Site icon Vistara News

Bigg Boss Kannada | ಬಿಗ್‌ ಬಾಸ್‌ ಮನೆಯಿಂದ ಹೊರ ನಡೆದ ಅನುಪಮಾ ಗೌಡ!

Bigg Boss Kannada

ಬೆಂಗಳೂರು : ಬಿಗ್ ಬಾಸ್ ಸೀಸನ್ 5ರಲ್ಲಿ (Bigg Boss Kannada) ಕಾಣಿಸಿಕೊಂಡಿದ್ದ ಅನುಪಮಾ ಗೌಡ ಅವರು ಬಿಗ್ ಬಾಸ್ ಸೀಸನ್ 9ಕ್ಕೂ ಕಾಲಿಟ್ಟಿದ್ದರು. ಟಾಸ್ಕ್, ಅಡುಗೆ, ಮನರಂಜನೆ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದರು. ಈಗ 13ನೇ ವಾರಕ್ಕೆ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. 

ʻರಾಜ ರಾಣಿʼ ಹಾಗೂ ʻನನ್ನಮ್ಮ ಸೂಪರ್ ಸ್ಟಾರ್ʼ ರಿಯಾಲಿಟಿ ಶೋಗಳನ್ನು ಅನುಪಮಾ ಗೌಡ ಹೋಸ್ಟ್‌ ಮಾಡಿದ್ದರು. ಅಕ್ಕ ಧಾರಾವಾಹಿಯಲ್ಲಿ ಮಿಂಚಿದ ನಟಿಯಾಗಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ಗಳ ಮೂಲಕ ಸುದ್ದಿಯಲ್ಲಿಯೇ ಇರುತ್ತಾರೆ ಅನುಪಮಾ ಗೌಡ. ಎಲ್ಲಾ ಸ್ಪರ್ಧಿಗಳ ಮುಂದೆ ಸ್ಟ್ರಾಂಗ್ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು ಅನುಪಮಾ.

ಇದನ್ನೂ ಓದಿ | Bigg Boss Kannada | ʼಕಳಪೆʼ ನೀಡುವಾಗ ಬೇಸರ ಹೊರಹಾಕಿದ ಅಮೂಲ್ಯ ಗೌಡ!

ಬಿಗ್‌ ಬಾಸ್‌ ಮನೆಯಲ್ಲಿ ಕ್ಯಾಪ್ಟನ್‌ ಆಗಿಯೂ ಟಾಸ್ಕ್‌ ನಿಭಾಯಿಸಿದ್ದರು. ಮನೆಗೆ ಎಂಟ್ರಿ ಕೊಡುತ್ತಲೇ ನೇಹಾ ಗೌಡ ಜತೆ ಆತ್ಮೀಯವಾಗಿದ್ದ ಅನುಪಮಾ ಗೌಡ ಅವರು ಪ್ರಶಾಂತ್‌ ಸಂಬರಗಿ ಅವರ ಜತೆ ವಾದಕ್ಕೆ ಇಳಿದಿದ್ದರು. ಅನುಪಮಾ ಗೌಡ ಅವರು ಪ್ರಶಾಂತ್‌ ಸಂಬರಗಿ ಅವರಿಗೆ ʻʻನಿಮ್ಮದು ಏನೇ ಉದ್ದೇಶ, ಸ್ಟ್ರ್ಯಾಟಜಿ ಇದ್ದರೂ ಬೇರೆಯವರಿಗೆ ಸ್ಟೇಟ್‌ಮೆಂಟ್ಸ್‌ಗಳನ್ನು ಪಾಸ್‌ ಮಾಡಬೇಡಿ. ಆ ರೀತಿ ಮಾಡಲೇಬೇಡಿ. ಗೇಮ್‌ನಲ್ಲಿ ನಿಮ್ಮ ಸ್ಟ್ರ್ಯಾಟಜಿಯನ್ನು ಬ್ಲೇಮ್‌ ಮಾಡಬೇಕೇ ಹೊರತು. ಸ್ಟೇಟ್‌ಮೆಂಟ್ಸ್‌ಗಳನ್ನು ಪಾಸ್‌ ಮಾಡಬೇಡಿʼʼಎಂದು ಖಡಕ್‌ ವಾರ್ನಿಂಗ್‌ ಕೊಟ್ಟಿದ್ದರು.

ಹೆಚ್ಚಾಗಿ ಅಮೂಲ್ಯ ಗೌಡ, ದಿವ್ಯಾ ಉರುಡುಗ ಜತೆಗೆ ಕಾಣಿಸಿಕೊಂಡಿದ್ದ ಅನುಪಮಾ ಟಾಸ್ಕ್‌ನಲ್ಲಿಯೂ ಸೈ ಎನಿಸಿಕೊಂಡಿದ್ದರು. ಇದೀಗ ಪ್ರಶಾಂತ್‌ ಸಂಬರಗಿ ನಂತರ ಮನೆಯಿಂದ ಹೊರ ನಡೆದಿದ್ದಾರೆ.

ಇದನ್ನೂ ಓದಿ | Bigg Boss Kannada | ಮನೆಯಲ್ಲಿ ಜೋರಾಗಿತ್ತು ಮಿಣ ಮಿಣ ಮೀನಾಕ್ಷಿ ಮದುವೆ!

Exit mobile version