Site icon Vistara News

Bigg Boss Kannada | ಆರ್ಯವರ್ಧನ್‌ ಗುರೂಜಿಯಿಂದಾಗಿ ಮನೆಮಂದಿಗೆ ಆಟವೂ ಇಲ್ಲ, ಸೌಕರ್ಯವು ಇಲ್ಲ!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada) ದೀಪಿಕಾ ದಾಸ್‌ ಅವರು ವೈಲ್ಡ್‌ ಕಾರ್ಡ್‌ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಬರಬರುತ್ತಲೇ ಟಾಸ್ಕ್‌ನಲ್ಲಿ ವಿನ್‌ ಆಗಿದ್ದಾರೆ ದೀಪಿಕಾ ದಾಸ್‌. ಇದೀಗ ಬಿಗ್‌ ಬಾಸ್‌ ಮನೆ ಅರಣ್ಯವಾಗಿದೆ. ಹಲವಾರು ಟಾಸ್ಕ್‌ಗಳನ್ನು ಬಿಗ್‌ ಬಾಸ್‌ ನೀಡಿದ್ದು ಆರ್ಯವರ್ಧನ್‌ ಗುರೂಜಿ ಅವರು ರೂಲ್ಸ್‌ ಬ್ರೇಕ್‌ ಮಾಡಿದ್ದಾರೆ.

ಪಂಚಾಮೃತ ಟಾಸ್ಕ್‌
ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಪಂಚಾಮೃತ ಟಾಸ್ಕ್‌ ನೀಡಿದ್ದು, ನೀಡಿರುವ ಐದು ಪದಾರ್ಥಗಳನ್ನು ಮಿಶ್ರಣ ಮಾಡಿ ಸೇವಿಸಬೇಕು. ಈ ಮಿಶ್ರಣವನ್ನು 5 ಜನ ಸದಸ್ಯರು ಸೇವಿಸಿದರೆ ಸೌಕರ್ಯ ಪಡೆಯುತ್ತಾರೆ. ದೀಪಿಕಾ ದಾಸ್‌, ಅರುಣ್‌ ಸಾಗರ್‌, ಕಾವ್ಯಶ್ರೀ ಗೌಡ, ರಾಕೇಶ್‌ ಅಡಿಗ ಹಾಗೂ ರೂಪೇಶ್‌ ಶೆಟ್ಟಿ ಟಾಸ್ಕ್‌ ನಿಭಾಯಿಸಿದರು.

ಇದನ್ನೂ ಓದಿ | Bigg Boss Kannada | ಹೇಗಿತ್ತು ಮನೆಯಲ್ಲಿ ರೂಪೇಶ್‌ ರಾಜಣ್ಣರ ನಳಪಾಕ?

ಟಾಸ್ಕ್‌ಗೆ ಕ್ಯಾರೆ ಎನ್ನದ ಆರ್ಯವರ್ಧನ್‌ ಗುರೂಜಿ
ಬಿಗ್‌ ಬಾಸ್‌ ಮನೆಯಲ್ಲಿ ಆರ್ಯವರ್ಧನ್‌ ಗುರೂಜಿ ಅವರು ಯಾವಾಗಲೂ ತಮ್ಮ ನಿಲುವೇ ಸರಿ ಎಂದು ವಾದ ಮಾಡುತ್ತಲೇ ಇರುತ್ತಾರೆ. ಕೆಲವೊಮ್ಮೆ ತಪ್ಪು ಮಾಡಿದರೂ ಅದನ್ನು ಒಪ್ಪಿಕೊಳ್ಳುವುದಿಲ್ಲ. ಈಗ ಆರ್ಯವರ್ಧನ್ ಅವರು ಒಂದು ದೊಡ್ಡ ತಪ್ಪು ಮಾಡಿದ್ದಾರೆ. ಇದರಿಂದ ಮನೆ ಮಂದಿಗೆ ದೊಡ್ಡ ಮಟ್ಟದ ನಷ್ಟ ಉಂಟಾಗಿದೆ.

ಬಿಗ್ ಬಾಸ್‌ನಲ್ಲಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್‌ ಅನುಸಾರ ನೀರಿನಲ್ಲಿ ಮರದ ಪಂಜರ ಒಂದನ್ನು ಇಡಲಾಗಿತ್ತು. ಇದಕ್ಕೆ 12 ನಟ್‌ಗಳನ್ನು (Nut) ಜೋಡಿಸಲಾಗಿತ್ತು. ಇದನ್ನು ಆಟ ಆಡುವ ಸ್ಪರ್ಧಿಗಳು ಬರಿಗೈನಲ್ಲಿ ಬಿಚ್ಚಬೇಕಿತ್ತು. ಆದರೆ ಆರ್ಯವರ್ಧನ್‌ ಗುರೂಜಿ ಬಟ್ಟೆಯನ್ನು ಉಪಯೋಗಿಸಿ ಬೋಲ್ಟ್‌ ತೆಗೆದರು. ಈ ಕಾರಣದಿಂದಾಗಿ ಬಿಗ್‌ ಬಾಸ್‌ ಸೌಕರ್ಯವನ್ನು ಕ್ಯಾನ್ಸಲ್‌ ಮಾಡಿದ್ದಾರೆ.

ಏನಿದು ಟಾಸ್ಕ್‌?
ಬಿಗ್ ಬಾಸ್ ಮನೆ ಇದೀಗ ಅರಣ್ಯವಾಗಿದೆ. ಸ್ಪರ್ಧಿಗಳೆಲ್ಲ ಕಾಡಾಗಿರುವ ಬಿಗ್ ಬಾಸ್ ಮನೆಯ ಗಾರ್ಡನ್ ಏರಿಯಾದಲ್ಲೇ ಮೂರು ದಿನ ವಾಸಿಸಬೇಕಿದೆ. ಬಿಗ್ ಬಾಸ್ ಮನೆಯ ಉಳಿದ ಭಾಗಗಳನ್ನು ಲಾಕ್ ಮಾಡಲಾಗಿದೆ. ಅಡುಗೆ, ಊಟ, ತಿಂಡಿ ಎಲ್ಲವೂ ಗಾರ್ಡನ್ ಏರಿಯಾದಲ್ಲೇ ಮಾಡಬೇಕಿದೆ. ಅಕ್ಕಿ, ಬೇಳೆ, ಉಪ್ಪು, ಒಂದು ಹೊತ್ತಿನ ಹಾಲನ್ನು ಮಾತ್ರ ಸ್ಪರ್ಧಿಗಳಿಗೆ ನೀಡಲಾಗಿದೆ. ಟಾಸ್ಕ್‌ನ ಸೌಕರ್ಯಗಳನ್ನು ಪಡೆಯಲು ಕಾಲಕಾಲಕ್ಕೆ ಬಿಗ್ ಬಾಸ್‌ ನೀಡುವ ಟಾಸ್ಕ್‌ಗಳಲ್ಲಿ ಸ್ಪರ್ಧಿಗಳು ಗೆಲ್ಲಬೇಕಿದೆ. ಅತಿ ಹೆಚ್ಚು ಆಟ ಗೆದ್ದವರು ಕ್ಯಾಪ್ಟನ್ಸಿ ಟಾಸ್ಕ್ ಅಭ್ಯರ್ಥಿಯಾಗುತ್ತಾರೆ.

ಇದನ್ನೂ ಓದಿ | Bigg Boss Kannada | ಆರ್ಯವರ್ಧನ್‌ ಗುರೂಜಿಗೆ ಸಖತ್‌ ಕ್ಲಾಸ್‌ ತೆಗೆದುಕೊಂಡ ದಿವ್ಯಾ ಉರುಡುಗ


Exit mobile version