Site icon Vistara News

Bigg Boss Kannada | ನನ್ನ ರಕ್ತ ಕುದಿಯುತ್ತಿದೆ ಎಂದ ಆರ್ಯವರ್ಧನ್ ಗುರೂಜಿ!

Bigg Boss Kannada

ಬೆಂಗಳೂರು: ‘ಬಿಗ್‌ ಬಾಸ್‌’ ಒಟಿಟಿ ಕನ್ನಡ ಸೀಸನ್‌-1 (Bigg Boss Kannada) ದಿನದಿಂದ ದಿನಕ್ಕೆ ಸಾಕಷ್ಟು ಕುತೂಹಲವನ್ನು ಕೆರಳಿಸುತ್ತಿದೆ. ಇದೀಗ 5 ದಿನಗಳ ಸಮಯವನ್ನು ಒಟ್ಟೊಟ್ಟಿಗೆ ಕಳೆದಿರುವ 16 ಸ್ಪರ್ಧಿಗಳು, ಒಳಗೊಳಗೆ ಕಾದಾಟ ಮತ್ತು ಕಿತ್ತಾಟ ಶುರುಮಾಡಿದ್ದಾರೆ. ಇದು ಬಿಗ್‌ ಬಾಸ್‌ ಸ್ಪರ್ಧಿಗಳ ವ್ಯಕ್ತಿತ್ವದ ಅನಾವರಣ ಕೂಡ ಹೌದು. ಇದರ ನಡುವೆ ‘ನಾನು ಅಂದ್ರೆ ನಂಬರ್‌, ನಂಬರ್‌ ಅಂದ್ರೆ ನಾನು’ ಅಂತಿದ್ದ ಆರ್ಯವರ್ಧನ್ ಗುರೂಜಿ ‘ನನ್ನ ರಕ್ತ ಕುದಿಯುತ್ತಿದೆ’ ಎಂದು ಆಕ್ರೋಶ ಭರಿತ ಮಾತುಗಳನ್ನು ಹೊರಹಾಕಿ ದೊಡ್ಡ ಸದ್ದು ಮಾಡುತ್ತಿದ್ದಾರೆ.

ಹೌದು, ಬಿಗ್‌ ಬಾಸ್‌ ಮನೆಯಲ್ಲಿ ಟಾಸ್ಕ್‌ ಆರಂಭವಾದ ತಕ್ಷಣ ಗುಂಪುಗಳು ಹುಟ್ಟಿಕೊಂಡಿವೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗದಷ್ಟು ಕೋಪವೂ ಹುಟ್ಟಿಕೊಂಡಿದೆ. ಮೊದಲ ಟಾಸ್ಕ್‌ ಆಡುವಲ್ಲೇ ಎಡವಟ್ಟು ಮಾಡಿಕೊಂಡು ಒಂದು ಟೀಂ ಸಿಕ್ಕಾಪಟ್ಟೆ ಗರಂ ಆಗಿದೆ. ಅದರಲ್ಲೂ ನಟ ಉದಯ್ ಸೂರ್ಯ ಜತೆ ಟಾಸ್ಕ್‌ ವಿಚಾರದಲ್ಲಿ ಕಿರಿಕ್‌ ಮಾಡಿಕೊಂಡ ಆರ್ಯವರ್ಧನ್ ಗುರೂಜಿ ‘ನನ್ನ ರಕ್ತ ಕುದಿಯುತ್ತಿದೆ’ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.

ಇದನ್ನೂ ಓದಿ | Bigg Boss Kannada | ಸೋಷಿಯಲ್‌ ಮೀಡಿಯಾದಲ್ಲಿ ರಾಕೇಶ್‌-ಸ್ಫೂರ್ತಿ ಮಾತು: ಲವ್‌ ಕಹಾನಿ ಶುರು?

ಏನಾಯ್ತು ಗುರೂಜಿಗೆ..?
ಆರ್ಯವರ್ಧನ್ ಗುರೂಜಿ ಹೊರಗೆ ಇದ್ದಾಗಲೂ ಸಾಕಷ್ಟು ವಿಚಾರಗಳಿಗೆ ಸುದ್ದಿ ಆಗುತ್ತಿದ್ದರು. ಇದೀಗ ಬಿಗ್‌ ಬಾಸ್‌ ಮನೆಗೆ ಹೋದ ನಂತರ ಅವರನ್ನು ಟ್ರೋಲ್‌ ಮಾಡುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ.‌ ಇಡೀ ಸೋಷಿಯಲ್ ಮೀಡಿಯಾದಲ್ಲಿ ಸೋನು ಶ್ರೀನಿವಾಸ ಗೌಡ, ಆರ್ಯವರ್ಧನ್ ಗುರೂಜಿಯ ಬಗ್ಗೆ ಚರ್ಚೆಗಳು ವಿಪರೀತವಾಗಿವೆ. ಈ ಹೊತ್ತಲ್ಲೇ ನಾಯಕತ್ವ ಬದಲಾವಣೆ ವಿಚಾರ ಚರ್ಚೆಗೆ ಬಂದಿದ್ದು ಬಿಗ್‌ ಬಾಸ್‌ ಮನೆಯಲ್ಲಿ ಕೋಲಾಹಲ ಸೃಷ್ಟಿ ಮಾಡಿದೆ. ಈ ಬಗ್ಗೆ ಟ್ರೈಲರ್‌ ಒಂದನ್ನು ಬಿಗ್‌ ಬಾಸ್‌ ಒಟಿಟಿ ಆಯೋಜಕರು ರಿಲೀಸ್‌ ಮಾಡಿದೆ.

ಒಟ್ಟಾರೆ ಹೇಳುವುದಾದರೆ ಒಮ್ಮೊಮ್ಮೆ ಸೈಲೆಂಟ್‌ ಆಗಿರುವ ಆರ್ಯವರ್ಧನ್ ಗುರೂಜಿ, ಮತ್ತೊಮ್ಮೆ ಸಿಕ್ಕಾಪಟ್ಟೆ ವೈಲೆಂಟ್‌ ಆಗುತ್ತಿದ್ದಾರೆ. ಈಗ ಬಿಗ್‌ ಬಾಸ್‌ ಮನೆಯ ಸದಸ್ಯರಿಗೆ ಆರ್ಯವರ್ಧನ್ ಗುರೂಜಿ ಹೇಳಿಕೆ ಭಯ ಹುಟ್ಟಿಸಿದೆ. ಈ ನಡುವೆ ಮತ್ತಷ್ಟು ಸ್ಪರ್ಧಿಗಳ ಜತೆಗೆ ಗುರೂಜಿ ಮುನಿಸು ಮುಂದುವರಿದಿದೆ. ಇದರ ಜತೆಗೆ ಈ ವಾರ ಎಲಿಮಿನೇಷನ್‌ ಕೂಡ ಇದ್ದು, ಆರ್ಯವರ್ಧನ್ ಗುರೂಜಿ ಬಿಗ್‌ ಬಾಸ್‌ ಮನೆಯಿಂದ ಹೊರಗೆ ಹೋಗುತ್ತಾರಾ ಎಂಬ ಪ್ರಶ್ನೆ ವೀಕ್ಷಕರನ್ನು ಕಾಡುತ್ತಿದೆ. ಇದಕ್ಕೆಲ್ಲ ನಟ, ಕಾರ್ಯಕ್ರಮ ನಿರೂಪಕ ಕಿಚ್ಚ ಸುದೀಪ್‌ ಅವರ ‘ವಾರದ ಕಥೆ, ಕಿಚ್ಚನ ಜತೆ’ಯಲ್ಲಿ ಉತ್ತರ ಸಿಗಲಿದೆ.

ಇದನ್ನೂ ಓದಿ | Bigg Boss Kannada | ಮೊದಲ ಕ್ಯಾಪ್ಟನ್‌ ಆಗಿ ಅರ್ಜುನ್‌ ರಮೇಶ್‌ ಆಯ್ಕೆ

Exit mobile version