Site icon Vistara News

Bigg Boss Kannada | ಮನೆಮಂದಿಗೆ ಪತ್ರ ಬರೆದ ಅರುಣ್‌ ಸಾಗರ್‌: ಫುಲ್‌ ಖುಷ್‌ ಆದ್ರು ಸ್ಪರ್ಧಿಗಳು!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada) ಅರುಣ್‌ ಸಾಗರ್‌ ಅವರು ಏನಾದರೂ ಕ್ರಿಯೇಟಿವ್‌ ಆಟಗಳನ್ನು ಆಡುತ್ತಲೇ ಇರುತ್ತಾರೆ. ಇದೀಗ ಮನೆಯ ಸದಸ್ಯರನ್ನು ರಂಜಿಸಲು ತಮ್ಮಿಷ್ಟದವರು ತಮಗೆ ಪತ್ರ ಬರೆದಂತೆ ಎಲ್ಲ ಸ್ಪರ್ಧಿಗಳಿಗೂ ಒಂದೆರಡು ವಾಕ್ಯಗಳನ್ನು ಬರೆದು ಅರುಣ್ ಸಾಗರ್ ಸರ್‌ಪ್ರೈಸ್ ನೀಡಿದ್ದಾರೆ. 

‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದಲ್ಲಿ ಜೋಕರ್ ಆಗಿ ಹೀಗೆ ವಿವಿಧ ಗೆಟಪ್‌ಗಳನ್ನು ಹಾಕಿ ನೋಡುಗರಿಗೆ ಅರುಣ್ ಸಾಗರ್ ಮನರಂಜನೆ ಕೊಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಮನೆಯಲ್ಲಿ ಗಾರ್ಡನ್‌ ಏರಿಯಾದಲ್ಲಿ ಕುಳಿತು ಒಟ್ಟಿಗೆ ಕೂತು ಸದಸ್ಯರು ಊಟ ಮಾಡಿದ್ದಾರೆ. ಮನೆಯ ಸದಸ್ಯರಿಗೆ ಪತ್ರವನ್ನು ಬರೆದಿದ್ದು, ಆರ್ಯವರ್ಧನ್‌ ಗುರೂಜಿ ಅವರಿಗೆ ʻʻಅಪ್ಪ ನಿನ್ನ ಮೌನದಲ್ಲಿ ಪ್ರೀತಿಯಲ್ಲಿ ನಾನು ಇರುವೆ. ನಡೆ ಮುಂದೆ ನಡೆ ಮುಂದೆ -ಆಲಿಯಾ ಅಬಿದಾ’’ ಎಂದು ಬರೆದಿದ್ದಾರೆ. ‘ನಿನ್ನ ಮೌನದ ಮಾತು ನದಿಯಂತೆ ಹರಿಯಲಿ. ನಡೆ ಮುಂದೆ ನಡೆ ಮಗುವೇ- ನಿನ್ನ ಅಪ್ಪ’ ಎಂದು ರಾಕೇಶ್‌ ಅಡಿಗ ಅವರಿಗೆ ಬರೆದಿದ್ದಾರೆ.

ಇದನ್ನೂ ಓದಿ | Bigg Boss Kannada | ʻಕಳಪೆʼ ವಿಚಾರಕ್ಕೆ ಅಮೂಲ್ಯಗೆ ಕಿಚ್ಚನ ಕ್ಲಾಸ್‌!

ಸದ್ಯಕ್ಕೆ ‘ಬಿಗ್ ಬಾಸ್’ ಮನೆಯಲ್ಲಿ 8 ಮಂದಿ ಇದ್ದಾರೆ. ಅರುಣ್ ಸಾಗರ್, ದೀಪಿಕಾ ದಾಸ್, ರೂಪೇಶ್ ರಾಜಣ್ಣ, ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ದಿವ್ಯಾ ಉರುಡುಗ ಹಾಗೂ ಅಮೂಲ್ಯ ಗೌಡ. ಈ ವಾರ ಇಬ್ಬರು ಎಲಿಮಿನೇಟ್‌ ಆಗುತ್ತಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ | Bigg Boss Kannada | ಹಾವು – ಏಣಿ ಆಟಕ್ಕೆ ಮಂಜು ಪಾವಗಡ ಸ್ಪೆಷಲ್ ಗೆಸ್ಟ್: ರಾಕೇಶ್‌ ಅಡಿಗ ಕಕ್ಕಾ ಬಿಕ್ಕಿ ಆಗಿದ್ದೇಕೆ?

Exit mobile version