Site icon Vistara News

Bigg Boss kannada | ಮೇಕಪ್‌ ಅಲ್ಲಿ ಆರ್ಯವರ್ಧನ್‌ ಮಿಂಚಿಂಗ್‌: ಸಖತ್‌ ಎಂಟರ್ಟೈನರ್‌ ಅಂದ್ರು ಗುರೂಜಿ ಫ್ಯಾನ್ಸ್‌!

Bigg Boss kannada

ಬೆಂಗಳೂರು: ʻನಾನು ಅಂದ್ರೆ ನಂಬರ್‌, ನಂಬರ್‌ ಅಂದ್ರೆ ನಾನು. ಹಾಗೇ ನಾನು ಹೇಳಿದಂತೆ ಕ್ರಿಕೆಟ್‌ ಮ್ಯಾಚ್‌ಗಳು ಗೆದ್ದಿವೆʼ ಎಂದು ಹೇಳುತ್ತಾ ನ್ಯೂಸ್‌ ಚಾನಲ್‌ನಲ್ಲಿ ಹವಾ ಸೃಷ್ಟಿ ಮಾಡಿರುವ ಆರ್ಯವರ್ಧನ್‌ ಗುರೂಜಿ, ಈಗ ಆಬಿಗ್‌ಬಾಸ್‌ (Bigg Boss kannada) ಮನೆಯಲ್ಲಿ ಆಟಗಳನ್ನು ಸಖತ್‌ ಆಗಿ ಆಡುತ್ತಿದ್ದಾರೆ.

ಬಿಗ್‌ಬಾಸ್‌ ಮನೆಯಲ್ಲಿ ದಿನನಿತ್ಯ ಆರ್ಯವರ್ಧನ್‌ ಗುರೂಜಿ ಅವರ ಮಜವಾದ ಸನ್ನಿವೇಶಗಳು ನಡೆಯುತ್ತಲೇ ಇರುತ್ತವೆ. ಈ ಹಿಂದೆ ಮನೆಯಲ್ಲಿ ಆಟದ ವಿಚಾರದಲ್ಲಿ ಅವರು ನುಡಿದ ಭವಿಷ್ಯದಂತೆ ನಡೆಯಲಿಲ್ಲ. ಇದಕ್ಕೆ ಸ್ವತಃ ಸ್ಪರ್ಧಿಗಳೇ ನಕ್ಕಿದ್ದಾರೆ. ಇದೀಗ ಗುರೂಜಿ ಮೇಕಪ್‌ ವಿಚಾರದಲ್ಲಿ ಸುದ್ದಿಯಾಗಿದ್ದಾರೆ. ಜಯಶ್ರೀ ಕಲಾತ್ಮಕವಾಗಿ ಗುರೂಜಿಗೆ ಮೇಕಪ್‌ ಮಾಡಿದ್ದು, ಗುರೂಜಿ ಲಿಪ್‌ಸ್ಟಿಕ್‌ನಿಂದ ಮಿಂಚುತ್ತಿದ್ದರು. ಇನ್ನು ಈ ಬಗ್ಗೆ ಹೇಳಿಕೆ ನೀಡಿರುವ ಗುರೂಜಿ ಹೆಣ್ಣು ಮಕ್ಕಳ ಮೇಕಪ್‌ ಇಷ್ಟು ಕಷ್ಟ ಎಂದು ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ | Bigg Boss Kannada | ನನ್ನ ರಕ್ತ ಕುದಿಯುತ್ತಿದೆ ಎಂದ ಆರ್ಯವರ್ಧನ್ ಗುರೂಜಿ!

ಈ ಹಿಂದೆ ಗುರೂಜಿ ತಾವು ಸಾವಿರಾರು ಕೋಟಿ ಒಡೆಯ ಎಂದು ಹೇಳಿಕೊಂಡಿದ್ದ ವಿಷಯ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳಾಗುತ್ತಿವೆ. ತನ್ನ ಆಸ್ತಿ ಹಿರಿಯರದ್ದಾಗಿದ್ದು ಕೋಟಿ ಕೋಟಿ ಬೆಲೆ ಬಾಳುತ್ತದೆ. ಅಲ್ಲದೆ, ಅನೇಕ ನಿರ್ದೇಶಕರಿಗೆ ಹಾಗೂ ನಿರ್ಮಾಪಕರಿಗೆ ಆರ್ಯವರ್ಧನ್‌ ಗುರೂಜಿ ಸಾಲ ಕೊಟ್ಟಿರುವುದಾಗಿಯೂ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | Bigg Boss Kannada | ಲಕ್ಷುರಿ ಬಜೆಟ್‌ನಲ್ಲಿ ಲೋಕೇಶ್‌-ಸೋನು ಫೈಟ್‌: ಯಾರು ಈ ವಾರದ ಬೆಸ್ಟ್ & ವರ್ಸ್ಟ್?

Exit mobile version