Site icon Vistara News

Bigg Boss Kannada | ಬಿಗ್‌ ಬಾಸ್‌ ಮನೆಗೆ ಕೊನೆಯ ಸ್ಪರ್ಧಿಯಾಗಿ ಅನುಪಮಾ ಗೌಡ ಪ್ರವೇಶ!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಟಿವಿ ಸೀಸನ್‌ 9ನೇ (Bigg Boss Kannada) ಆವೃತ್ತಿಗೆ ಈಗಾಗಲೇ 17 ಸ್ಪರ್ಧಿಗಳು ಬಿಗ್‌ ಬಾಸ್‌ ಮನೆಗೆ ಪ್ರವೇಶಿಸಿದ್ದಾರೆ. ಈ ಸೀಸನ್‌ನ ಕೊನೆಯ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಹಳೆಯ ಸ್ಪರ್ಧಿ ಅನುಪಮಾ ಗೌಡ ಮನೆಗೆ ಪ್ರವೇಶಿಸಿದ್ದಾರೆ.

ʻರಾಜ ರಾಣಿʼ ಹಾಗೂ ʻನನ್ನಮ್ಮ ಸೂಪರ್ ಸ್ಟಾರ್ʼ ರಿಯಾಲಿಟಿ ಶೋಗಳನ್ನು ಅನುಪಮಾ ಗೌಡ ಹೋಸ್ಟ್‌ ಮಾಡಿದ್ದರು. ಅಕ್ಕ ಧಾರಾವಾಹಿಯಲ್ಲಿ ಮಿಂಚಿದ ನಟಿಯಾಗಿದ್ದರು. ಬಿಗ್‌ಬಾಸ್ ಕನ್ನಡ ಸೀಸನ್ 5ರ ಸೆಲೆಬ್ರಿಟಿ ಆಗಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ಗಳ ಮೂಲಕ ಸುದ್ದಿಯಲ್ಲಿಯೇ ಇರುತ್ತಾರೆ ಅನುಪಮಾ ಗೌಡ.

https://twitter.com/ColorsKannada/status/1573728016093843456?s=20&t=Wf8zLYOCgZmIB7Gqkal1gA

ಈ ಹಿಂದೆ ಅಷ್ಟೇ ತಮ್ಮ ಕೂದಲನ್ನು ದಾನ ಮಾಡುವುದರ ಮೂಲಕ ಸುದ್ದಿಯಾಗಿದ್ದರು. ತನ್ನ ಪೋಸ್ಟ್‌ನಲ್ಲಿ “ಸಾಕಷ್ಟು ಜನರು ಮುಂದೆ ಬಂದು ಮತ್ತು ತಮ್ಮ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಲು ಹೆಚ್ಚು ಪ್ರೇರೇಪಿಸಲು ನಾನು ಇದನ್ನು ಪೋಸ್ಟ್ ಮಾಡುತ್ತಿದ್ದೇನೆ” ಎಂದು ಉಲ್ಲೇಖಿಸಿದ್ದಾರೆ.

ಮತ್ತೊಂದೆಡೆ, ಅನುಪಮಾ ತನ್ನ ಕೂದಲನ್ನು ಒಂದು ಉದ್ದೇಶಕ್ಕಾಗಿ ದಾನ ಮಾಡುವ ನಿರ್ಧಾರವು ಇತರ ಅನೇಕರಿಗೆ ಸ್ಫೂರ್ತಿ ನೀಡಿದೆ. ಈ ಬಾರಿಯ ಬಿಗ್‌ ಬಾಸ್‌ ಸೀಸನ್‌ 9ಕ್ಕೆ 18 ಸ್ಪರ್ಧಿಗಳು ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ | Bigg Boss Kannada | ಮಹಿಳಾ ರೇಸರ್‌ ಐಶ್ವರ್ಯ ಪಿಸೆ 16ನೇ ಸ್ಪರ್ಧಿ : ಮಂಗಳ ಗೌರಿ ಬಿಗ್‌ ಬಾಸ್‌ ಮನೆಗೆ!

Exit mobile version