Site icon Vistara News

BBK SEASON 10: ಎಕ್ಕ, ರಾಜ, ರಾಣಿ ನನ್ನ ಕೈಯೊಳಗೆ ಅಂದ್ರು ಸ್ಪರ್ಧಿಗಳು; ಎಲ್ಲರದ್ದೂ ಹೊಸ ವರಸೆ!

Vinay and Drone prathap bbk 10

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10 (BBK SEASON 10) ಕೆಲವು ದಿಗಳಿಂದ ಸಾಕಷ್ಟು ಚರ್ಚೆಯಲ್ಲಿದೆ. ತನಿಷಾ ಅವರ ಮೇಲೆ ಕೇಸ್‌ ದಾಖಲಾಗಿದ್ದರೆ, ಅತ್ತ ವರ್ತೂರ್‌ ಅವರ ,ಮದುವೆ ವಿಡಿಯೊಗಳು ವೈರಲ್‌ ಆಗುತ್ತಿವೆ. ಆದರೆ ಸ್ಪರ್ಧಿಗಳು ಮಾತ್ರ ಇದ್ಯಾವುದೂ ಅರಿವಿಲ್ಲದೇ ಟಾಸ್ಕ್‌ಗಳನ್ನು ನಿಭಾಯಿಸುತ್ತಿದ್ದಾರೆ. ಬಿಗ್‌ ಬಾಸ್‌ ಕಳೆದ ಸಂಚಿಕೆಯಲ್ಲಿ ರಾಜ, ರಾಣಿ, ಜೋಕರ್‌, ಎಕ್ಕ ಯಾರು ಹಾಗೂ ಸೂಕ್ತ ಕಾರಣಗಳನ್ನು ನೀಡಬೇಕು ಎಂದು ಆದೇಶ ನೀಡಿತ್ತು. ಅದರಂತೆ ಟಾಸ್ಕ್‌ಗಳು ನಡೆದವು.

ಜೋಕರ್‌ವನ್ನು ಸ್ಪರ್ಧಿಗಳು ಹೆಚ್ಚಾಗಿ ಭಾಗ್ಯಶ್ರೀ ಅವರಿಗೆ ನೀಡಿದರು. ಮಾತ್ರವಲ್ಲ ಕೆಲವೊಮ್ಮೆ ಏನೋ ಮಾತನಾಡಲು ಹೋಗಿ ಅಪಹಾಸ್ಯಕ್ಕೆ ಗುರಿಯಾಗುತ್ತಾರೆ ಎಂದು ಹಲವರು ಹೇಳಿದರು. ಅವರದ್ದೇ ಆದ ಅಟವನ್ನು ಸರಿಯಾಗಿ ಆಡಲ್ಲ ಎಂದರು ಸದಸ್ಯರು. ಭಾಗ್ಯಶ್ರೀ ಅವರು ಈ ಬಗ್ಗೆ ಮಾತನಾಡಿ ʻʻಏನೋ ಒಂದು ಆಟ ಆಡ್ತೀನಿ, ಏನೋ ಮಾತಾಡ್ತೀನಿ, ನಗೆಪಾಟಲಾಗ್ತೀನಿ ಎಂದು ಕೆಲವರು ಹೇಳಿದರು. ಆದರೆ ನಾನು ಇದನ್ನು ಪಾಸಿಟಿವ್‌ ಆಗಿ ರಿಸೀವ್‌ ಮಾಡ್ತೀನಿʼʼಎಂದರು.

ಮನೆಯ ರಾಣಿಯನ್ನಾಗಿ ತನಿಷಾಗೆ ಸ್ಪರ್ಧಿಗಳು ವೋಟ್‌ ಮಾಡಿದರು. ಅವರು ಮನೆಯಿಲ್ಲಿ ಅಡುಗೆ ಮಾಡುವದರಿಂದ ಹಿಡಿದು, ಟಾಸ್ಕ್‌ಗಳಲ್ಲಾಗಲಿ ನಿಭಾಯಿಸುವ ರೀತಿಗೆ ಸದಸ್ಯರು ರಾಣಿ ಪಟ್ಟ ಕೊಟ್ಟರು. ಇದಾದ ಬಳಿಕ ತನಿಷಾ ಕೂಡ ಸಂತಸ ಹೊರಹಾಕಿದರು. ತನಿಷಾ ಮಾತನಾಡಿʻ ʻʻನಾನು ಜೋರಾಗಿ ಮಾತಾಡ್ತೀನಿ ಎಂದು ಕೆಲವರಿಗೆ ಸಮಸ್ಯೆ ಇದೆ ಎಂದು ಅಂದುಕೊಂಡಿದ್ದೆ. ಅದು ಇದ್ರು ಪರವಾಗಿಲ್ಲ ಎಂದು ನನ್ನ ಕೆಲಸ ಮೆಚ್ಚಿ ಕೊಟ್ಟಿದ್ದೀರಿ. ನನಗೆ ಖುಷಿ ಆಗಿದೆʼʼಎಂದರು. ವಿಶೇಷ ಅಂದರೆ ವಿನಯ್‌ ಹಾಗೂ ನಮ್ರತಾ ಅವರೂ ಕೂಡ ರಾಣಿ ಪಟ್ಟವನ್ನು ತನಿಷಾಗೆ ನೀಡಿದ್ದರು. ಗುಲಾಮ ಯಾರು ಎಂದು ಆಯ್ಕೆ ಮಾಡುವಾಗ ಮನೆಯ ಹಲವು ಸದಸ್ಯರು ಆಯ್ಕೆ ಮಾಡಿದ್ದು ಇಶಾನಿಯನ್ನು. ವಿನಯ್, ಮೈಖಲ್ ಸಹ ಇಶಾನಿಯನ್ನೇ ಗುಲಾಮ ಎಂದರು. ಮಾತ್ರವಲ್ಲ ಇಶಾನಿ ತುಂಬಾ ಸೇಫ್‌ ಜೋನ್‌ನಲ್ಲಿ ಆಡ್ತಾರೆ ಎಂದು ಕಾರಣವನ್ನು ತಿಳಿಸಿದರು. ಇಶಾನಿ ಸಹ ಅದನ್ನು ಖುಷಿಯಿಂದಲೇ ಸ್ವೀಕರಿಸಿದರು.

ಇದನ್ನೂ ಓದಿ: BBK Season 10: ಆಚೆ ಹೋಗಲ್ಲ ಎಂದು ಡ್ರೋನ್ ಪ್ರತಾಪ್‌ ಜತೆ ವರ್ತೂರ್ ಗೇಮ್ ಪ್ಲ್ಯಾನ್!

ಬಳಿಕ ರಾಜನ ಆಯ್ಕೆ ನಡೆಯಿತು. ಮನೆಯ ಹಲವು ಸದಸ್ಯರು ವಿನಯ್​ರ ಹೆಸರನ್ನು ಸೂಚಿಸಿದರು. ಕೆಲವರು ಕಾರ್ತಿಕ್ ಹೆಸರನ್ನು ಸಹ ಹೇಳಿದರು. ಅಂತಿಮವಾಗಿ ವಿನಯ್ ಅವರೇ ಮನೆಯ ರಾಜ ಎನಿಸಿಕೊಂಡರು. ವಿನಯ್‌ ಈ ಬಗ್ಗೆ ಮಾತನಾಡಿ ʻʻಈ ಪಟ್ಟವನ್ನು ರಿಸೀವ್‌ ಮಅಡಿಕೊಳ್ಳಲು ಸ್ವಲ್ಪ ಭಯವೇ. ಟಾರ್ಗೆಟ್‌ ಬೇಗ ಆಗ್ತೀವಿ. ಇಲ್ಲಿ ಎಲ್ಲರಿಗೂ ಒಂದು ಇದ್ದೇ ಇರುತ್ತೆ. ನನ್ಯಾಕೆ ರಾಜ ಅಗಿಲ್ಲ ಎಂದು. ಅದಕ್ಕೆ ವರ್ಕೌಟ್‌ ಮಾಡ್ತಾರೆ. ಒಬ್ಬ ರಾಜನ್ನ ಬೀಳಿಸದರೆ ಮಾತ್ರ ಇನ್ನೊಬ್ಬ ರಾಜ ಆಗಲು ಸಾಧ್ಯ. ಉಳಿಸಿಕೊಳ್ಳಲು ಪ್ರಯತ್ನ ಪಡುವೆʼʼ ಎಂದರು.

ಕೊನೆಯಲ್ಲಿ ಎಕ್ಕ ಯಾರೆಂದು ಆಯ್ಕೆ ಮಾಡಲಾಯ್ತು. ಮನೆಯ ಬಹುತೇಕ ಸದಸ್ಯರು ಸ್ನೇಹಿತ್ ಅನ್ನು ಎಕ್ಕ ಎಂದು ಆರಿಸಿದರು. ಸ್ನೇಹಿತ್ ಹೆಸರನ್ನೂ ಸಹ ಕೆಲವರು ಹೇಳಿದರು. ಆದರೆ ಅಂತಿಮವಾಗಿ ಪ್ರತಾಪ್ ಅವರೇ ಎಕ್ಕ ಆದರು. ಪ್ರತಾಪ್‌ ಈ ಬಗ್ಗೆ ಮಾತನಾಡಿ ʻʻನನ್ನ ಕಣ್ಣಿಗೆ ಯಾವುದು ನ್ಯಾಯ ಸಮ್ಮತವೋ ಅದನ್ನು ನಾನು ಮಾತಾಡ್ತೇನೆ. ಒಟ್ಟಿನಲ್ಲಿ ಈ ಮನೆಯಲ್ಲಿ ಯಾರು ಕೆಳಗೆ ಇರುತ್ತಾರೆ ಅವರು ಮೇಲೆ ಬರಬೇಕು. ಸರಿ ಸಮಾನರಾಗಿ ಆಡಬೇಕು. ಅವರು ಧ್ವನಿ ಎತ್ತಬೇಕು. ಇನ್ನು ಮುಂದೆ ಡ್ರೋನ್‌ ಪ್ರತಾಪ್‌ ರಿಯಲ್‌ ಆಟ ನೋಡ್ತೀರಿʼʼಎಂದು ಹೇಳಿ ಹೋದರು.

Exit mobile version