Site icon Vistara News

Bigg Boss Kannada | ನನಗೆ ಅಕ್ಷತಾ ಸ್ವಲ್ಪವೂ ಇಷ್ಟವಿಲ್ಲ, ಆದರೆ ಚೈತ್ರಾ ಫೇವರಿಟ್ ಎಂದ ಜಯಶ್ರೀ

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ (Bigg Boss Kannada) ಮನೆಯಲ್ಲಿ ಒಬ್ಬೊಬ್ಬರೇ ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಗುತ್ತಿದ್ದಾರೆ. ಇರುವ ಸದಸ್ಯರ ನಡುವೆಯೇ ಭಿನ್ನಾಭಿಪ್ರಾಯಗಳು ಬರುತ್ತಿವೆ. ಜಯಶ್ರೀ ಅವರು ಅಕ್ಷತಾ ಬಗ್ಗೆ ಕಮೆಂಟ್‌ ಮಾಡಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಈ ನಡುವೆ ಜಶ್ವಂತ್‌ ಮತ್ತು ನಂದಿನಿ ನಡುವೆಯೂ ಮನಸ್ತಾಪವಾಗಿದೆ.

ಅಕ್ಷತಾ ನನಗೆ ಸ್ವಲ್ಲವೂ ಇಷ್ಟವಿಲ್ಲ ಎಂದ ಜಯಶ್ರೀ
ʻʻಅಕ್ಷತಾ ಮನೆಯ ಸದಸ್ಯರೊಂದಿಗೆ ನ್ಯೂಟ್ರಲ್‌ ಆಗುತ್ತಿದ್ದಾರೆ. ಎಲ್ಲರೊಂದಿಗೆ ಚೆನ್ನಾಗಿ ಇರಲು ಪ್ರಯತ್ನಿಸುತ್ತಿದ್ದಾರೆ. ಅವರ ಈ ನಡೆ ಸರಿಯಲ್ಲ. ನನಗೆ ಆಕೆಯ ಮೇಲೆ ಸ್ವಲ್ಪವೂ ಇಂಟರೆಸ್ಟ್‌ ಇಲ್ಲ. ಆದರೆ, ಚೈತ್ರಾ ನನಗೆ ತುಂಬಾ ಇಷ್ಟ. ಸ್ಪರ್ಧಿಗಳು ನನಗೆ ಟಾರ್ಗೆಟ್‌ ಮಾಡಿದರೂ ನನ್ನ ಜತೆ ಇರುತ್ತಾರೆ. ಒಂದು ವೇಳೆ ನಾನೂ ತಪ್ಪು ಮಾಡಿದರೂ ನನ್ನ ವಹಿಸಿಕೊಂಡು ಮಾತನಾಡುತ್ತಾರೆ. ನಾನು ಫ್ರೆಂಡ್‌ಶಿಪ್‌ ಮಾಡಿಕೊಳ್ಳುವುದು ತುಂಬಾ ರೇರ್‌. ಆದರೆ, ಒಂದು ಸಲ ಒಬ್ಬರೊಂದಿಗೆ ಕ್ಲೋಸ್‌ ಆದೆನೆಂದರೆ, ಅವರನ್ನು ಯಾವತ್ತೂ ಬಿಟ್ಟು ಕೊಡುವುದಿಲ್ಲʼʼ ಎಂದು ಆರ್ಯವರ್ಧನ್‌ ಗುರೂಜಿ ಅವರೊಂದಿಗೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | Bigg Boss Kannada | ರೂಪೇಶ್‌ ನನ್ ಹುಡ್ಗ ಅಂದ್ರು ನಂದಿನಿ; ಸೀರಿಯಸ್‌ ಆದ್ರು ರಾಕೇಶ್‌!

ಇದಕ್ಕೆ ಆರ್ಯವರ್ಧನ್‌ ಗುರೂಜಿ ʻʻಒಬ್ಬ ವ್ಯಕ್ತಿಯನ್ನು ಜಡ್ಜ್‌ ಮಾಡುವುದು ತುಂಬಾ ಮುಖ್ಯವಾಗುತ್ತದೆ. ಆಗ ಅವರ ಸಂತೋಷ ಮತ್ತು ದುಃಖ ಎರಡೂ ಅರ್ಥವಾಗುತ್ತದೆʼʼ ಎಂದು ಹೇಳಿದ್ದಾರೆ.

ಮನೆಯ ಸದಸ್ಯರೊಂದಿಗೆ ಜಯಶ್ರೀ ಒಂದಲ್ಲ ಒಂದು ಗಲಾಟೆ ಮಾಡಿಕೊಳ್ಳುತ್ತಲೇ ಇರುತ್ತಾರೆ. ಸೋಮಣ್ಣ ಜತೆಗೆ ಜಯಶ್ರೀ ಈ ಹಿಂದೆಯೂ ಕೂಗಾಡಿದ್ದರು. ಈ ಗಲಾಟೆ ತಾರಕಕ್ಕೇರಿತ್ತು. ಇತ್ತ ನಂದಿನಿ ಜತೆಗೂ ಜಯಶ್ರೀ ಅವರು ರೂಪೇಶ್‌ ವಿಚಾರವಾಗಿ ಕಿತ್ತಾಡಿಕೊಂಡಿದ್ದಾರೆ.

ನಂದಿನಿ-ಜಶ್ವಂತ್‌ ಮನಸ್ತಾಪ
ಇನ್ನೊಂದು ಕಡೆ ನಂದಿನಿ ಮತ್ತು ಜಶ್ವಂತ್‌ ನಡುವೆ ಮನಸ್ತಾಪಗಳು ಹೆಚ್ಚಾಗುತ್ತಿವೆ. ಸಾನ್ಯ ವಿಚಾರವಾಗಿ ಜಶ್ವಂತ್‌ ಮತ್ತು ನಂದಿನಿ ಒಬ್ಬರಿಗೊಬ್ಬರು ಕಿತ್ತಾಡಿಕೊಂಡಿದ್ದು, ಮುನಿಸಿಕೊಂಡಿದ್ದಾರೆ. ನಂದಿನಿ ಬಳಿ ಮಾತನಾಡಿದ ಜಶ್ವಂತ್‌, ʻʻನಿನ್ನನ್ನು ಡೈವರ್ಟ್‌ ಮಾಡಬೇಕೆಂದು ಉಳಿದವರು ಈ ರೀತಿ ಸೀನ್‌ ಕ್ರಿಯೇಟ್‌ ಮಾಡುತ್ತಿದ್ದಾರೆ. ಆಟದ ಕಡೆ ಗಮನ ಕೊಡುʼʼ ಎಂದು ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಮನೆಯಲ್ಲಿ ಸೋನು ಗೌಡರ ಟೊಮ್ಯಾಟೋ ಗೊಜ್ಜು!

Exit mobile version