Site icon Vistara News

Bigg Boss Kannada | ಈ ವಾರ ಡಬಲ್‌ ಎಲಿಮಿನೇಷನ್‌: ಮನೆಯಿಂದ ಹೊರನಡೆದ ಅಮೂಲ್ಯ ಗೌಡ, ಅರುಣ್‌ ಸಾಗರ್‌!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಕನ್ನಡ ಸೀಸನ್‌ 9 (Bigg Boss Kannada) ಮುಕ್ತಾಯ ಹಂತದಲ್ಲಿದೆ. ಈ ವಾರ ಡಬಲ್‌ ಎಲಿಮಿನೇಷನ್‌ ಯಾರಾಗುತ್ತಾರೆ ಎಂಬ ಕುತೂಹಲ ನೋಡುಗರಿಗೆ ಇದ್ದಿತ್ತು. 8 ಜನ ಸ್ಪರ್ಧಿಗಳಿದ್ದ ಮನೆಯಲ್ಲಿ ಇದೀಗ ಅಮೂಲ್ಯ ಗೌಡ ಮತ್ತು ಅರುಣ್ ಸಾಗರ್ ಮನೆಯಿಂದ ಹೊರ ಬಂದಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿ ಕೊನೆಯ ಹಂತದವರೆಗೂ ಅರುಣ್‌ ಸಾಗರ್‌ ಹಾಗೂ ಅಮೂಲ್ಯ ಗೌಡ ಸಖತ್‌ ಪೈಪೋಟಿ ನೀಡಿದ್ದರು. ಅಮೂಲ್ಯ ಗೌಡ ಟಾಸ್ಕ್, ಅಡುಗೆ, ಮನರಂಜನೆಯಲ್ಲಿ ಸೈ ಎನೆಸಿಕೊಂಡಿದ್ದರು. ʻಕಮಲಿʼ ಧಾರಾವಾಹಿ ಖ್ಯಾತಿಯ ನಟಿ ಅಮೂಲ್ಯ ಓಂಕಾರ ಗೌಡ ಬಿಗ್‌ ಬಾಸ್‌ ಮನೆಗೆ ನವೀನರಾಗಿ ಎಂಟ್ರಿ ಕೊಟ್ಟಿದ್ದರು. ಪರಭಾಷೆಯಲ್ಲಿಯೂ ಅಮೂಲ್ಯ ನಟಿಸಿದ್ದಾರೆ. ಈ ಹಿಂದೆ ಅವರು ‘ಅರಮನೆ’ ಎಂಬ ಧಾರಾವಾಹಿಯಲ್ಲಿ ಮಾಡರ್ನ್ ಹುಡುಗಿಯಾಗಿ ಕಾಣಿಸಿಕೊಂಡಿದ್ದರು. ಆದರೆ ‘ಕಮಲಿ’ ಧಾರಾವಾಹಿಯಲ್ಲಿ ಪಕ್ಕಾ ಹಳ್ಳಿ ಹುಡುಗಿಯಾಗಿ ಕರ್ನಾಟಕದ ಮನೆಮಾತಾಗಿದ್ದಾರೆ. ʻʻಸ್ವಾತಿ ಮುತ್ತುʼʼ ಧಾರಾವಾಹಿಯಲ್ಲಿ ನಟಿಸುವ ಮೂಲಕ ನಟನಾ ಲೋಕಕ್ಕೆ ಪದಾರ್ಪಣೆ ಮಾಡಿದರು.

ಇದನ್ನೂ ಓದಿ | Bigg Boss Kannada | ʻಕಳಪೆʼಯಾದ ರಾಕೇಶ್‌ ಅಡಿಗ: ಈ ವಾರದ ʻಬೆಸ್ಟ್‌ ಪರ್ಫಾರ್ಮರ್‌ʼ ಆರ್ಯವರ್ಧನ್‌ ಗುರೂಜಿ!

ಅರುಣ್ ಸಾಗರ್ ಆಟ ಅಂತ್ಯ
ಅರುಣ್‌ ಸಾಗರ್‌ ಮನೆಗೆ ಪ್ರವೀಣರಾಗಿ ಪ್ರವೇಶ ಕೊಟ್ಟಿದ್ದರು. ಬಿಗ್‌ ಬಾಸ್‌ ಸೀಸನ್‌ 1ರಲ್ಲಿ ಅರುಣ್‌ ಸಾಗರ್‌ ಪ್ರೇಕ್ಷಕರನ್ನು ಹೆಚ್ಚು ರಂಜಿಸಿದವರು. ಆದರೆ ಸೀಸನ್‌ ಒಂದರಲ್ಲಿ ಗೆದ್ದದ್ದು ವಿಜಯ್‌ ರಾಘವೇಂದ್ರ. ಆ ಸೀಸನ್‌ನಲ್ಲಿ ಅರುಣ್ ಸಾಗರ್ ವಿನ್ನರ್ ಆಗಬೇಕು ಎಂಬುದು ಬಹುತೇಕರ ಇಚ್ಛೆಯಾಗಿತ್ತು. ಈ ಬಾರಿಯೂ ಅವರ ಕನಸು ನನಸಾಗಿಲ್ಲ. ಅರುಣ್‌ ಸಾಗರ್‌ ನಟ, ಕಲಾ ನಿರ್ದೇಶಕರು. ರಮ್ಯಾ ಅಭಿನಯದ ʻಜಸ್ಟ್‌ ಮಾತ್‌ ಮಾತಲ್ಲಿʼ, ‘ವೀರ ಮದಕರಿ’, ‘ವಿಷ್ಣುವರ್ಧನ’, ‘ಬೆಂಕಿ ಪಟ್ಣ’, ‘ರಿಂಗ್ ಮಾಸ್ಟರ್’ ಮರ್ಮ, ಚಂದು, ಆಟೋ ರಾಜ, ಸಂಜು ವೆಡ್ಸ್‌ ಗೀತಾ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕಿಚ್ಚ ಸುದೀಪ್‌ ಜತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಪರಿಸರ ಸಂಬಂಧಿತ ಸಿನಿಮಾ ʻಭೂಮಿಗೀತಕ್ಕೆʼ ರಾಷ್ಟ್ರ ಪ್ರಶಸ್ತಿ ಲಭಿಸಿದೆ.

14 ವಾರಕ್ಕೆ ಅರುಣ್ ಸಾಗರ್ ಆಟ ಅಂತ್ಯವಾಗಿದೆ. ಅಮೂಲ್ಯ ಜತೆ ಎರಡನೇ ಸ್ಪರ್ಧಿಯಾಗಿ ಎಲಿಮಿನೇಟ್ ಆಗಿದ್ದಾರೆ. ಅನಾರೋಗ್ಯದ ಹಿನ್ನೆಲೆ ಈ ವಾರ ಟಾಸ್ಕ್‌ಗಳಲ್ಲಿ ಅರುಣ್ ಸಾಗರ್ ಕೊಂಚ ಎಡವಿದ್ದಾರೆ‌. ಹಾಗಾಗಿ ಫಿ‌ನಾಲೆಗೆ ಹೋಗುವ ಅವಕಾಶ ಈ ಬಾರಿಯೂ ಕೈ ತಪ್ಪಿದೆ. ಬಿಗ್ ಬಾಸ್ ಫಿನಾಲೆ ಡಿಸೆಂಬರ್ 31 ಹಾಗೂ ಜನವರಿ 1ನೇ ತಾರೀಖು ನಡೆಯಲಿದೆ.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಕನ್ನಡ ಸೀಸನ್‌ 9ರ ಫಿನಾಲೆ ಡೇಟ್‌ ಫೀಕ್ಸ್‌: ಈ ವಾರ ಡಬಲ್‌ ಎಲಿಮಿನೇಷನ್‌ ಸಾಧ್ಯತೆ!

Exit mobile version