Site icon Vistara News

Bigg Boss Kannada | ಆತ್ಮ ಸಾಕ್ಷಿಗೆ ತಪ್ಪು ಅನಿಸಿದ ಮೇಲೆ ಕ್ಷಮೆ ಕೇಳಲೇಬೇಕು ಅಂತಿದ್ದಾರೆ ಅರುಣ್‌ ಸಾಗರ್‌!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada ) ಐದನೇ ವಾರ ದೀಪಾವಳಿಗೆ ಬಿಗ್‌ ಬಾಸ್‌ ಒಂದು ಟಾಸ್ಕ್‌ ನೀಡಿತ್ತು. ‘ಉಡುಗೊರೆ ಮುಖ್ಯವೇ ಅಥವಾ ಕ್ಯಾಪ್ಟನ್ಸಿ ಪಾಯಿಂಟ್ಸ್‌ ಮುಖ್ಯವೇʼ ಎಂಬುದಾಗಿತ್ತು. ನೇಹಾ ಮತ್ತು ರೂಪೇಶ್‌ ರಾಜಣ್ಣ ಎರಡೂ ಮುಖ್ಯ ಅಂದದ್ದಕ್ಕೆ ಅರುಣ್‌ ಸಾಗರ್‌ ಅವರು ʻದುರಾಸೆʼ ಎಂದಿದ್ದಾರೆ. ಈ ಕುರಿತು ಮನೆಯಲ್ಲಿ ವಾದ ವಿವಾದಗಳು ನಡೆದಿವೆ. 32ನೇ ದಿನ ಅರುಣ್‌ ಸಾಗರ್‌ ಅವರು ಆತ್ಮ ಸಾಕ್ಷಿಗೆ ತಪ್ಪು ಅನಿಸಿದ ಮೇಲೆ ಕ್ಷಮೆ ಕೇಳಲೇಬೇಕು ಎನ್ನುವ ಉದ್ದೇಶದಿಂದ ಬಾಯಿಗೆ ಕ್ಷಮಿಸಿ ಎನ್ನುವ ಬಿಳಿ ಪಟ್ಟಿಯನ್ನು ಕಟ್ಟಿಕೊಂಡೇ ಆಡಿದ್ದಾರೆ.

ದುರಾಸೆ ಎಂಬ ಪದ ಬಳಕೆಗೆ ಅರುಣ್‌ ಸಾಗರ್‌ ಅವರ ಮೇಲೆ ನೇಹಾ ಮತ್ತು ರೂಪೇಶ್‌ ರಾಜಣ್ಣ ಅವರ ಮಧ್ಯೆ ಚರ್ಚೆಗಳು ನಡೆದವು. ಮಧ್ಯರಾತ್ರಿ ಆದರೂ ಮಾತುಗಳು ಮುಗಿದೇ ಇರಲಿಲ್ಲ. ಅರುಣ್‌ ಸಾಗರ್‌ ಅವರು ನೇಹಾ ಅವರ ಬಳಿ ಈ ಬಗ್ಗೆ ಭಾವುಕರಾಗಿ ಬೇಸರ ವ್ಯಕ್ತ ಪಡಿಸಿದರು. ಅರುಣ್‌ ಸಾಗರ್‌ ಮಾತನಾಡಿ ʻʻಈ ಮನೆಯಲ್ಲಿ ದುರಾಸೆ ಬಗ್ಗೆ ಹೇಳಿದ ಮಾತಷ್ಟೇ ಮಾತನಾಡುತ್ತೀದ್ದೀರಿ. ಆದರೆ ಆಟದಲ್ಲಿ ಮೋಸ ಆಗಿದೆ ಎಂದು ಯಾಕೆ ಯಾರು ಪ್ರಶ್ನೆ ಮಾಡುತ್ತಿಲ್ಲ. ನನಗೆ ನನ್ನ ಹೆಂಡತಿ ಕಳುಹಿಸಿದ ಒಂದು ಬೆಲ್ಲದ ಉಂಡೆ ನನಗೆ ಎನರ್ಜಿ ನೀಡುತ್ತದೆ. ಅದು ನನ್ನ ನಾಯಕತ್ವʼʼಎಂದು ನೇಹಾ ಮುಂದೆ ಕೂಗಾಡಿದ್ದಾರೆ.‌

ಇದನ್ನೂ ಓದಿ | Bigg Boss Kannada | ಉಡುಗೊರೆ ನೋಡಿ ಕುಣಿದು ಕುಪ್ಪಳಿಸಿದ್ರು ರೂಪೇಶ್‌ ಶೆಟ್ಟಿ: ಭಾವುಕರಾದ್ರು ವಿನೋದ್‌!

ಮನೆಯಲ್ಲಿ ಅರುಣ್‌ ಸಾಗರ್‌ ಅವರು ಜೋಕರ್‌ ರೀತಿಯಲ್ಲೇ ಮತ್ತೆ ವೇಷ ಹಾಕಿದ್ದು ʻʻಕ್ಷಮಿಸಿ ಎನ್ನುವ ಬಿಳಿ ಪಟ್ಟಿಯನ್ನು ಕಟ್ಟಿಕೊಂಡೇ ಆಡಿದ್ದಾರೆ. ಮನೆಯ ಎಲ್ಲಾ ಸದಸ್ಯರಿಗೂ ಕ್ಷಮೆಯನ್ನು ಕೇಳಿದ್ದಾರೆ. ಈ ಬಗ್ಗೆ ಪ್ರಶಾಂತ್‌ ಸಂಬರಗಿ ಅವರು ಅರುಣ್‌ ಸಾಗರ್‌ ಅವರಿಗೆ ʻʻಈ ರೀತಿ ಕ್ಷಮೆ ಎಲ್ಲರಲ್ಲಿಯೂ ಕೇಳಬೇಡ. ಕ್ಷಮೆಗೆ ಅರ್ಥವೇ ಇರುವುದಿಲ್ಲʼʼ ಎಂದಿದ್ದಾರೆ.

ದುರಾಸೆ ಎಂಬ ಪದಕ್ಕೆ 32ನೇ ದಿನವೂ ಬಿಗ್‌ ಬಾಸ್‌ ಮೆನಯಲ್ಲಿ ಚರ್ಚೆಗಳು ಆಗಿದ್ದು, ಎಲ್ಲವೂ ಸರಿ ಹೋಗುವ ಹೊತ್ತಲ್ಲಿ ಪ್ರಶಾಂತ್‌ ಸಂಬರಗಿ ಫಿಟ್ಟಿಂಗ್‌ ಇಟ್ಟು ಅರುಣ್‌ ಸಾಗರ್‌ ಅವರಿಗೆ ಕೆರಳಿಸುತ್ತಾರೆ ಎಂದು ಮನೆಯವರು ಮಾತನಾಡಿಕೊಂಡಿದ್ದಾರೆ. ಹಲವು ಸದಸ್ಯರು ಪ್ರಶಾಂತ್‌ ಸಂಬರಗಿ ಅವರು ಎಂಟ್ರಿ ಕೊಟ್ಟಾಗಲೇ ಈ ಜಗಳ ತಾರಕಕ್ಕೆ ಏರಿದೆ ಎಂದು ಮಾತನಾಡಿಕೊಂಡರು. ಮನೆಯಲ್ಲಿ ಈ ಎಲ್ಲ ಭಿನ್ನಾಭಿಪ್ರಾಯಗಳು ತನ್ನಿಂದಲೇ ಆಗಿದೆ ಎಂದು ಸಾನ್ಯ ರೂಪೇಶ್‌ ಬಳಿ ಅಳಲು ತೋಡಿಕೊಂಡರು.

ಇದನ್ನೂ ಓದಿ | Bigg Boss Kannada | ಕ್ಯಾಪ್ಟನ್ಸಿ ಪಾಯಿಂಟ್ಸ್‌ ಬೇಕಾ, ಉಡುಗೊರೆ ಬೇಕಾ: ದೂರು, ದುರಾಸೆಗಳ ನಡುವೆ ಹೆಚ್ಚಾಯ್ತು ವಾಗ್ವಾದ!

Exit mobile version