ಬೆಂಗಳೂರು: ಬಿಗ್ಬಾಸ್ ಒಟಿಟಿ ಕನ್ನಡದಲ್ಲಿ (Bigg Boss Kannada) ಈ ವಾರ ಹಲವು ಸ್ಪರ್ಧಿಗಳು ನಾಮಿನೇಟ್ ಆಗಿದ್ದು, ಎಲಿಮಿನೇಟ್ ಯಾರು ಆಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿತ್ತು. ಇದೀಗ ಬಿಗ್ಬಾಸ್ ಮನೆಯಿಂದ ಅರ್ಜುನ್ ರಮೇಶ್ ಔಟ್ ಆಗಿದ್ದಾರೆ.
ಸ್ಪರ್ಧೆ ವಿಚಾರ ಬಂತೆಂದೆರೆ ಅರ್ಜುನ್ ಸಖತ್ ಆ್ಯಕ್ಟಿವ್. ಬಿಗ್ಬಾಸ್ ಮನೆಯಲ್ಲಿ ತಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡು ಅನೇಕರಿಗೆ ಹತ್ತಿರವಾಗಿದ್ದರು. ಬಿಗ್ಬಾಸ್ ಮನೆಯೆ ಮೊದಲ ಕ್ಯಾಪ್ಟನ್ಶಿಪ್ ಪಡೆದ ಇವರು ಆಟದಲ್ಲಿ ಕೈಗೆ ಏಟು ಮಾಡಿಕೊಂಡಿದ್ದರು. ಆದರೂ ಇಷ್ಟು ದಿನ ನೋವಿನಲ್ಲಿಯೇ ಕಳೆದಿದ್ದಾರೆ. ನೋವು ನಿವಾರಣೆ ಆಗದೇ ಇರುವುದಕ್ಕೆ ಮನೆಯಿಂದ ಹೊರ ಬರುತ್ತಿದ್ದಾರೆ ಎನ್ನಲಾಗುತ್ತಿದೆ. ಮನೆಯಿಂದ ಕಳುಹಿಸುವಾಗ ಸ್ಪರ್ಧಿಗಳಲ್ಲಿ ಭಾವುಕತೆ ತುಂಬಿತ್ತು ಎನ್ನಲಾಗುತ್ತಿದೆ.
ಇದನ್ನೂ ಓದಿ | Bigg Boss Kannada | ಹೆಬ್ಬುಲಿ ಗರ್ಜಿಸಲು ರೆಡಿ: ಇಲ್ಲಿದೆ ಬಿಗ್ ಬಾಸ್ ವೀಕೆಂಡ್ ಪಂಚ್!
ಅರ್ಜುನ್ ರಮೇಶ್ ಅವರು ಈ ಹಿಂದೆ ರೂಪೇಶ್ ಶೆಟ್ಟಿ ಅವರೊಂದಿಗೆ ಚಪಾತಿ ವಿಚಾರವಾಗಿ ಕಿರಿಕ್ ಮಾಡಿಕೊಂಡಿದ್ದರು. ಇನ್ನು ಸೋನು ಗೌಡ ಅವರು ಈ ಗಲಾಟೆಗೆ ಬೇರೆಯದ್ದೇ ಆಯಾಮ ನೀಡಿದ್ದು, ಅರ್ಜುನ್ ಜತೆ ಸ್ಪರ್ಧಿಗಳು ಪಾಸಿಟಿವ್ ಆಗಿ ಮಾತನಾಡಿದರೆ, ರೂಪೇಶ್ ಬಳಿ ಹೋಗಿ ಇನ್ನೊಂದು ರೀತಿ ಮಾತನಾಡುತ್ತಾರೆ. ಇವರೆಲ್ಲ ಫೇಕ್ ಸ್ಪರ್ಧಿಗಳು ಎಂದು ಆರ್ಯವರ್ಧನ್ ಗುರೂಜಿ ಮುಂದೆ ಹೇಳಿಕೊಂಡಿದ್ದರು. ಜತೆಗೆ ಏಕವಚನದ ಬಳಕೆ ಬಗ್ಗೆ ಅರ್ಜುನ್ ಕೂಗಾಡಿದ್ದರು.
ಇದೀಗ ಬಿಗ್ ಬಾಸ್ ಮನೆಯಿಂದ ಅರ್ಜುನ್ ಔಟ್ ಆಗಿದ್ದಾರೆ. ಮನೆಯವರೊಂದಿಗೆ ಸದಾ ನಗುತ್ತಾ ಇರುತ್ತಿದ್ದ ಅರ್ಜುನ್ ರಮೇಶ್ ಹೊರಗೆ ಹೋಗುತ್ತಿರುವುದು ಬಿಗ್ಬಾಸ್ ಪ್ರೇಕ್ಷಕರಿಗೆ ಬೇಸರ ಉಂಟು ಮಾಡಿದೆ.
ಇದನ್ನೂ ಓದಿ | Bigg Boss Kannada | ಬಿಗ್ ಹಿಟ್ ಕೊಟ್ಟ ಮಿನಿ ಬಿಗ್ ಬಾಸ್; ಮೊದಲ ವಾರದಲ್ಲಿ ಮಿಲಿಯನ್ ಪ್ಲಸ್ ವ್ಯೂವ್ಸ್!