Site icon Vistara News

Bigg Boss Kannada | ಸಾನ್ಯ ಕುರಿತು ಮನೆಯಲ್ಲಿ ಗುಸು ಗುಸು: ಅರುಣ್‌ ಸಾಗರ್‌ ಹೇಳೋದೇನು?

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ (Bigg Boss Kannada) ಈಗಾಗಲೇ ಮನೆಯ ಸದಸ್ಯರಿಗೆ ಟಾಸ್ಕ್‌ ನೀಡಲು ಶುರು ಮಾಡಿದ್ದಾರೆ. ಈ ವಾರ ಅರುಣ್‌ ಸಾಗರ್‌ ಅವರು ಸಾನ್ಯರ ಕುರಿತು ಟಾಸ್ಕ್‌ ವಿಚಾರವಾಗಿ ಬೇಸರ ಹೊರಹಾಕಿದ್ದಾರೆ. ಸಾನ್ಯರ ಮಾತಿನ ಬಗ್ಗೆಯೂ ಕೂಡ ಪ್ರಶಾಂತ್‌ ಸಂಬರಗಿ, ರಾಕೇಶ್‌ ಮುಂದೆ ಪ್ರಸ್ತಾಪಿಸಿದ್ದಾರೆ.

ಅರುಣ್‌ ಸಾಗರ್‌ ಮಾತನಾಡಿ ʻʻಸಾನ್ಯ ಒಳ್ಳೆಯ ಹುಡುಗಿ. ಆದರೆ ಅವಳು ಮಾತನಾಡುವ ಟೋನ್‌ ನನಗೆ ಹಿಡಿಸುವುದಿಲ್ಲ. ಅವಳಿಗೆ ಗೊತ್ತಿಲ್ಲದಾಗೇ ಅವಳು ಡೌನ್‌ ಮಾಡಿ ಬಿಡುತ್ತಾಳೆ. ಅನುಭವದಿಂದ ಬರುವ ಪದಗಳೇ ಬೇರೆ. ಓದಿಕೊಂಡು ಬರುವ ಪದಗಳೇ ಬೇರೆʼʼ ಎಂದಿದ್ದಾರೆ. ಪ್ರಶಾಂತ್‌ ಸಂಬರಗಿ ಮಾತನಾಡಿ ʻʻಒಂದು ಉದಾಹರಣೆ ಕೊಡುತ್ತೇನೆ. ಹಿಂದಿನ ರಾತ್ರಿ ಸಾನ್ಯ ಒಂದು ಕಂಪ್ಲೆಂಟ್‌ ಮಾಡುತ್ತಾರೆ. ಅನುಪಮಾ ಬಗ್ಗೆ ನೆಗೆಟಿವ್‌ ಮಾತಾಡಿದರು. ವೇದಿಕೆ ಮೇಲೆ ಅನುಪಮಾ ನನಗೆ ಹುರಿದುಂಬಿಸಿದರು. ಸಪೋರ್ಟ್‌ ಮಾಡಿದರುʼʼ ಎನ್ನುತ್ತಾರೆ. ಇನ್ನೊಂದು ಕಡೆ ಇದನ್ನು ಗಮನಿಸಿದ ರೂಪೇಶ್‌ ಶೆಟ್ಟಿ ಅವರು ರೂಪೇಶ್‌ ರಾಜಣ್ಣ ಜತೆ ʻʻಅರುಣ್‌ ಅಣ್ಣಾ ಬುದ್ಧಿ ಹೇಳಲು ಶುರು ಮಾಡಿದ್ದಾರೆʼʼ ಎಂದರು. ರೂಪೇಶ್‌ ರಾಜಣ್ಣ ಪ್ರತಿಕ್ರಿಯೆ ನೀಡಿ ʻʻ15 ಜನ 15 ತರಹ ಇದ್ದಾರೆ ಇಲ್ಲಿʼʼಎಂದರು.

Bigg Boss Kannada

ಇದನ್ನೂ ಓದಿ | Bigg Boss Kannada | ಒಗ್ಗಟ್ಟಿನ ಟಾಸ್ಕ್‌ನಲ್ಲಿ ಮನಸುಗಳ ಒಡಕು: ಅರುಣ್‌ ಸಾಗರ್‌ ಮಾತಿಗೆ ಕಣ್ಣೀರಿಟ್ಟ ನೇಹಾ!

ಸಾನ್ಯರಿಗೆ ಅರುಣ್‌ ಅವರು ಮಾತನಾಡಿಕೊಳ್ಳುತ್ತಿರುವುದು ಬೆಳಕಿಗೆ ಬಂದ ಕೂಡಲೇ ರಾಕೇಶ್‌ ಜತೆ ನಂತರ ಚರ್ಚಿಸಿದ್ದಾರೆ. ಸ್ವತಃ ಸಾನ್ಯ ಅವರೇ ಅರುಣ್‌ ಸಾಗರ್‌ ಮುಂದೆ ಹೋಗಿ ಮಾತನಾಡಿದ್ದಾರೆ. ಅರುಣ್‌ ಸಾಗರ್‌ ಮಾತನಾಡಿ ʻʻನೀನು ಟಾಸ್ಕ್‌ ಆಡುವುದು ತುಂಬಾ ಖುಷಿಯೂ ಇದೆ, ಹೆಮ್ಮೆಯೂ ಇದೆ. ಆದರೆ ಎಲ್ಲೋ ಒಂದು ಕಡೆ ನೀನು ಡಾಮಿನೇಟ್‌ ಮಾಡುತ್ತಿದ್ದೀಯಾ. ಆ ತರ ಮಾಡಬಾರದು. ನನ್ನ ಕೇರ್‌ ನನಗೆ ಗೊತ್ತಿದೆ. ಎಲ್ಲಿ ಹೇಗೆ ಇರಬೇಕು ಎನ್ನುವುದು ಗೊತ್ತು. ನಿನಗೆ ಆಡುವ ಹುಮ್ಮಸ್ಸೋ ಏನೋ ಗೊತ್ತಿಲ್ಲ. ನಿನಗೆ ತಾಳ್ಮೆ ಇರಬೇಕು. ಯೋಚನೆ ಮಾಡಬೇಕು. ನನಗೆ ನಿನ್ನ ಮೇಲೆ ನಿನ್ನೆ ತುಂಬಾ ಸಿಟ್ಟು ಬಂದಿತ್ತು. ಆಟದ ಟೈಮ್‌ ಅಲ್ಲಿ ಸರಿ ಅಲ್ಲ ಅಂದು ಸುಮ್ಮನಾದೆ. ನೀನು ಹೇಳುವುದು ಸರಿಯಾಗೇ ಇರುತ್ತದೆ. ಆದರೆ ಹೇಳುವ ರೀತಿ ಸರಿಯಾಗಿರಬೇಕು ಎಂದುʼʼ ಹೇಳಿದರು. ಸಾನ್ಯ ನಂತರ ಮಾತನಾಡಿ ʻʻನಾನು ತಿದ್ದಿಕೊಳ್ಳುತ್ತೇನೆ ʼʼಎಂದರು.

Bigg Boss Kannada

ಐಸ್‌ಕ್ರೀಂಗಾಗಿ ಹಗ್ಗ ಜಗ್ಗಾಟ!
ಬಿಗ್‌ ಬಾಸ್‌ ಮನೆಯ ಸದಸ್ಯರಿಗೆ ಒಂದು ಚಟುವಟಿಕೆಯನ್ನು ನೀಡಿತ್ತು. ಈ ಟಾಸ್ಕ್‌ ಎರಡು ಹಂತದಲ್ಲಿ ನಡೆದಿದ್ದು, ಹಗ್ಗ ಜಗ್ಗಾಟದ ಮಾದರಿಯಲ್ಲಿ ಒಬ್ಬರನೊಬ್ಬರು ಎಳೆದಾಡಿಕೊಂಡು, ತಮಗೆ ಮೀಸಲಿರುವ ವಸ್ತುಗಳತ್ತ ಹೋಗಲು ಪ್ರಯತ್ನಿಸಿ ಅಲ್ಲಿರುವ ವಸ್ತುಗಳನ್ನು ತಮ್ಮ ಬುಟ್ಟಿಯಲ್ಲಿ ಎಸೆಯಬೇಕು. ಎರಡನೇ ಹಂತದಲ್ಲಿ ಎರಡೂ ತಂಡದಿಂದ ತಲಾ ಇಬ್ಬರು ತಮ್ಮ ತಂಡದ ಬುಟ್ಟಿಯಲ್ಲಿರುವ ವಸ್ತುಗಳನ್ನು ಟಿವಿಯಲ್ಲಿ ತೋರಿಸಿದ ಚಿತ್ರದಂತೆ ರೆಫ್ರಿಜರೇಟರ್‌ನಲ್ಲಿ ಜೋಡಿಸಬೇಕು.

ಒಂದು ತಂಡದಲ್ಲಿ ರೂಪೇಶ್‌ ರಾಜಣ್ಣ, ನೇಹಾ, ಪ್ರಶಾಂತ್‌ ಸಂಬರಗಿ, ದೀಪಿಕಾ ದಾಸ್‌, ಕಾವ್ಯಶ್ರೀ, ರಾಕೇಶ್‌ ಅಡಿಗ, ಅನುಪಮಾ ಇದ್ದರೆ, ಇನ್ನೊಂದು ಟೀಮ್‌ನಲ್ಲಿ ರೂಪೇಶ್‌ ಶೆಟ್ಟಿ, ಸಾನ್ಯ, ಆರ್ಯವರ್ಧನ್‌, ಅಮೂಲ್ಯ, ದಿವ್ಯಾ ಇದ್ದರು. ಕೊನೆಯಲ್ಲಿ ಸಾನ್ಯ ಟೀಮ್‌ ವಿಜೇತರಾಗಿ ಹೊರಹೊಮ್ಮಿದರು.

Bigg Boss Kannada

ಇದನ್ನೂ ಓದಿ | Bigg Boss Kannada | ಕ್ಯಾಪ್ಟನ್‌ ಆಗಿರುವ ಖುಷಿಯ ನಡುವೆಯೂ ಸಾನ್ಯ ಅತ್ತಿದ್ಯಾಕೆ?

Exit mobile version