ಬೆಂಗಳೂರು: ಬಿಗ್ ಬಾಸ್ ಸೀಸನ್ 9ರ (Bigg Boss Kannada) 20ನೇ ದಿನ ಕಳಪೆ ಮತ್ತು ಉತ್ತಮವನ್ನು ಸ್ಪರ್ಧಿಗಳು ನೀಡಿದ್ದಾರೆ. ಈ ವಾರ ದೀಪಿಕಾ ದಾಸ್ ಅತ್ಯುತ್ತಮ ಪ್ರದರ್ಶನಕಾರ ಜತೆ ಕ್ಯಾಪ್ಟನ್ ಆಗಿದ್ದಾರೆ. ಅರುಣ್ ಸಾಗರ್ ಕಳಪೆ ಪ್ರದರ್ಶನ ತೋರಿದ್ದಾರೆ. ಈ ಕುರಿತು ಅರುಣ್ ಸಾಗರ್ ಮನೆಯವರ ಮೇಲೆ ಮಾನವೀಯತೆಯ ವಿಚಾರಕ್ಕೆ ಗರಂ ಆದರು.
ಮನೆಯವರೆಲ್ಲರೂ ಅರುಣ್ ಸಾಗರ್ ಜೈಲಿಗೆ ಹೋಗುವುದು ಬೇಡ ಎಂದರು. ಹಾಗೇ ಆರೋಗ್ಯದ ಸಮಸ್ಯೆ ಇದ್ದ ಕಾರಣ ಪ್ರಶಾಂತ್ ಸಂಬರಗಿ ತಾವು ಹೋಗುವುದಾಗಿ ಹೇಳಿದರು. ಸದಸ್ಯರು ಈ ಕುರಿತು ಮಾತಾಡುವಾಗ ಅರುಣ್ ಸಾಗರ್ ಕೂಗಾಡಿದ್ದಾರೆ.
ಅರುಣ್ ಸಾಗರ್ ಮಾತನಾಡಿ ʻʻನನಗೆ ಈ ಮೊದಲು ಎದೆ ನೋವು ಇತ್ತು. ಆದರೂ ಟಾಸ್ಕ್ ಆಡಿದ್ದೇನೆ. ಪಾರ್ಟಿಸಿಪೇಟ್ ಮಾಡಬೇಕಿತ್ತು, ಪರ್‌ಫಾರ್ಮರ್ ತರ ಇದ್ದಿದ್ದು ಅಷ್ಟೇ. ಆದರೆ ನೀವೆಲ್ಲರೂ ಹೇಗೆ ಯೋಚಿಸುತ್ತಿದ್ದೀರಾ ಅಂದರೆ ನೀವು ಮಾನವೀಯತೆ ಬಗ್ಗೆ ಮಾತನಾಡಲು ಬರುತ್ತೀರಿ ಆದರೆ ಮಾನವೀಯತೆ ಎನ್ನುವುದು ನಿಮ್ಮೊಳಗೆ ತುಂಬಾ ಜನಕ್ಕೆ ಇಲ್ಲ. ನನಗೆ ಕಳಪೆ ಕೊಟ್ಟಿದ್ದಕ್ಕೆ ಬೇಸರ ಇಲ್ಲ. ನೀವು ಯಾರೂ ಕೂಡ ಗೇಮ್ ಅನ್ನು ಬೇರೆ ತರಹ ಯೋಚನೆ ಮಾಡುವುದಿಲ್ಲ. ಸುದೀಪ್ ಅವರು ಹೇಳಿದಾಗಲೇ ನಿಮಗೆ ಅರಿವಾಗುತ್ತದೆ. ಗೇಮ್‌ನಲ್ಲಿ ಕಳ್ಳ ಯಾಕೆ ಆಗಬಾರದು? ಸುಳ್ಳ ಯಾಕೆ ಆಗಬಾರದು? ಹೇಳಿದಾರಾ ಬಿಗ್ ಬಾಸ್? ನಾನೇ ಹೋಗ್ತೀನಿ ಅಂದರೂ ನಿಮ್ಮ ಕನಿಕರ ನನಗೆ ಬೇಡ. ಯಾವ ಸಂದರ್ಭಕ್ಕೆ ಯಾವ ಕ್ಷಣಕ್ಕೆ ಹ್ಯೂಮಾನಿಟಿ ತೋರಸಿಬೇಕು ಅದು ಹ್ಯೂಮನ್.
ಇದನ್ನೂ ಓದಿ | Bigg Boss Kannada | ಕಾವ್ಯಶ್ರೀ ಮಚ್ಚೆಗೆ ಆರ್ಯವರ್ಧನ್ ಭವಿಷ್ಯ: ಕ್ಯಾಮೆರಾ ಸ್ವಲ್ಪ ತಿರುಗಣ್ಣ ಅಂದ್ರು ರಾಜಣ್ಣ!
ಪಕ್ಕದಲ್ಲಿ ಇದ್ದವನನ್ನು ಉಸಿರಾಡಲು ನೆನಸಿಕೊಳ್ಳದವರು ಈಗ ಜೈಲಿಗೆ ಹೋಗಬೇಕಾದರೆ ಬರುತ್ತಾ? ನೀವು ಯಾರು ಮಾತನಾಡೋದು ಬೇಡ. ನನಗೂ ವಿಲ್ ಪವರ್ ಇದೆ. ಇದು ನನ್ನ ಫೇರ್ ಗೇಮ್. ಕಳ್ಳ ಎಂದುಕೊಂಡೆ ಮಾಡಿರೋದು. ನೀವು ನೀವಾಗಿ ಆಡೋದು ಬೇರೆ. ಆಟ ಎಂದು ಆಡೋದೆ ಬೇರೆ. ನಾನು ಯಾರನ್ನೂ ಪರ್ಸನಲ್ ಆಗಿ ತೆಗೆದುಕೊಳ್ಳುವುದಿಲ್ಲ. ಗೇಮ್ ಎಂದರೆ ಏನು, ಸ್ಟೋರಿ ಏನು? ನಿಮಗೆ ತೆಗೆದುಕೊಳ್ಳಲು ಆಗಿಲ್ಲ. ನಾನು ಹೇಳಬಹುದಿತ್ತು. ಮನೆಗೆ ಹೋಗುತ್ತೇನೆ ಎಂದು. ಇಷ್ಟೂದಿನ ಇದ್ದಿದ್ದೂ ಕೂಡ ವಿಲ್ ಪವರ್. ಆಟ ಆಡುವಾಗ ಕುಳಿತುಕೊಳ್ಳಿ ಅನ್ನಬಹುದಿತ್ತು. ಆಟದಲ್ಲಿ ತೊಂದರೆ ಆದರೆ ಆಟದಲ್ಲಿ ಅಷ್ಟೇ ಅರುಣ್ ಸಾಗರ್ ಅಲ್ಲ. ಕಳಪೆಗೆ ಒಂದು ವ್ಯಕ್ತಿತ್ವ ಇರುತ್ತದೆ.ʼʼ ಎಂದು ಗರಂ ಆದರು.
ಬಿಗ್ ಬಾಸ್ ಅರುಣ್ ಸಾಗರ್ ಆರೋಗ್ಯ ಸುಧಾರಣೆ ಆದ ನಂತರ ಜೈಲಿಗೆ ಸೇರಿ ಒಂದು ದಿನದ ಮಟ್ಟಿಗೆ ನಿಭಾಯಿಸಬೇಕು ಎಂದು ಆದೇಶ ನೀಡಿದರು.
ಇದನ್ನೂ ಓದಿ | Bigg Boss Kannada | ಇನ್ನು ಮುಂದೆ ವಾರಾಂತ್ಯದ ಎಪಿಸೋಡ್‌ಗಳು ರಾತ್ರಿ 9ಕ್ಕೆ ಪ್ರಸಾರ: ಸಿಹಿ ಸುದ್ದಿ ನೀಡಿದ ಬಿಗ್ ಬಾಸ್!