Site icon Vistara News

Bigg Boss Kannada | ಮನೆಯಲ್ಲಿ ಕನ್ನಡಮ್ಮನ ಹಬ್ಬದ ದಿನ ಹೆತ್ತಮ್ಮನ ನೆನಪು!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ ೯ರ (Bigg Boss Kannada )39ನೇ ದಿನ ಕನ್ನಡ ರಾಜ್ಯೋತ್ಸವವ ವಿಶೇಷವಾಗಿ ಮನೆಯ ಸದಸ್ಯರು ತಮ್ಮ ತಾಯಿಯ ಕುರಿತು ಮಾತನಾಡಬೇಕು ಅಥವಾ ಸಂದೇಶ ನೀಡಬೇಕಿತ್ತು ಎನ್ನುವುದಾಗಿತ್ತು. ಪ್ರತಿ ಸ್ಪರ್ಧಿಗಳು ತಾಯಿ ನೆನೆದು ಭಾವುಕರಾದರು. ಕನ್ನಡ ರಾಜ್ಯೋತ್ಸವಕ್ಕೆ ತಾವೇ ಬರೆದಿರುವ ವಿಶೇಷ ಹಾಡನ್ನು ಸ್ಪರ್ಧಿಗಳು ಹಾಡಿದರು.

ಮೊದಲಿಗೆ ವಿನೋದ್‌ ಗೊಬ್ಬರಗಾಲ ತಾಯಿಯ ಕುರಿತು ಮಾತನಾಡಿ ʻʻಮನೆಯಲ್ಲಿ ಮೊದಲು ಗುರು ತಾಯಿ. ಏನೇ ಸಮಸ್ಯೆ ಬಂದರೂ ನಮ್ಮ ಪಕ್ಕ ನಿಲ್ಲುವವಳು ಅವಳು. ಹುಟ್ಟಿದಾಗ ಹೆಚ್ಚು ಖುಷಿ ಪಟ್ಟವಳು ಅವ್ವ. ನನಗೆ ಹಸಿದಾಗ ಎದೆ ಹಾಲುಣಿಸಿದವಳು ನನ್ನ ಅವ್ವ. ನಾನು ಅವಳಿಗಿಂತ ಮೊದಲು ಸತ್ತರೆ ಮೊದಲು ಅಳುವವಳು ನನ್ನ ಅವ್ವʼʼಎಂದು ಕಣ್ಣೀರು ಹಾಕಿದರು. ಅಮ್ಮನ ಬಗ್ಗೆ ಮಾತುಗಳು ಕೇಳುದ್ದಂತೆ ಅಮೂಲ್ಯ ಕಣ್ಣೀರು ಹಾಕಿದರು. ‌

ಇದನ್ನೂ ಓದಿ | Bigg Boss Kannada | ಸೂಪರ್‌ ಪವರ್‌ ಗೇಮ್‌ನಲ್ಲಿ ಸ್ಪರ್ಧಿಗಳ ಹಣಾಹಣಿ!

ಅಮೂಲ್ಯ ಅವರು ಅಳುತ್ತಲೇ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿ ಕಣ್ಣೀರು ಹಾಕಿದರು. ಮಾತನಾಡಿ ʻʻನನ್ನ ಅಮ್ಮ ತೀರಿಕೊಂಡಿದ್ದು, ೬ ವರ್ಷಗಳು ಕಳೆದಿವೆ. ನಾನು ಯಾವಾಗಲೂ ಅಮ್ಮನ ಸೆರಗು ಹಿಡದೆ ಇರುತ್ತಿದ್ದೆ. ಆದರೆ ಅವರಿಗೆ ಒಂದು ದಿನ ಕಿಡ್ನಿ ಫೇಲ್ಯೂರ್‌ ಆಗಿದೆ ಎಂದು ತಿಳಿಯಿತು. ಅವರಿಗೆ ಗೊತ್ತಿತ್ತು ತುಂಬಾ ದಿನ ಬದುಕುಳಿಯುವುದಿಲ್ಲ ಎಂದು. ಐಸಿಯುದಲ್ಲಿ ಅವರು ದಾಖಲಾದಾಗ ನಾನು ಪಕ್ಕದಲ್ಲೇ ಇರುತ್ತಿದ್ದೆ. ಇಂತಹ ಸ್ಥಿತಿ ಯಾರಿಗೂ ಬರಬಾರದುʼʼ ಎಂದರು,

ದಿವ್ಯಾ ಉರುಡುಗ ಅವರು ಮಾತನಾಡಿ ʻʻನಾನು ಅಮ್ಮನ ಜತೆ ತುಂಬ ಫ್ರೆಂಡ್ಲಿ. ಖುಷಿಯಾಗತ್ತೆ ಅವರ ಬಗ್ಗೆ ಹೇಳಲುʼʼಎಂದರು. ರಾಕೇಶ್‌ ಅಡಿಗ , ಅರುಣ್‌ ಸಾಗರ್‌ ಹಾಗೂ ದೀಪಿಕಾ ದಾಸ್‌ ಅಮ್ಮನ ನೆನಪುಗಳನ್ನು ಮೆಲುಕು ಹಾಕಿದರು. ಅರುಣ್‌ ಸಾಗರ್‌ ಅವರು ಹವ್ಯಕ ಭಾಷೆಯಲ್ಲಿ ಮಾತನಾಡಿ ಅಮ್ಮನ ನೆನದು ಭಾವುಕರಾದರು.

ಇದನ್ನೂ ಓದಿ | Bigg Boss Kannada | ದಿವ್ಯಾ-ಅರವಿಂದ್‌ ಮದುವೆ ಆದ್ರೆ ಡಿವೋರ್ಸ್‌ ಗ್ಯಾರಂಟಿ : ಭವಿಷ್ಯ ನುಡಿದ ಗುರೂಜಿ

Exit mobile version