ಬೆಂಗಳೂರು: ಬಿಗ್ ಬಾಸ್ ಸೀಸನ್ 8ರಲ್ಲಿ (Bigg Boss Kannada) ಅರವಿಂದ್ ಮತ್ತು ದಿವ್ಯಾ ಉರುಡುಗ ಭಾಗವಹಿಸಿದ್ದರು. ನಂತರದಲ್ಲಿ ಇವರಿಬ್ಬರ ಮಧ್ಯೆ ಆತ್ಮೀಯತೆ ಬೆಳೆಯಿತು. ಇದೀಗ ಬಿಗ್ ಬಾಸ್ ಸೀಸನ್ 9ರಲ್ಲಿ ದಿವ್ಯಾ ಅವರು ‘ಪ್ರವೀಣ’ರಾಗಿ ಎಂಟ್ರಿ ಕೊಟ್ಟು ಉಳಿದ ಸ್ಪರ್ಧಿಗಳಿಗೆ ಪೈಪೋಟಿ ನೀಡುತ್ತಿದ್ದಾರೆ. ಭಾವಿ ಪತ್ನಿ ದಿವ್ಯಾ ಅವರಿಗೆ ಮಾಜಿ ಬಿಗ್ ಬಾಸ್ ಸ್ಪರ್ಧಿ ಅರವಿಂದ್ ಕೆ.ಪಿ ಪೋಸ್ಟ್ ಮೂಲಕ ಮೆಸೆಜ್ ಕಳುಹಿಸಿದ್ದಾರೆ.
ದಿವ್ಯಾಗೆ ʻʻಬಿಗ್ ಬಾಸ್ ಆಟವನ್ನು ಚೆನ್ನಾಗಿ ಆಡು, ಬಿಟ್ಟು ಕೊಡಬೇಡʼʼ ಎಂದು ಸೋಷಿಯಲ್ ಮೀಡಿಯಾದಲ್ಲಿ ಅರವಿಂದ್ ಬರೆದುಕೊಂಡಿದ್ದಾರೆ. ʻಮರಿಹುಳುನ ಕೈಬಿಟ್ಟರೆ, ಅದು ಎಂದಿಗೂ ಸುಂದರವಾದ ಚಿಟ್ಟೆಯಾಗುವುದಿಲ್ಲ. ನೆವರ್ ಗಿವ್ ಅಪ್ʼ ಎಂದು ಅರವಿಂದ್ ಅವರು ದಿವ್ಯಾ ಉರುಡುಗಗೆ ಬೆಂಬಲ ನೀಡಿದ್ದಾರೆ.
ಇದನ್ನೂ ಓದಿ | Bigg Boss Kannada | ಬಿಗ್ ಬಾಸ್ ಆಟ ಮುಗಿಸಿದ ಕಾವ್ಯಶ್ರೀ ಗೌಡ
ದಿವ್ಯಾ ಅವರು ಈಗಾಗಲೇ ಬಿಗ್ ಬಾಸ್‌ನಲ್ಲಿ ಹತ್ತು ವಾರಗಳನ್ನು ಪೂರೈಸಿದ್ದಾರೆ. ಕೆಲವೇ ದಿನಗಳು ಫಿನಾಲೆಗೆ ಬಾಕಿ ಇದೆ. ಈ ಹಿಂದೆ ವೀಕೆಂಡ್ ಪಂಚಾಯಿತಿಯಲ್ಲಿ ದಿವ್ಯಾ ಉರುಡುಗ ಅವರಿಗೆ ವಿರಹ ವೇದನೆ ಆಗಿದೆ ಎಂದು ಚರ್ಚೆ ಆಗಿತ್ತು. ಕಿಚ್ಚ ಸುದೀಪ್ ದೀಪಾವಳಿ ಪ್ರಯುಕ್ತ ಸದಸ್ಯರಿಗೆ ಲೆಟರ್ ಕಳುಹಿಸಿದ್ದರು. ದಿವ್ಯಾ ಉರುಡುಗ ಅವರಿಗೆ ʻʻವಿರಹ ವೇದನೆ ಮುಂದುವರಿಯಲಿʼʼಎಂದು ಬರೆದು ಕಳುಹಿಸಿದ್ದರು. ಪಂಚಾಯಿತಿಯಲ್ಲಿ ಗಿಫ್ಟ್ ಕೊಡುವುದಾದರೆ ಯಾರಿಗೆ ಯಾವ ಗಿಫ್ಟ್ ಕೊಡುತ್ತೀರಾ ಎಂಬ ಪ್ರಶ್ನೆಗೆ ರೂಪೇಶ್ ಶೆಟ್ಟಿ ಅವರು ದಿವ್ಯಾ ಉರುಡುಗ ಅವರಿಗೆ ಬೈಕ್ ಗಿಫ್ಟ್ ಮಾಡುತ್ತೇನೆ ಎಂದಿದ್ದರು.
ಈ ಬಗ್ಗೆ ಕಾರಣ ನೀಡಿದ ರೂಪೇಶ್ ಶೆಟ್ಟಿ ”ದಿವ್ಯಾ ಅವರು ನಮ್ಮ ಜತೆ ಊಟ ಮಾಡಬೇಕಿದ್ದರೂ ಒಂದು ಸೀಟ್ ಬಿಟ್ಟುಕೊಟ್ಟು ಅವರು (ಅರವಿಂದ್) ಇಲ್ಲಿ ಕೂರುತ್ತಿದ್ದರು ಎಂದು ಹೇಳುತ್ತಾರೆ. ಅವರ ಬಗ್ಗೆ ತುಂಬ ಮಾತನಾಡುತ್ತಿರುತ್ತಾರೆ. ನನಗೆ ಬೈಕರ್ ಕರೆದುಕೊಂಡು ಬರುವ ಶಕ್ತಿ ಇಲ್ಲ. ಹೀಗಾಗಿ ಬೈಕ್ ಆದರೂ ಗಿಫ್ಟ್ ಕೊಡೋಣʼʼಎಂದು ಹೇಳಿದ್ದರು.
ಇದನ್ನೂ ಓದಿ | Bigg Boss Kannada | ಕೊನೆಗೂ ಮದುವೆ ಬಗ್ಗೆ ರಿವೀಲ್ ಮಾಡಿದ ಸಾನ್ಯ ಅಯ್ಯರ್: ʻರೂಪಿ ಫ್ರೆಂಡ್‌ಶಿಪ್ ಬಿಡಲ್ಲʼಎಂದ ನಟಿ!