ಬೆಂಗಳೂರು: ಬಿಗ್ ಬಾಸ್ ಸೀಸನ್ 9ರ (Bigg Boss Kannada) ಐದನೇ ವಾರ ಅನುಪಮಾ ಗೌಡ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ. ಈ ವಾರದ ಕಳಪೆ ಮತ್ತು ಅತ್ಯುತ್ತಮ ಸುತ್ತಿನಲ್ಲಿ , ಸಾನ್ಯ ಅಯ್ಯರ್ ಕಳಪೆ ಪ್ರದರ್ಶನಕಾರರಾಗಿ, ಹಾಗೂ ವಿನೋದ ಗೊಬ್ಬರಗಾಲ ಅತ್ಯುತ್ತಮ ಪ್ರದರ್ಶನಕಾರರಾಗಿದ್ದಾರೆ. ರೂಪೇಶ್ ಶೆಟ್ಟಿ ಕೂಡ ಸಾನ್ಯ ಅಯ್ಯರ್ ಕ್ಯಾಪ್ಟನ್ಸಿ ಚೆನ್ನಾಗಿ ನಿಭಾಯಿಸಿಲ್ಲ ಎಂಬ ಅಭಿಪ್ರಾಯ ಹಂಚಿಕೊಂಡಿದ್ದು, ಸ್ಪರ್ಧಿಗಳಿಗೆ ರೂಪೇಶ್ ಶೆಟ್ಟಿ ಈ ನಡೆ ಅಚ್ಚರಿ ಮೂಡಿಸಿದೆ.
ಬರುವ ವಾರ ಅನುಪಮಾ ಗೌಡ ಕ್ಯಾಪ್ಟನ್ಸಿ ನಿಭಾಯಿಸುತ್ತಿದ್ದಾರೆ. ಸಾನ್ಯ ನಾಲ್ಕನೇ ವಾರ ಕ್ಯಾಪ್ಟನ್ ಆಗಿದ್ದರು. ಮನೆಮಂದಿ ಸಾನ್ಯರ ಆಟವನ್ನು ಗಮನದಲ್ಲಿ ಇಟ್ಟುಕೊಂಡು ‘ಕಳಪೆ’ ನೀಡಿ ಜೈಲಿಗೆ ಕಳುಹಿಸಿದ್ದಾರೆ. ಹಲವು ಸ್ಪರ್ಧಿಗಳು ಸಾನ್ಯರಿಗೆ ಗೌರವ ನೀಡಿ ಗೊತ್ತಿಲ್ಲ ಎಂದು ಆರೋಪಿಸಿದ್ದಾರೆ. ಕೆಲ ಟಾಸ್ಕ್ಗಳನ್ನು ಸಾನ್ಯ ಅರ್ಥ ಮಾಡಿಕೊಳ್ಳದೆ ಸ್ಪರ್ಧಿಗಳಿಗೆ ಮನೆಯಿಂದ ಕಳುಹಿಸಿದ ಗಿಫ್ಟ್ ಸಿಗದೇ ಇರುವುದು. ಹೀಗೆ ತಪ್ಪುಗಳ ಮೇಲೆ ತಪ್ಪನ್ನು ಮಾಡುತ್ತಲೇ ಬಂದರು ಸಾನ್ಯ ಎಂದು ಮನೆಮಂದಿ ಹೇಳಿದ್ದಾರೆ.
ಇದನ್ನೂ ಓದಿ | Bigg Boss Kannada | ಕೆಲಸಕ್ಕೆ ಚಕ್ಕರ್, ನಗುವಿಗೆ ಹಾಜರ್: ಕಾವ್ಯಶ್ರೀ-ರಾಕೇಶ್ ಮುನಿಸು!
ಸಾನ್ಯ ಹಿಂದಿನ ವಾರ ಅತ್ಯುತ್ತಮ ಎಂಬ ಹಣೆಪಟ್ಟಿಯನ್ನು ಪಡೆದಿದ್ದರು. ಈ ವಾರ ರೂಪೇಶ್ ಶೆಟ್ಟಿ ಕೂಡ ಕಳಪೆಯನ್ನು ನೀಡಿದ್ದಾರೆ. ಈ ವಾರ ರೂಪೇಶ್ ಶೆಟ್ಟಿ, ದೀಪಿಕಾ ದಾಸ್, ನೇಹಾ ಗೌಡ, ರೂಪೇಶ್ ರಾಜಣ್ಣ, ಪ್ರಶಾಂತ್ ಸಂಬರಗಿ, ಅಮೂಲ್ಯ ಗೌಡ, ರಾಕೇಶ್ ಅಡಿಗ ಮತ್ತು ಕಾವ್ಯಶ್ರೀ ನಾಮಿನೇಟ್ ಆಗಿದ್ದಾರೆ. ಸಾನ್ಯ ಅವರು ಆರ್ಯವರ್ಧನ್ ಗುರೂಜಿ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು.
ಇದನ್ನೂ ಓದಿ | Bigg Boss Kannada | ವಿನೋದ್, ಅನುಪಮಾ, ಅಮೂಲ್ಯ, ಮೂವರಲ್ಲಿ ಯಾರಾಗ್ತಾರೆ ಮುಂದಿನ ಕ್ಯಾಪ್ಟನ್?