Site icon Vistara News

Bigg Boss Kannada | ತಲೆ ಸುತ್ತು ಬರಿಸೋ ಗಿರಗಿರ ಗಾಯನ ಸ್ಪರ್ಧೆಯಲ್ಲಿ ಸ್ಪರ್ಧಿಗಳ ಮಜಾ: ನಾಮಿನೇಟ್‌ ಆದವರು ಯಾರು?

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) ಏಳನೇ ವಾರ ರೂಪೇಶ್‌ ರಾಜಣ್ಣ, ಅನುಪಮಾ ಗೌಡ, ದೀಪಿಕಾ ದಾಸ್‌, ದಿವ್ಯಾ ಉರುಡುಗ ಹಾಗೂ ಆರ್ಯವರ್ಧನ್‌ ನಾಮಿನೇಟ್‌ ಆಗಿದ್ದಾರೆ. ಕ್ಯಾಪ್ಟನ್‌ ಪ್ರಶಾಂತ್‌ ಸಂಬರಗಿ ಅವರು ನೇರವಾಗಿ ಅಮೂಲ್ಯ ಅವರನ್ನು ನಾಮಿನೇಟ್‌ ಮಾಡಿದ್ದಾರೆ. ಈ ವಾರ ಸಂಗೀತ ಸಂಜೆ ಕಾರ್ಯಕ್ರಮವನ್ನು ಬಿಗ್‌ ಬಾಸ್‌ ಏರ್ಪಡಿಸಿದ್ದು ಸ್ಪರ್ಧಿಗಳು ನೋಡುಗರನ್ನು ರಂಜಿಸಿದರು.

ಬಿಗ್‌ ಬಾಸ್‌ ಪನಿಷ್‌ಮೆಂಟ್‌ಗೆ ಆರ್ಯವರ್ಧನ್‌ ಕಣ್ಣೀರು!
ಬಿಗ್‌ ಬಾಸ್‌ ಈ ವಾರ ಮನೆಯವರಿಗೆ ಪನಿಷ್‌ಮೆಂಟ್‌ ನೀಡಿದೆ. ಬಿಗ್‌ ಬಾಸ್‌ ನಿಯಮದಂತೆ ಜೈಲು ಯಾರು ಸೇರುತ್ತಾರೋ ಅವರು ಮಾತ್ರ ತರಕಾರಿ ಹೆಚ್ಚಬೇಕಿತ್ತು. ಆದರೆ ಅನುಪಮಾ ಜೈಲು ಸೇರಿದ್ದಾಗ ಆರ್ಯವರ್ಧನ್‌ ಅವರು ಈರುಳ್ಳಿ, ಹಸಿ ಮೆಣಸಿನ ಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಹೆಚ್ಚಿದ್ದಕ್ಕಾಗಿ ಬಿಗ್‌ ಬಾಸ್‌ ಇದಿಷ್ಟು ತರಕಾರಿಗಳನ್ನು ವಾಪಸ್ಸು ಪಡೆದುಕೊಂಡಿದ್ದಾರೆ. ಈ ಬಗ್ಗೆ ಆರ್ಯವರ್ಧನ್‌ ಮನೆಯವರ ಮುಂದೆ ಕಣ್ಣೀರು ಹಾಕಿದ್ದಾರೆ. ಈ ಮಧ್ಯೆ ರೂಪೇಶ್‌ ರಾಜಣ್ಣ ಮತ್ತು ಅರುಣ್‌ ಸಾಗರ್‌ ಮಧ್ಯೆಯೂ ವಾದ ನಡೆಯಿತು.

ಇದನ್ನೂ ಓದಿ | Bigg Boss Kannada | ಸಾನ್ಯ ಮಡಿಲಲ್ಲಿ ತಲೆಯಿಟ್ಟು ಕಣ್ಣೀರು ಹಾಕಿದ ರೂಪೇಶ್‌ ಶೆಟ್ಟಿ!

ಲಕ್ಷುರಿ ಬಜೆಟ್‌ನಲ್ಲಿ ಸ್ಪರ್ಧಿಗಳ ಮಸ್ತಿ!
ಈ ವಾರ ಲಕ್ಷುರಿ ವಸ್ತುಗಳನ್ನು ಪಡೆಯಲು ಬಿಗ್‌ ಬಾಸ್‌ ಒಂದು ಟಾಸ್ಕ್‌ ನೀಡಿತ್ತು. ಗಾರ್ಡನ್‌ ಏರಿಯಾದಲ್ಲಿ ಒಂದು ವೇದಿಕೆ ನಿರ್ಮಿಸಿ ಸುತ್ತಲೂ ಚೌಕ ಮಾಡಲಾಗಿತ್ತು. ಪ್ರತಿ ಚೌಕ ಒಂದೊಂದು ಲಕ್ಷುರಿ ವಸ್ತು ಪ್ರತಿನಿಧಿಸುತ್ತದೆ. ಪ್ರತಿ ಬಾರಿ ಕ್ಯಾಪ್ಟನ್‌ ಪ್ರಶಾಂತ್‌ ದಾಳವನ್ನು ಉರುಳಿಸಿದಾಗ ಬೀಳುವ ಸಂಖ್ಯೆ ಅನುಸಾರ ಆರಂಭಿಕ ಸ್ಥಾನದಲ್ಲಿ ನಿಂತಿರುವ ಸದಸ್ಯ ಚೌಕವನ್ನು ದಾಟಿ ಅಂತಿಮ ಸ್ಥಾನಕ್ಕೆ ತಲುಪಬೇಕು. ಹೀಗೆ ಪ್ರತಿ ಬಾರಿ ತಾನು ನಿಲ್ಲುವ ಸ್ಥಳದಿಂದ ಆಯಾ ವಸ್ತುವನ್ನು ಬುಟ್ಟಿಯಲ್ಲಿ ಹಾಕಿಕೊಳ್ಳಬೇಕು. ಪ್ರತಿ ಸದಸ್ಯನಿಗೆ 12 ಪ್ರಯತ್ನಗಳಿರುತ್ತವೆ.ಆಡಿದ ಸದಸ್ಯ ಅಂತಿಮ ಸ್ಥಾನ ತಲುಪಿದರೆ ಮಾತ್ರ ವಸ್ತುಗಳು ಸಿಗುತ್ತವೆ. ದಿವ್ಯಾ ಉರುಡುಗ, ರೂಪೇಶ್‌ ಶೆಟ್ಟಿ ಮತ್ತು ಆರ್ಯವರ್ಧನ್‌ ಆಡಿದ್ದು, ಮೂವರು ಅಂತಿಮ ಸ್ಥಾನ ತಲುಪುವುದರ ಮೂಲಕ ವಸ್ತುಗಳನ್ನು ತಮ್ಮದಾಗಿಸಿಕೊಂಡರು.

ತಲೆ ಸುತ್ತು ಬರಿಸೋ ಗಿರಗಿರ ಗಾಯನ ಸ್ಪರ್ಧೆ!
ಮನೆಯ ಸದಸ್ಯರಿಗೆ ಸಂಗೀತ ಸಂಜೆವೊಂದನ್ನು ಬಿಗ್‌ ಬಾಸ್‌ ಆಯೋಜಿಸಿದ್ದರು. ಇದರ ಅನುಸಾರ ಸದಸ್ಯರು ಬೋರ್ಡ್‌ನಲ್ಲಿರುವ ಹಾಡುಗಳ ಪೈಕಿ ಒಂದನ್ನು ಆರಿಸಿ, ತಿರುಗುವ ವೇದಿಕೆಯಲ್ಲಿ ಹಾಡಬೇಕು. ತಿರುಗುವವರೆಗೂ ಹಾಡುತ್ತಲೇ ಇರಬೇಕು. ಬಿಗ್‌ ಬಾಸ್‌ ಸ್ಪರ್ಧಿಗಳು ಹಾಡಿದ್ದು ನೋಡುಗರನ್ನು ರಂಜಿಸಿದರು.

ಇದನ್ನೂ ಓದಿ | Bigg Boss Kannada | ʼಬದಲಾಗಲು ಸಾಧ್ಯವೇ ಇಲ್ಲ ರೂಪಿ’: ಸಾನ್ಯ ಅಯ್ಯರ್‌ ಭಾವುಕ ಪೋಸ್ಟ್‌ ವೈರಲ್‌!

Exit mobile version