Site icon Vistara News

Bigg Boss Kannada | ಕನ್ನಡ ಹೋರಾಟಗಾರರ ಕ್ಷಮೆ ಕೇಳಿ, ಗಳಗಳನೇ ಅತ್ತ ಪ್ರಶಾಂತ್‌ ಸಂಬರಗಿ!

Bigg Boss Kannada

ಬೆಂಗಳೂರು : ‌ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada) ರೂಪೇಶ್‌ ರಾಜಣ್ಣ ಮತ್ತು ಪ್ರಶಾಂತ್‌ ನಡುವೆ ಮಂಗಳವಾರ ನವೆಂಬರ್‌ 1ರಂದು ವಾದಗಳು ನಡೆದಿದ್ದವು. ʻʻನಾನು ಬಹಳ ಕನ್ನಡ ಹೋರಾಟ ಮಾಡಿದ್ದೇನೆ. ಅದಕ್ಕೆಲ್ಲ ನನ್ನ ಬಳಿ ದಾಖಲೆ ಇದೆ, ಪತ್ರಗಳು ಇವೆʼʼ ಎಂದು ಆರ್ಯವರ್ಧನ್‌ ಜತೆ ಪ್ರಶಾಂತ್‌ ಸಂಬರಗಿ ಅವರು ರೂಪೇಶ್‌ ರಾಜಣ್ಣ ಕುರಿತು ಹೇಳಿಕೊಂಡಿದ್ದರು. ಈ ಹೇಳಿಕೆ ನಂತರ ಕನ್ನಡಪರ ಸಂಘಟನೆಗಳ ಸದಸ್ಯರು ಒಟ್ಟು ಸೇರಿ ಪ್ರತಿಭಟನೆ ನಡೆಸಿದ್ದರು. ಇದೀಗ ಪ್ರಶಾಂತ್‌ ಸಂಬರಗಿ ಅವರು ಕನ್ನಡ ಜನತೆಯ ಮುಂದೆ ಕ್ಷಮೆ ಕೇಳಿ ಕಣ್ಣೀರು ಹಾಕಿದ್ದಾರೆ.

ಬಿಗ್‌ ಬಾಸ್‌ ಕನ್ಫೆಷನ್‌ ರೂಮ್‌ಗೆ ಪ್ರಶಾಂತ್‌ ಸಂಬರಗಿ ಅವರನ್ನು ಕರೆದು ʻʻರೂಪೇಶ್‌ ರಾಜಣ್ಣ ಅವರ ಜತೆ ನೀವು ಕನ್ನಡ ಹೋರಾಟಗಾರರ ಬಗ್ಗೆ ಮಾತನಾಡಿದ ಮಾತು, ಹಾಗೂ ನಿಮ್ಮ ಧಾಟಿ ಕನ್ನಡ ಭಾಷೆ ಪ್ರೀತಿಸುವವರಿಗೆ ನೋವುಂಟು ಮಾಡಿದೆ. ನಮ್ಮ ನಡುವೆ ಭಾಷೆ ಪ್ರೀತಿಸುವವರು ಅನೇಕರು ಇದ್ದಾರೆ ಎಂಬುದು ನಿಮಗೆ ಅರಿವಿದೆ ಎಂದು ಭಾವಿಸಿದ್ದೇವೆʼʼಎಂದರು.

ಪ್ರಶಾಂತ್‌ ಸಂಬರಗಿ ಕನ್ನಡ ಜನತೆಗೆ ಕ್ಷಮೆ ಯಾಚಿಸಿದ್ದು ʻʻನಾನು ಯಾರನ್ನೂ ನೋಯಿಸಬೇಕು ಎಂಬ ಅರ್ಥದಲ್ಲಿ ಈ ರೀತಿ ಮಾತನಾಡಿಲ್ಲ. ನನ್ನ ಮಾತನ್ನು ವಾಪಸ್‌ ತೆಗೆದುಕೊಳ್ಳುತ್ತೇನೆ. ನನ್ನ ಮತ್ತು ರಾಜಣ್ಣ ಅವರ ಮೈಂಡ್‌ಗೇಮ್‌ ಆಟದ ರಭಸದಲ್ಲಿ ಈ ರೀತಿ ಹೇಳಿದ್ದೇನೆ. ಈ ಮಾತುಗಳು ಒಬ್ಬರ ವಿರುದ್ಧ ಇತ್ತು ಹೊರತು, ಕನ್ನಡ ಜನತೆಗೆ ನೋವಾಗಬೇಕು ಎಂಬ ಅರ್ಥದಲ್ಲಿ ನಾನು ಹೇಳಿಲ್ಲʼʼ ಎಂದು ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ | Bigg Boss Kannada | ಪ್ರಶಾಂತ್‌ ಸಂಬರಗಿ ವಿರುದ್ಧ ಕನ್ನಡಪರ ಸಂಘಟನೆ ಹೋರಾಟಗಾರರಿಂದ ಪ್ರತಿಭಟನೆ

ಪ್ರಶಾಂತ್‌ ಸಂಬರಗಿ ಅವರು ರೂಪೇಶ್‌ ರಾಜಣ್ಣ ಅವರ ಬಗ್ಗೆ ಆರ್ಯವರ್ಧನ್‌ ಬಳಿ ಹಲವು ವಿಚಾರಗಳನ್ನು ಚರ್ಚಿಸಿದ್ದರು. ʻʻರೂಪೇಶ್‌ ಅವರು ತಾವೇ ಬುದ್ಧಿವಂತ ಎಂದು ಅಂದುಕೊಂಡಿದ್ದಾರೆ. ನಾನು ನನ್ನ ಜೀವನದಲ್ಲಿ ಎಲ್ಲ ಕನ್ನಡ ಹೋರಾಟಗಾರರಿಗೂ ಬಿಸಿ ಮುಟ್ಟಿಸಿದ್ದೇನೆ. ಒಬ್ಬರನ್ನೂ ಬಿಟ್ಟಿಲ್ಲ, ಸರಿಯಾಗಿ ಬಿಸಿ ಮುಟ್ಟಿಸಿದ್ದೇನೆʼʼಎಂದು ಪ್ರಶಾಂತ್‌ ಹೇಳಿಕೊಂಡಿದ್ದರು. ಅದೇ ಸಮಯಕ್ಕೆ ರೂಪೇಶ್‌ ರಾಜಣ್ಣ ಅವರು ಪ್ರಶಾಂತ್‌ ಅವರ ಮುಂದೆ ತೊಡೆ ತಟ್ಟಿ ನಿಂತು ʻʻತಾಕತ್‌ ಇದ್ದರೆ ನನ್ನ ಮುಂದೆ ನಿಲ್ಲಬೇಕು. ಅದು ನಿಜವಾದ ತಾಕತ್‌ʼʼಎಂದು ಸವಾಲು ಹಾಕಿದ್ದರು. ಇದಾದ ನಂತರ ನ್ನಡಪರ ಸಂಘಟನೆಗಳ ಸದಸ್ಯರು ಒಟ್ಟು ಸೇರಿ ಪ್ರತಿಭಟನೆ ನಡೆಸಿದ್ದರು.

ಬಿಗ್‌ ಬಾಸ್‌ ಮನೆಯ ಸೆಟ್‌ ಹಾಕಿರುವ ಬಿಡದಿ ಬಳಿಯ ಇನ್ನೋವೇಟಿವ್‌ ಫಿಲ್ಮ್‌ ಸಿಟಿ ಮುಂದೆ ಪ್ರತಿಭಟನೆ ನಡೆಸಿ ಕಲರ್ಸ್‌ ಕನ್ನಡ ವಾಹಿನಿ ವಿರುದ್ಧ ಘೋಷಣೆ ಕೂಗಿದ್ದರು. ʻʻತಕ್ಷಣವೇ ಪ್ರಶಾಂತ್‌ ಸಂಬರಗಿ ಅವರನ್ನು ಬಿಗ್‌ ಬಾಸ್‌ ಮನೆಯಿಂದ ಆಚೆ ಕಳುಹಿಸಬೇಕು. ಇಲ್ಲದಿದ್ದರೆ ಮನೆಗೆ ನುಗ್ಗಬೇಕಾಗುತ್ತದೆʼʼ ಎಂದು ಕನ್ನಡಪರ ಸಂಘಟನೆಗಳ ಸದಸ್ಯರು ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ | Bigg Boss Kannada | ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಸೂಪರ್‌ ಪವರ್‌ ಆಗಿ ಆಡಿದ ವಿನೋದ ಗೊಬ್ಬರಗಾಲ!

Exit mobile version