎಂಬುದನ್ನು ಹೇಳಿ ಆಮೇಲೆ ಆ ಮಡಿಕೆಯನ್ನು ಒಡೆಯಬೇಕಿತ್ತು.

ಎಲ್ಲರೂ ಊಹಿಸುವಂತೆ ವಿನಯ್‌, ಸಂಗೀತಾ ಫೋಟೊ ಇಟ್ಟು ಮಡಿಕೆ ಒಡೆದಿದ್ದರು. ಸಂಗೀತಾ ಕೂಡ ವಿನಯ್ ಫೋಟೊ ಇಟ್ಟು ಮಡಿಕೆ ಒಡೆದಿದ್ದರು. ಆದರೆ ಈ ನಡುವೆ ಇನ್ನೊಂದು ಶಾಕಿಂಗ್ ಆಯ್ಕೆ ನಡೆದಿತ್ತು. ಅದು ಕಾರ್ತಿಕ್ ಅವರದ್ದು. ಕಾರ್ತಿಕ್ ಮಡಿಕೆಯ ಮೇಲಿಟ್ಟಿದ್ದು ಸಂಗೀತಾ ಫೋಟೊವನ್ನು!

ಸದಾಕಾಲ ನನ್ನ ಫ್ರೆಂಡ್‌ ಎಂದೇ ಹೇಳಿಕೊಂಡು ಬಂದಿದ್ದ ಕಾರ್ತಿಕ್, ಹಲವು ಸಂದರ್ಭಗಳಲ್ಲಿ ಅವರ ಪರವಾಗಿ ಗಟ್ಟಿಯಾಗಿ ನಿಂತಿದ್ದರು ಕೂಡ. ಆದರೆ ಹಿಂದಿನ ವಾರದದಲ್ಲಿ ಪ್ರತಾಪ್ ಜತೆ ಮಾತನಾಡುತ್ತ, ‘ಕಾರ್ತಿಕ್‌ ಬಕೆಟ್ ಹಿಡಿತಿದಾರೆ ಅನಿಸ್ತಿಲ್ವಾ?’ ಎಂದು ಸಂಗೀತಾ ಹೇಳಿದ್ದು ಅವರಿಗೆ ನೋವನ್ನುಂಟು ಮಾಡಿತ್ತು. ಹಾಗೆಯೇ ‘ಕಾರ್ತಿಕ್ ಅವರಿಂದ ಸಂಗೀತಾರನ್ನು ಮೈನಸ್ ಮಾಡಿದ್ರೆ ಜೀರೊ ಬರುತ್ತದೆ’ ಎಂದಿರುವುದೂ ಅವರಿಗೆ ಅಸಮಧಾನವನ್ನುಂಟು ಮಾಡಿತ್ತು.

ಇದೆಲ್ಲ ಕಾರಣ ಕೊಟ್ಟು ಸಂಗೀತಾ ಫೋಟೊ ಇಟ್ಟು ಮಡಿಕೆ ಒಡೆದಿರುವ ಕಾರ್ತಿಕ್, ‘ನನ್ನಿಂದ ಸಂಗೀತಾರನ್ನು ಮೈನಸ್ ಮಾಡಿದ್ದೇನೆ. ನಾನು ಜಿರೊ ಅನ್ನುವುದನ್ನು ಪ್ರೂವ್ ಮಾಡಲಿ’ ಎಂದು ಸವಾಲು ಹಾಕಿದ್ದರು.

ಇದಾದ ಬಳಿಕ ಇಂದಿನ ಟಾಸ್ಕ್‌ನಲ್ಲಿಯೂ ಸಂಗೀತಾ ಹಾಗೂ ಕಾರ್ತಿಕ್‌ ನಡುವೆ ಜಗಳ ಜೋರಾಗುತ್ತಿದೆ. ತನಿಷಾ ಕೂಡ ಸಂಗೀತಾಗೆ ತಿರುಗೇಟು ಕೊಟ್ಟಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version