Site icon Vistara News

Bigg Boss Kannada | ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಅರುಣ್‌ ಸಾಗರ್‌ : ಎರಡನೇ ಸ್ಪರ್ಧಿಯಾಗಿ ಆಗಮಿಸಿದ ಮಯೂರಿ

Bigg Boss Kannada

ಬೆಂಗಳೂರು : ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋಗಳಲ್ಲಿ ಬಿಗ್‌ ಬಾಸ್‌ (Bigg Boss Kannada) ಕೂಡ ಒಂದು. ಇದೀಗ ಬಿಗ್‌ ಬಾಸ್‌ ಸೀಸನ್‌ 9ಕ್ಕೆ ಸೀಸನ್‌ 1ರ ರನ್ನರ್‌ಅಪ್‌ ಅರುಣ್‌ ಸಾಗರ್‌ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

ಬಿಗ್‌ ಬಾಸ್‌ ಸೀಸನ್‌ 1ರಲ್ಲಿ ಅರುಣ್‌ ಸಾಗರ್‌ ಪ್ರೇಕ್ಷಕರನ್ನು ಹೆಚ್ಚು ರಂಜಿಸಿದವರು. ಆದರೆ ಸೀಸನ್‌ ಒಂದರಲ್ಲಿ ಗೆದ್ದದ್ದು ವಿಜಯ್‌ ರಾಘವೇಂದ್ರ. ಆ ಸೀಸನ್‌ನಲ್ಲಿ ಅರುಣ್ ಸಾಗರ್ ವಿನ್ನರ್ ಆಗಬೇಕು ಎಂಬುದು ಬಹುತೇಕರ ಇಚ್ಛೆಯಾಗಿತ್ತು. 

ಅರುಣ್‌ ಸಾಗರ್‌ ನಟ, ಕಲಾ ನಿರ್ದೇಶಕರು. ರಮ್ಯಾ ಅಭಿನಯದ ಜಸ್ಟ್‌ ಮಾತ್‌ ಮಾತಲ್ಲಿ, ‘ವೀರ ಮದಕರಿ’, ‘ವಿಷ್ಣುವರ್ಧನ’, ‘ಬೆಂಕಿ ಪಟ್ಣ’, ‘ರಿಂಗ್ ಮಾಸ್ಟರ್’ ಮರ್ಮ, ಚಂದು, ಆಟೋ ರಾಜ, ಸಂಜು ವೆಡ್ಸ್‌ ಗೀತಾ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕಿಚ್ಚ ಸುದೀಪ್‌ ಜತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಪರಿಸರ ಸಂಬಂಧಿತ ಸಿನಿಮಾ ಭೂಮಿಗೀತಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ.

ಎರಡನೇ ಸ್ಪರ್ಧಿಯಾಗಿ ಅಶ್ವಿನಿ ನಕ್ಷತ್ರ ಧಾರಾವಾಹಿ ಖ್ಯಾತಿಯ ಮಯೂರಿ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ಮುಯೂರಿ ಬಿಗ್‌ ಬಾಸ್‌ ಮನೆಗೆ ಹೊಸ ಸ್ಪರ್ಧಿಯಾಗಿ ಪ್ರವೇಶ ಮಾಡಿದ್ದಾರೆ. ಕೃಷ್ಣಲೀಲಾ, ಪೊಗರು ಚಿತ್ರದವರೆಗೂ ನಟಿ ಮಯೂರಿ ತಮ್ಮ ನಟನೆಯ ಮೂಲಕ ಮೋಡಿ ಮಾಡುತ್ತಲೇ ಬಂದಿದ್ದಾರೆ. 

ಇದನ್ನೂ ಓದಿ | Bigg Boss Kannada | ಸ್ಪರ್ಧಿಗಳು ಹದಿನೆಂಟು, ಯಾರದ್ದೆಲ್ಲ ಹೆಸರುಂಟು?

Exit mobile version