Site icon Vistara News

Bigg Boss Kannada | ಅರುಣ್‌ ಸಾಗರ್‌ ವರ್ತನೆಗೆ ಸ್ಪರ್ಧಿಗಳ ಅಸಮಾಧಾನ; ನಡೆದದ್ದಾದರೂ ಏನು?

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9 (Bigg Boss Kannada) ಐದನೇ ದಿನಕ್ಕೆ ಕಾಲಿಟ್ಟಿದೆ. ಕೇವಲ ನಾಲ್ಕೇ ದಿನಕ್ಕೆ ಸ್ಪರ್ಧಿಗಳ ಮಧ್ಯೆ ಮನಸ್ತಾಪಗಳು ಹೆಚ್ಚಾಗುತ್ತಿವೆ. ಅದರಲ್ಲಿಯೂ ಅರುಣ್‌ ಸಾಗರ್‌ ವರ್ತನೆ ಮನೆಯಲ್ಲಿ ಮಿತಿ ಮೀರಿದಂತಿದೆ. ವಿಧೂಷಕನೆಂಬ ಬ್ಯಾಂಡ್‌ ಅನ್ನು ಸಹ ಸ್ಪರ್ಧಿಗಳಿಂದ ಪಡೆದುಕೊಂಡಿದ್ದ ಅವರು, ಈಗ ಹುಚ್ಚನೆಂಬ ಬಿರುದನ್ನು ಕೊಡುತ್ತಿದ್ದಾರೆ ಸ್ಪರ್ಧಿಗಳು.

ಕಲರ್ಸ್‌ ಕನ್ನಡ ಪ್ರೋಮೊ ಒಂದನ್ನು ಹಂಚಿಕೊಂಡಿದ್ದು, ಅರುಣ್‌ ಸಾಗರ್‌ ವರ್ತನೆಯ ವಿಡಿಯೊವನ್ನು ಶೇರ್‌ ಮಾಡಿದ್ದಾರೆ. ಬಿಗ್‌ ಬಾಸ್‌ ಮನೆ ಅಂದರೆ ಅದರದ್ದೇ ಆದ ಒಂದು ತೂಕ ಇದೆ. ಅರುಣ್ ಸಾಗರ್ ಬಿಗ್‌ ಬಾಸ್‌ ಮನೆಯ ಆಟಗಳನ್ನು ಗಂಭೀರವಾಗಿ ತೆಗೆದುಕೊಳ್ಳದೆ ಟಾಸ್ಕ್‌ಗಳನ್ನು ನಿರ್ಲ್ಯಕ್ಷ ತೋರಿದಂತೆ ಕಾಣಿಸುತ್ತಿದೆ. ಅರುಣ್‌ ಸಾಗರ್‌ ಈ ನಡವಳಿಕೆಗೆ ಪ್ರೇಕ್ಷಕರು ಕಮೆಂಟ್‌ ಮೂಲಕ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ | Bigg Boss Kannada | ಒಂದ್‌ ಕಡೆ ರಾಕೇಶ್‌ ಲವ್‌ ಕಹಾನಿ ಆದ್ರೆ: ಇನ್ನೊಂದ್ ಕಡೆ ಆರ್ಯವರ್ಧನ್‌ ಟ್ಯೂಷನ್‌!

Bigg Boss Kannada

ಅರುಣ್‌ ಸಾಗರ್‌ ವರ್ತನೆ ಬಗ್ಗೆ ನೆಟ್ಟಿಗರು ಸಖತ್‌ ಕ್ಲಾಸ್‌ ತೆಗೆದುಕೊಂಡಿದ್ದು, ʻʻಬಿಗ್ ಬಾಸ್ ಮನೆಯಲ್ಲಿ ಅರುಣ್‌ ಸಾಗರ್‌ ಹಿರಿಯ ವ್ಯಕ್ತಿಯಾಗಿದ್ದರೂ ಹೇಗೆ ಬೇಕಾದರೂ ಇರಬಹುದು ಎನ್ನುವುದು ತಪ್ಪು. ಆಯೋಜಕರು ಮಾಡಿದಂತಹ ಪ್ರಾಪರ್ಟಿ ಕೆಲಸಗಳು ವೇಸ್ಟ್ ಎಂಬಂತೆ ಭಾಸವಾಯಿತು. ಅದನ್ನು ಬೇರೆ ಯಾರೋ ಸದಸ್ಯರು ಮಾಡಿರುತ್ತಿದ್ದರೆ ದೊಡ್ಡ ಜಗಳಕ್ಕೇ ಕಾರಣವಾಗಿರುತ್ತಿತ್ತು. ಹೀಗಾಗಿ ಶನಿವಾರ ಅಂದರೆ ವೀಕೆಂಡ್‌ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ ಮಾತನಾಡಲೇಬೇಕು. ಅರುಣ್ ಸಾಗರ್‌ ಅತಿರೇಕದ ವರ್ತನೆ ಮಿತಿ ಮೀರುತ್ತಿದೆ. ಒಬ್ಬ ಸದಸ್ಯರನ್ನು ಹೀಯಾಳಿಸುವುದು, ಅವರ ಮನಸ್ಸಿಗೆ ಖುಷಿಯಾದರೂ ಕೂಡ ಉಳಿದವರು ಮನಸ್ಸಿನಲ್ಲಿ ಬೇಸರವನ್ನು ಉಂಟು ಮಾಡುತ್ತದೆ. ಅಷ್ಟು ದೊಡ್ಡವರಾಗಿ ಅದನ್ನು ಅರಿತಿರಬೇಕುʼʼ ಎಂದು ಕಮೆಂಟ್‌ ಮೂಲಕ ವ್ಯಕ್ತಪಡಿಸಿದ್ದಾರೆ.

Bigg Boss Kannada

ಐದನೇ ದಿನದ ಟಾಸ್ಕ್‌ನಲ್ಲಿ ಬಿಗ್‌ ಬಾಸ್‌ ಆದೇಶವನ್ನು ಹೇಳುವಾಗ ಅರುಣ್‌ ಸಾಗರ್‌ ತಾವೂ ಕೇಳಿಸಿಕೊಳ್ಳದೆ ಇತರರೂ ಕೇಳಿಸಿಕೊಳ್ಳದಂತೆ ಮಾಡಿದ್ದಾರೆ. ಇದು ಉಳಿದ ಸ್ಪರ್ಧಿಗಳಿಗೆ ಕೋಪ ತರಿಸುವಂತೆ ಮಾಡಿದೆ. ರೂಪೇಶ್‌ ಶೆಟ್ಟಿ ಈ ಬಗ್ಗೆ ಮಾತನಾಡಿ ʻʻಅರುಣ್‌ ಸಾಗರ್‌ ಫನ್‌ ಮಾಡುವಾಗ ನಗು ಬರುವುದಿಲ್ಲ. ಕೋಪ ಬರುತ್ತದೆ. ಅವರ ನಡವಳಿಕೆ ಹುಚ್ಚರ ತರ ಅನ್ನಿಸುತ್ತದೆ ಎಂದು ಹೇಳಿದ್ದಾರೆ. ಅನುಪಮಾ ಗೌಡ ಕೂಡ ʻʻಅರುಣ್‌ ಸಾಗರ್‌ಗೆ ಸೀನಿಯರ್‌ ಎಂಬ ಅಹಂಕಾರ ಬಂದು ಬಟ್ಟಿದೆʼʼ ಎಂದು ಅಸಮಾಧಾನ ಹೊರಹಾಕಿದ್ದಾರೆ.

Bigg Boss Kannada

ಇದನ್ನೂ ಓದಿ | Bigg Boss kannada | ಟಾಸ್ಕ್‌ನಲ್ಲಿ ಪ್ರಶಾಂತ್‌ ಸಂಬರಗಿ- ವಿನೋದ್‌ ಗೊಬ್ಬರಗಾಲ ಪಂದ್ಯ ಕಟ್ಟುವ ಪರಿಗೆ ಶಬ್ಬಾಸ್ ಗಿರಿ!

Exit mobile version