Site icon Vistara News

Bigg Boss Kannada: ಬಿಗ್​ಬಾಸ್ ಕನ್ನಡ ಹತ್ತನೇ ಸೀಸನ್ ಆಟಕ್ಕೆ ದಿನಾಂಕ ಫಿಕ್ಸ್‌!

Bigg boss Kannada

ಬೆಂಗಳೂರು: ಜನಪ್ರಿಯ ಟಿವಿ ರಿಯಾಲಿಟಿ ಶೋ ಬಿಗ್​ಬಾಸ್​ ಕನ್ನಡ (Bigg Boss Kannada) ಪ್ರಸಾರದ ದಿನಾಂಕ ಪ್ರಕಟಗೊಂಡಿದೆ. ಕನ್ನಡ ಬಿಗ್​ಬಾಸ್ 10ನೇ ಸೀಸನ್ ಪ್ರಸಾರ ಅಕ್ಟೋಬರ್ 08 ರಿಂದ ಆರಂಭವಾಗಲಿದೆ. ಈ ಹಿಂದೆ ಸೆಪ್ಟೆಂಬರ್ 14ರಂದು ಬಿಡುಗಡೆ ಮಾಡಲಾಗಿದ್ದ ಪ್ರೋಮೊವನ್ನೇ ಮತ್ತೊಮ್ಮೆ ಬಿಡುಗಡೆ ಮಾಡಲಾಗಿದ್ದು, ಪ್ರೋಮೊ ಕೊನೆಯಲ್ಲಿ ಅಕ್ಟೋಬರ್ 8ರಿಂದ ಪ್ರಸಾರ ಆರಂಭವಾಗಲಿದೆ ಎಂದು ಸೇರಿಸಲಾಗಿದೆ. ‘ಊರ ಹಬ್ಬಕ್ಕೆ ಇಲ್ಲಿದೆ ರೀಸನ್; ಶುರುವಾಗ್ತಿದೆ ಹ್ಯಾಪಿ ‘ಬಿಗ್​ಬಾಸ್ ಕನ್ನಡ’ ಹತ್ತನೇ ಸೀಸನ್ ಅಕ್ಟೋಬರ್ 8 ರಿಂದ” ಎಂದು ಮಾಹಿತಿಯನ್ನು ಪ್ರೋಮೊ ಜತೆಗೆ ಕಲರ್ಸ್‌ ಕನ್ನಡ ಹಂಚಿಕೊಂಡಿದೆ.

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಕಟವಾಗುವ ಮೋಸ್ಟ್​ ಪಾಪ್ಯುಲರ್​ ಕಾರ್ಯಕ್ರಮ ಈ ಬಾರಿ 10ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಕೌತುಕ ಮೂಡಿಸಿದೆ. ಈ ಕುತೂಹಲದ ನಡುವೆಯೇ ಕಲರ್ಸ್​ ಕನ್ನಡ ಪ್ರೊಮೊ ಬಿಡುಗಡೆ ಮಾಡಿತ್ತು. ‘ಊರ ಹಬ್ಬಕ್ಕೆ ಇಲ್ಲಿದೆ ರೀಸನ್; ಶುರುವಾಗ್ತಿದೆ HAPPY ‘BIGG BOSS KANNADA’ ಹತ್ತನೇ ಸೀಸನ್!’ ಎಂದು ಬರೆದು ಸೋಶಿಯಲ್​ ಮೀಡಿಯಾ ಫ್ಲ್ಯಾಟ್​ಫಾರ್ಮ್​ಗಳಲ್ಲಿ ಪೋಸ್ಟ್​ ಹಾಕಿತ್ತು. ಸೆಪ್ಟೆಂಬರ್ ಆರಂಭದಲ್ಲಿ ಒಂದು ಪ್ರೋಮೊ ಬಿಡುಗಡೆಗೊಂಡು ಕನ್ನಡಿಗರ ಗಮನ ಸೆಳೆದಿತ್ತು.

ಈ ಹಿಂದಿನ ಬಾರಿಯಂತೆ ಈ ಬಾರಿಯೂ ಜನಪ್ರಿಯ ಟಿವಿ, ಸಿನಿಮಾ ತಾರೆಯರ ಜತೆಗೆ ಸೋಷಿಯಲ್ ಮೀಡಿಯಾ ಸೆಲೆಬ್ರಿಟಿಗಳು ಸಹ ಬಿಗ್​ಬಾಸ್ ಮನೆ ಸೇರಲಿದ್ದಾರೆ. ಇದು ಹತ್ತನೇ ಸೀಸನ್ ಆಗಿರುವ ಕಾರಣ ಭಿನ್ನವಾಗಿ, ಅದ್ಧೂರಿಯಾಗಿ ಬಿಗ್​ಬಾಸ್ ರಿಯಾಲಿಟಿ ಶೋ ಇರಲಿದೆ ಎನ್ನಲಾಗುತ್ತಿದೆ. ಸಾಮಾನ್ಯರೂ ಈ ಬಾರಿ ಬಿಗ್​ಬಾಸ್ ಮನೆ ಸೇರುವ ಸಾಧ್ಯತೆ ಇದೆ.

ಇದನ್ನೂ ಓದಿ: Bigg Boss Kannada : ಬಿಗ್​ ಬಾಸ್​ 10ನೇ ಸೀಸನ್​ನ ಆಕರ್ಷಕ ಪ್ರೋಮೊ ರಿಲೀಸ್, ವಿಡಿಯೊದಲ್ಲಿದೆ ಹೊಸ ಗುಟ್ಟು

ಕಳೆದ ಬಾರಿಯ ಸೀಸನ್ ನಲ್ಲಿ OTTಯ 5 ಸ್ಪರ್ಧಿಗಳೊಂದಿಗೆ 18 ಸ್ಪರ್ಧಿಗಳು ಮನೆಯೊಳಗಿದ್ದರೆ ಆದರೆ ಈ ಬಾರಿಯ ಸೀಸನ್‌ನಲ್ಲಿ ಅದೆಷ್ಟು ಜನ ಸ್ಪರ್ಧಿಸಲಿದ್ದಾರೆ ಎಂದು ಇನ್ನೂ ಕೂಡ ತಿಳಿದಿಲ್ಲ .ಆದರೆ ಈ ಬಾರಿಯ ಬಿಗ್ ಬಾಸ್ ನ ಮೊದಲ ಪ್ರೋಮೊದಲ್ಲಿ ಸುದೀಪ್ ಅವರು ಕಂಡುಬಂದಿಲ್ಲ, ಬದಲಿಗೆ ಬೆಂಗಳೂರು ನಗರದ ಹಲವು ಭಾಗಗಳನ್ನು ಹಾಗೂ ಸಿಸಿಟಿವಿಗಳನ್ನು ತೋರಿಸಲಾಗಿದೆ. ಪ್ರೋಮೊ ನೋಡಿದರೆ ಈ ಬಾರಿಯ ಸೀಸನ್ ಬೆಂಗಳೂರಿನ ಹಲವು ಭಾಗಗಳಲ್ಲಿ ಚಿತ್ರೀಕರಿಸಲಾಗಿದೆ ಎನ್ನುವಂತೆ ಭಾಸವಾಗುತ್ತದೆ.

ಮನೆಯೊಳಗಿನ ಕ್ಯಾಮೆರಾದ ಬದಲಿಗೆ ಪ್ರೋಮೊನಲ್ಲಿ ರಸ್ತೆಯಲ್ಲಿನ ಕ್ಯಾಮೆರಾಗಳನ್ನು ತೋರಿಸಲಾಗಿದೆ. ರಸ್ತೆಯಲ್ಲಿ, ಕಟ್ಟಡಗಳಿಗೆ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳನ್ನು ತೋರಿಸಿ, ರಸ್ತೆಯಲ್ಲಿ ಓಡಾಡುವ ವ್ಯಕ್ತಿಗಳ ದೃಶ್ಯಗಳನ್ನು ಸೆರೆ ಹಿಡಿದು ಪ್ರೋಮೊದಲ್ಲಿ ತೋರಿಸಲಾಗಿದೆ. ಈ ಮೂಲಕ ನೋಡುಗರಿಗೆ ಭಾರಿ ಕುತೂಹಲ ಹುಟ್ಟುಹಾಕಿದೆ.ಇನ್ನು ಈ ಬಾರಿ ಯಾವ ಯಾವ ಸ್ಪರ್ಧಿಗಳು ಬಿಗ್​ಬಾಸ್ ಮನೆ ಸೇರಲಿದ್ದಾರೆ ಎಂಬ ಕುತೂಹಲ ನೋಡುಗರಿಗೆ ಹೆಚ್ಚಾಗಿದೆ.

Exit mobile version