ಬೆಂಗಳೂರು : ಬಿಗ್ ಬಾಸ್ ಸೀಸನ್ 9ರ (Bigg Boss Kannada) 48ನೇ ದಿನ ಆರ್ಯವರ್ಧನ್ ಗುರೂಜಿ ಅವರು ಅರುಣ್ ಸಾಗರ್ ಅವರ ಹಾಗೇ ಜೋಕರ್ ವೇಷ ಹಾಕಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಕೈಯಲ್ಲಿ ‘ಕಿಚ್ಚ ಸುದೀಪ್’ ಎಂದು ಪೇಂಟ್ನಿಂದ ಬರೆಯಿಸಿಕೊಂಡಿದ್ದಾರೆ. ಇದರ ಜತೆಗೆ ರೂಪೇಶ್ ಶೆಟ್ಟಿ ಕೂಡ ಸಾನ್ಯ ಅಯ್ಯರ್ ಅವರ ನೆನಪಿನಲ್ಲಿ ತಮ್ಮ ಹಣೆಗೆ ಪಟ್ಟಿ ಕಟ್ಟಿಕೊಂಡಿದ್ದಾರೆ. ಜತೆಗೆ ತಮ್ಮ ಕೆನ್ನೆಗಳ ಮೇಲೆ ಹಾರ್ಟ್ ಶೇಪ್ ಪೇಂಟ್ ಮಾಡಿಸಿಕೊಂಡು ಅದರಲ್ಲಿ ಸಾನ್ಯ (SAN) ಎಂದು ಬರೆಸಿಕೊಂಡಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಆಗುತ್ತಿದ್ದು, ಆರ್ಯವರ್ಧನ್ ಹಾಗೂ ರೂಪೇಶ್ ಶೆಟ್ಟಿ ವೋಟ್ಗಾಗಿ ಹೀಗೆ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮೂಲಕ ವ್ಯಕ್ತಪಡಿಸಿದ್ದಾರೆ. ಕಿಚ್ಚ ಸುದೀಪ್ ಅವರ ಅಭಿಮಾನಿಗಳ ವೋಟ್ ಸೆಳೆಯಲು ಆರ್ಯವರ್ಧನ್ ಗುರೂಜಿ ಹೀಗೆ ಮಾಡಿದ್ದಾರೆ. ರೂಪೇಶ್ ಶೆಟ್ಟಿ ಅವರು ಸಾನ್ಯ ಹೆಸರಿನಲ್ಲಿ ಸಾನ್ಯ ಅವರ ಅಭಿಮಾನಿಗಳ ವೋಟ್ ಪಡೆಯಲು ಈ ರೀತಿ ನಾಟಕ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ | Bigg Boss Kannada | ಕಳಪೆ ಕೊಡುವ ವೇಳೆ ರೂಪೇಶ್ ರಾಜಣ್ಣಗೆ ದಿವ್ಯಾ ತಿರುಗೇಟು: ಹೇಗಿತ್ತುಆರ್ಯವರ್ಧನ್ ಏಕಪಾತ್ರಾಭಿನಯ?
ಆರ್ಯವರ್ಧನ್ ಗುರೂಜಿ ಅವರ ಮುಖಕ್ಕೆ ಜೋಕರ್ ರೀತಿ ಪೇಂಟ್ ಮಾಡಿದ್ದು ದಿವ್ಯಾ ಉರುಡುಗ. ರೂಪೇಶ್ ಶೆಟ್ಟಿ ಅವರ ಮುಖಕ್ಕೆ ಹಾರ್ಟ್ ಶೇಪ್ ಪೆಂಟ್ ಬರೆದವರೂ ದಿವ್ಯಾ ಉರುಡುಗ. ರೂಪೇಶ್ ಶೆಟ್ಟಿ ಅವರು ಸಾನ್ಯ ವಿಚಾರವಾಗಿ ಟಾಸ್ಕ್ ಸರಿಯಾಗಿ ನಿಭಾಯಿಸುತ್ತಿಲ್ಲ. ಅದೇ ರೀತಿ ಆರ್ಯವರ್ಧನ್ ಗುರೂಜಿ ಅವರು ಆಗಾಗ ಕಿಚ್ಚ ಅವರ ಹೆಸರಿನಲ್ಲಿ ಫೇಕ್ ಗೇಮ್ ಆಡುತ್ತಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ಆಗುತ್ತಿವೆ.
ಇದನ್ನೂ ಓದಿ | Bigg Boss Kannada | ಈ ವಾರದ ಕ್ಯಾಪ್ಟನ್ ಕಾವ್ಯಶ್ರೀ ಗೌಡ: ಕಳಪೆ ಪಟ್ಟ ಯಾರಿಗೆ?