Site icon Vistara News

Bigg Boss Kannada | ಬಿಗ್‌ ಬಾಸ್‌ ಮನೆಯಲ್ಲಿ ಆರ್ಯವರ್ಧನ್ ಗುರೂಜಿದೇ ಹವಾ! ಇಲ್ಲಿವೆ ವಿಶಿಷ್ಟ ಫೋಟೊಗಳು

Bigg Boss Kannada

ಬೆಂಗಳೂರು: ಬಿಗ್ ಬಾಸ್ ಒಟಿಟಿ ಕನ್ನಡದ (Bigg Boss Kannada) ಮೊದಲ ಸೀಸನ್‌ನಲ್ಲಿ ಪಾಲ್ಗೊಂಡಿರುವ ಸ್ಪರ್ಧಿಗಳು ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆಯನ್ನು ಒದಗಿಸಿದ್ದಾರೆ. ಪ್ರತಿಯೊಬ್ಬರೂ ತಮ್ಮದೇ ಆದ ಶೈಲಿಯಲ್ಲಿ ಚಾಕಚಕ್ಯತೆ ಮತ್ತು ವ್ಯಕ್ತಿತ್ವವನ್ನು ಪ್ರದರ್ಶಿಸುವ ಮೂಲಕ ಮನರಂಜನೆಯನ್ನು ನೀಡಿದ್ದಾರೆ.

ಸಂಖ್ಯಾಶಾಸ್ತ್ರ ಪ್ರವೀಣರಾಗಿರುವ ಆರ್ಯವರ್ಧನ್ ತಮ್ಮ ವಿಶಿಷ್ಟ ನಡವಳಿಕೆ ಮೂಲಕ ಮನೆಯಲ್ಲಿರುವ ಇತರ ಸ್ಪರ್ಧಿಗಳು ಹಾಗೂ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಬಿಗ್ ಬಾಸ್ ಒಟಿಟಿ ಕನ್ನಡದ ಮೊದಲ ಸೀಸನ್ ಫೈನಲ್ ಹಂತಕ್ಕೆ ಸಮೀಪಿಸುತ್ತಿರುವಾಗ ಆರ್ಯವರ್ಧನ್ ವಿವಿಧ ರೀತಿಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಆ ಕೆಲವು ಕ್ಷಣಗಳು ಇಲ್ಲಿವೆ!

ಬೇವಾಚ್ ಅವತಾರ!
ವಿನೋದದ ಕ್ಷಣಗಳು ಮತ್ತು ಮನೆಯನ್ನು ಸದಾ ನಗೆಗಡಲಲ್ಲಿ ತೇಲುವಂತೆ ಮಾಡುವ ವಿಚಾರದಲ್ಲಿ ಆರ್ಯವರ್ಧನ್ ಎತ್ತಿದ ಕೈ. ಎಲ್ಲಾ ಪ್ರತಿಬಂಧಗಳನ್ನು ಮೀರಿದ ಆರ್ಯವರ್ಧನ್ ಪ್ರತಿಸ್ಪರ್ಧಿಗಳಿಗಿಂತ ಮೊದಲೇ ಈಜುಕೊಳಕ್ಕೆ ಧುಮುಕಿ ಫಾಲೋಮೀ ಎನ್ನುವ ರೀತಿಯಲ್ಲಿ ಮನರಂಜಿಸಿದರು.

ಆರ್ಯವರ್ಧನ್ ಅವರ ಹೊಸ ಲುಕ್!
ಆರ್ಯವರ್ಧನ್ ಸ್ಟೈಲ್‌ನಲ್ಲಿ ಬದಲಾವಣೆ ತರಲು ಇತರೆ ಸ್ಪರ್ಧಿಗಳು ಬಯಸಿದ ಸಂದರ್ಭದಲ್ಲಿಯೇ ಇವರು ಎಲ್ಲಾ ವಿಧದ ಆಟದಲ್ಲಿ ಭಾಗಿಯಾದರು. ಗಡ್ಡವನ್ನು ಸಂಪೂರ್ಣ ತೆಗೆದುಹಾಕುವವರೆಗೆ ಅವರು ತಮ್ಮ ಹೊಸ ಲುಕ್‌ನೊಂದಿಗೆ ಕಾಣಿಸಿಕೊಂಡರು.

ಇದನ್ನೂ ಓದಿ | Bigg Boss Kannada | ಸೋಮಣ್ಣಗೆ ಆರ್ಯವರ್ದನ್‌ ಸವಾಲ್‌: ಕಥೆ ಹೇಳುತ್ತಿವೆ ಪೋಟೋಗಳು!

ಇವರು ಫಿಟ್ನೆಸ್ ಉತ್ಸಾಹಿ
ಕೆಲವು ವಾರಗಳ ಹಿಂದೆ ಆರ್ಯವರ್ಧನ್, ಈ ಶೋ ಮುಗಿಯುವುದರೊಳಗಾಗಿ ನನ್ನ ಹೊಟ್ಟೆಯನ್ನು ಕರಗಿಸುವುದಾಗಿ ಇತರೆ ಸ್ಪರ್ಧಿಗಳ ಬಳಿ ಸವಾಲು ಹಾಕಿದ್ದರು. ಈ ಸೀಸನ್ ಅಂತ್ಯದ ವೇಳೆಗೆ ಸಿಕ್ಸ್ ಪ್ಯಾಕ್ ಹೊಂದಿರುತ್ತೇನೆ ಎನ್ನುವ ಮೂಲಕ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದರು.

ಜಯಶ್ರೀಯಿಂದ ಮೇಕ್ ಓವರ್

ಬಿಗ್ ಬಾಸ್ ಕನ್ನಡ ಒಟಿಟಿ ಮನೆಯೊಳಗೆ ಲಾಕ್ ಆಗಿರುವುದು ಎಲ್ಲಾ ಸ್ಪರ್ಧಿಗಳಲ್ಲಿ ಒಂದು ರೀತಿಯ ಚಮತ್ಕಾರ ಹುಟ್ಟಿಸಿದೆ. ಜಯಶ್ರೀಯಿಂದ ಆರ್ಯವರ್ಧನ್ ಮೇಕ್ ಓವರ್ ಪಡೆಯುತ್ತಿರುವುದು ತಮಾಷೆಯ ದೃಶ್ಯಗಳಲ್ಲಿ ಒಂದಾಗಿದೆ. ಆರ್ಯವರ್ಧನ್ ಜಯಶ್ರೀಯವರ ಮೇಕಪ್ ಕೌಶಲಗಳನ್ನು ಬಳಸಲು ಅವಕಾಶ ಮಾಡಿಕೊಟ್ಟರು ಮತ್ತು ಆ ಕ್ಷಣವನ್ನು ಆನಂದಿಸಿದರು.

ಬಿಬಿ ಒಟಿಟಿ ಹೌಸ್ ನ ಮಾಸ್ಟರ್ ಷೆಫ್
ಆರ್ಯವರ್ಧನ್ ಅವರು ತಾವೊಬ್ಬ ಪಾಕಪ್ರವೀಣರೆಂಬುದನ್ನು ಮನೆಯಲ್ಲಿ ತೋರಿಸಿಕೊಟ್ಟರು. ಅವರ ಪಾಕಶಾಲೆಯ ಕೌಶಲವನ್ನು ಮನೆಯವರು ಇಷ್ಟಪಟ್ಟಿದ್ದಾರೆ. ಏಕೆಂದರೆ ಅವರು ಮಾಡುವ ವಡೆಗಳು, ಪಾಯಸ, ಸರಳ ವಿಧಾನದಲ್ಲಿ ಮಾಡುವ ಅನ್ನ ಮತ್ತು ಸಾಂಬಾರ್‌ನಂತಹ ಖಾದ್ಯಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ. ʻʻಯಾವಾಗಲೂ ಪ್ರೀತಿಯಿಂದ ಅಡುಗೆ ಮಾಡು’ʼ ಎಂಬ ತತ್ತ್ವವನ್ನು ಅನುಸರಿಸುತ್ತಿರುವುದರಿಂದ ಉತ್ತಮ ಪಾಕಪ್ರವೀಣರಾಗಲು ಸಾಧ್ಯವಾಗಿದೆ.

ಸಹ ಸ್ಪರ್ಧಿಗಳಿಂದ ʻಗುರುಗಳೇ’ ಎಂದು ಪ್ರೀತಿಯಿಂದ ಕರೆಯಿಸಿಕೊಳ್ಳುವ ಆರ್ಯವರ್ಧನ್ ಬಹುತೇಕ ಎಲ್ಲಾ ಸ್ಪರ್ಧೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪ್ರದರ್ಶನದಲ್ಲಿ ಮನರಂಜನೆಯನ್ನು ನೀಡುತ್ತಾ ಬಂದಿದ್ದಾರೆ.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಮನೆಯ ಅವಸ್ಮರಣೀಯ ಘಟನೆಗಳ ಝಲಕ್ ಇಲ್ಲಿವೆ!

Exit mobile version