Site icon Vistara News

Bigg Boss Kannada | ಒಟಿಟಿ ಸೀಸನ್‍‍ನ ಸೂಪರ್‌ ಹಿಟ್‌ ಟಾಸ್ಕ್‌ ನೀಡಿದ ಬಿಗ್‌ ಬಾಸ್‌: ಗಮ್ಮತ್ತು ಮಾಡಿದ್ರು ಸ್ಪರ್ಧಿಗಳು!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) 26ನೇ ದಿನ ಹೆಚ್ಚಾಗಿ ಸ್ಪರ್ಧಿಗಳಿಗೆ ಟಾಸ್ಕ್‌ಅನ್ನು ಬಿಗ್‌ ಬಾಸ್‌ ನೀಡಿದ್ದರು. ಅದರಲ್ಲಿ ʻಕಾಮನಬಿಲ್ಲುʼ ಮತ್ತು ʻಧಮ್‌ ಪವರ್‌ʼ ತಂಡ ಮುಖಾಮುಖಿಯಾಗಿ ಆಡಿ ಟಾಸ್ಕ್‌ ನಿಭಾಯಿಸಿದ್ದಾರೆ.

ಬಿಗ್‌ ಬಾಸ್‌ ಸೀಸನ್‌ ೯ ರ 25ನೇ ದಿನ ರಾತ್ರಿ 11.40ರಂದು ಬಿಗ್‌ ಬಾಸ್‌ ಒಂದು ಟಾಸ್ಕ್‌ ನೀಡಿತ್ತು. ಅದುವೇ ‘ಜೋಪಾನ ರಾತ್ರಿ ಆಯ್ತು. ಜಾಗರಣೆ ಖಾತ್ರಿ ಆಯ್ತು’. ಇದರ ಅನುಸಾರ ಎರಡೂ ತಂಡದ ಎಲ್ಲ ಸದಸ್ಯರು ಒಂದೊಂದು ದೀಪಗಳಿರುವ ಕಂಪದ ಪಕ್ಕದಲ್ಲಿ ಅದರಲ್ಲಿರುವ ಸ್ವಿಚ್ ಒತ್ತಿ ಹಿಡಿಯಬೇಕು. ದೀರ್ಘ ಕಾಲದ ಸ್ವಿಚ್‌ ಒತ್ತಿ ಹಿಡಿಯುವ ಸದಸ್ಯರ ತಂಡ ಈ ಟಾಸ್ಕ್‌ ಗೆಲ್ಲುತ್ತದೆ. ಆದರೆ ಯಾವ ತಂಡ ಗೆದ್ದಿತು ಎಂಬುದು ಬಿಗ್‌ ಬಾಸ್‌ ಅನೌನ್ಸ್‌ ಮಾಡಿಲ್ಲ. ಈ ಟಾಸ್ಕ್‌ ವೇಳೆ ಅರುಣ್‌ ಸಾಗರ್‌ ಮಜವಾಗಿ ಕಾಫಿ ಕೊಡುವಂತೆ ತಮಾಷೆ ಮಾಡಿ ಸದಸ್ಯರಿಗೆ ಖುಷಿ ತರಿಸಿದರು.

ಇದನ್ನೂ ಓದಿ | Bigg Boss Kannada | ಕ್ಯಾಪ್ಟನ್‌ ದೀಪಿಕಾ ದಾಸ್‌ ವಿರುದ್ಧ ತಿರುಗಿ ಬಿದ್ದ ಕಾಮನ ಬಿಲ್ಲು ತಂಡ: ಇಲ್ಲಿವೆ ಫೋಟೊಗಳು!

ಇನ್ನೊಂದು ಟಾಸ್ಕ್‌ ಬಾಲ್‌ ಮತ್ತು ಸ್ಟ್ಯಾಂಡ್‌ ಟಾಸ್ಕ್‌ನಲ್ಲಿ ʼಧಮ್‌ ಪವರ್‌ ಟೀಮ್‌ʼ ವಿಜೇತರಾಗಿ ಹೊರಹೊಮ್ಮಿತು. ಬಾಲ್‌ ಟಾಸ್ಕ್‌ನಲ್ಲಿ ಸೋತಿದ್ದಕ್ಕೆ ಅಮೂಲ್ಯ ಅವರು ದಿವ್ಯಾ ಉರುಡುಗ ಜತೆ ಬೇಸರ ವ್ಯಕ್ತ ಪಡಿಸಿದರು.

26ನೇ ದಿನ ಬಿಗ್‌ ಬಾಸ್‌ ಒಟಿಟಿಯಲ್ಲಿ ಜನಪ್ರಿಯ ಟಾಸ್ಕ್‌ ಆದ ʻಚಿತ್ರ ವಿಚಿತ್ರʼ ಟಾಸ್ಕ್‌ ನೀಡಲಾಗಿತ್ತು. ಇದರ ಅನುಸಾರ ಪ್ರತಿ ತಂಡದ ಸದಸ್ಯರು ಸಾಲಾಗಿ ನಿಂತು ತಮ್ಮ ಮುಂದೆ ಇದ್ದ ಸದಸ್ಯ ಬಿಡಿಸಿದ ಚಿತ್ರವನ್ನು ನೋಡಿ, ತಮ್ಮ ಹಿಂದೆ ಇರುವ ಸದಸ್ಯನಿಗೆ ತೋರಿಸಬೇಕು.

ಸಾಲಿನ ಕೊನೆಯಲ್ಲಿ ಇರುವ ಸದಸ್ಯ ಚಿತ್ರ ಯಾವುದೆಂದು ಊಹಿಸಿಬೇಕು. ಪ್ರತಿ ಸದಸ್ಯ ಚಿತ್ರ ಬಿಡಿಸಿ ತನ್ನ ಮುಂದೆ ಇರುವ ಸದಸ್ಯನಿಗೆ ತೋರಿಸಲು 15 ಸೆಕೆಂಡುಗಳ ಕಾಲಾವಕಾಶ ಇರುತ್ತದೆ.

ಅತಿ ಹೆಚ್ಚು ಚಿತ್ರಗಳನ್ನು ಊಹಿಸುವ ತಂಡ ಗೆಲ್ಲುತ್ತದೆ. ಆದರೆ ಈ ಟಾಸ್ಕ್‌ನಲ್ಲಿ ʻಕಾಮನ ಬಿಲ್ಲುʼ ತಂಡ ಮತ್ತು ʻಧಮ್‌ ಪವರ್‌ʼ ತಂಡ ಸಮ ಅಂಕ ಗಳಿಸಿದ ಕಾರಣ ಟೈ ಆಯಿತು.

ಇದನ್ನೂ ಓದಿ |Bigg Boss Kannada | ʻನೀವು ಗುದ್ದಾಡೋದಾದ್ರೆ ಆನೆ ಜತೆ ಗುದ್ದಾಡಿʼ: ರೂಪೇಶ್‌ ರಾಜಣ್ಣ-ದೀಪಿಕಾ ವಾರ್‌!

Exit mobile version