ಬೆಂಗಳೂರು: ಬಿಗ್ ಬಾಸ್ ಸೀಸನ್ 9ಕ್ಕೆ (Bigg Boss Kannada) ಮೂರನೇ ಸ್ಪರ್ಧಿಯಾಗಿ ಬಿಗ್ ಬಾಸ್ ಹಳೆಯ ಸ್ಪರ್ಧಿ ದೀಪಿಕಾ ದಾಸ್ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಮನೆಯನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೆ’ ಎಂದು ಖುಷಿಯನ್ನು ಹಂಚಿಕೊಂಡಿದ್ದಾರೆ.
ಜೀ ಕನ್ನಡದ ‘ನಾಗಿಣಿ’ ಧಾರಾವಾಹಿ ಮೂಲಕ ಮನೆಮಾತಾಗಿದ್ದರು ದೀಪಿಕಾ ದಾಸ್. ಬಿಗ್ ಬಾಸ್‌ನಲ್ಲಿ ಶೈನ್ ಶೆಟ್ಟಿ ಹಾಗೂ ದೀಪಿಕಾ ದಾಸ್ ನಡುವಿನ ಫ್ರೆಂಡ್‌ಶಿಪ್ ಹೈಲೈಟ್ ಆಗಿತ್ತು. ಕಿರುತೆರೆ ಮಾತ್ರವಲ್ಲದೆ ಕೆಲವು ಸಿನಿಮಾಗಳಲ್ಲೂ ದೀಪಿಕಾ ದಾಸ್ ನಟಿಸುತ್ತಿದ್ದಾರೆ. ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ 13 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಆಗಾಗ ಪೋಟೋಶೂಟ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿರುತ್ತಾರೆ. ಸದ್ಯ ಕಿರುತೆರೆ ಮತ್ತು ಬೆಳ್ಳಿ ತೆರೆಯಿಂದ ದೂರ ಇರುವ ದೀಪಿಕಾ ದಾಸ್ ತಮ್ಮದೇ ಹೆಸರಿನ ಬ್ರ್ಯಾಂಡ್‌ವೊಂದನ್ನು ಆರಂಭಿಸಿ ವಸ್ತ್ರ ವಿನ್ಯಾಸ ಮಾಡುತ್ತಿದ್ದಾರೆ.
ನಾಲ್ಕನೇ ಸ್ಪರ್ಧಿಯಾಗಿ ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ವಿಮರ್ಶೆಗೆ ಸಂಬಂಧಪಟ್ಟಂತೆ ರೈಮಿಂಗ್ ಸಾಲುಗಳನ್ನು ಹೇಳುವ ಮೂಲಕ ಹಾಗೂ ವಿಶೇಷ ಮ್ಯಾನರಿಸಂ ಮೂಲಕ ಸೆನ್ಸೇಷನ್ ಸೃಷ್ಟಿ ಮಾಡಿದ್ದ ನವಾಜ್ ಎಂಟ್ರಿ ಆಗಿದ್ದಾರೆ. ಕನ್ನಡ ಸಿನಿಮಾ ಪ್ರಚಾರಕ್ಕೆ ನವಾಜ್ ಹೆಸರುವಾಸಿ.
ಈಗಾಗಲೇ ಬಿಗ್ ಬಾಸ್ ಸೀಸನ್ 9ಕ್ಕೆ ಸೀಸನ್ 1ರ ರನ್ನರ್‌ಅಪ್ ಅರುಣ್ ಸಾಗರ್ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಎರಡನೇ ಸ್ಪರ್ಧಿಯಾಗಿ ಅಶ್ವಿನಿ ನಕ್ಷತ್ರ ಧಾರಾವಾಹಿ ಖ್ಯಾತಿಯ ಮಯೂರಿ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ಮುಯೂರಿ ಬಿಗ್ ಬಾಸ್ ಮನೆಗೆ ಹೊಸ ಸ್ಪರ್ಧಿಯಾಗಿ ಪ್ರವೇಶ ಮಾಡಿದ್ದಾರೆ.
ಇದನ್ನೂ ಓದಿ | Bigg Boss Kannada | ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಅರುಣ್ ಸಾಗರ್ : ಎರಡನೇ ಸ್ಪರ್ಧಿಯಾಗಿ ಆಗಮಿಸಿದ ಮಯೂರಿ