Site icon Vistara News

Bigg Boss Kannada | ದೀಪಿಕಾರನ್ನು ಎತ್ತಿ ಕುಣಿದಾಡಿದ ಆರ್ಯವರ್ಧನ್‌: ಹಾಡಲ್ಲೇ ಹೂದೋಟವಾದ ಮನೆ ಅಂಗಳ!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada) ಈ ವಾರದ ಟಾಸ್ಕ್‌ನಲ್ಲಿ ಮ್ಯೂಸಿಕ್ ಗುರುತಿಸಿ ಯಾವ ಹಾಡು ಎಂದು ಹೇಳುವ ಟಾಸ್ಕ್‌ ಬಿಗ್‌ ಬಾಸ್‌ ನೀಡಿದ್ದರು. ಈ ವಾರ ದೀಪಿಕಾ ದಾಸ್‌ ಮತ್ತು ಆರ್ಯವರ್ಧನ್‌ ಗುರೂಜಿ ಸಖತ್‌ ಹೈಲೈಟ್‌ ಆಗಿದ್ದಾರೆ. ಗುರೂಜಿ ಜತೆ ಮಸ್ತ್ ಆಗಿ ದೀಪಿಕಾ ಹೆಜ್ಜೆ ಹಾಕಿದ್ದಾರೆ.

ಆಡುವ ಮೂರು ಜೋಡಿಗಳಿಗೆ ಮೂರು ಸಾಂಗ್‌ಗಳ ಮ್ಯೂಸಿಕ್ ಕೇಳಿಸಲಾಗಿತ್ತು. ಪ್ರತಿ ಜೋಡಿ ಕೇಳಿದ ಮ್ಯೂಸಿಕ್ ಮುಗಿದ 3 ಸೆಕೆಂಡುಗಳ ಒಳಗೆ ಹಾಡು ಯಾವುದೆಂದು ಊಹಿಸಬೇಕು. ಆಟದ ಮೌಲ್ಯ 3 ಸಾವಿರವಾಗಿತ್ತು. ಅದಕ್ಕೆ ಜೋಡಿಗಳನ್ನು ಮಾಡಲಾಗಿತ್ತು. ಅದರಲ್ಲಿ ಮೊದಲ ಸರದಿ ರೂಪೇಶ್ ರಾಜಣ್ಣ ಹಾಗೂ ಅರುಣ್ ಸಾಗರ್, ಎರಡನೆಯದ್ದು ರಾಕೇಶ್ ಮತ್ತು ಅನುಪಮಾ ಗೌಡ, ಮೂರನೆಯ ತಂಡ ದಿವ್ಯಾ ಹಾಗೂ ಅಮೂಲ್ಯರನ್ನು ಮಾಡಲಾಗಿತ್ತು. ಒಂದು ಹಾಡಿಗೆ ಏಳು ಹಾಡುಗಳನ್ನು ಪ್ಲೆ ಮಾಡಲಾಗಿತ್ತು. ಈ ಹಾಡು ಯಾವುದು ಟಾಸ್ಕ್ ಗೆ ನಿಗದಿಯಾಗಿದ್ದ ಹಣ ಮೂರು ಸಾವಿರ. ಹದಿನೈದು ಸಾಂಗ್‌ಗಳನ್ನು ಕಂಡು ಹಿಡಿಯಬೇಕಾಗಿತ್ತು.

ಇದನ್ನೂ ಓದಿ | Bigg Boss Kannada | ಕ್ಯಾಪ್ಟನ್‌ ದೀಪಿಕಾ ದಾಸ್‌ ವಿರುದ್ಧ ತಿರುಗಿ ಬಿದ್ದ ಕಾಮನ ಬಿಲ್ಲು ತಂಡ: ಇಲ್ಲಿವೆ ಫೋಟೊಗಳು!

ʻನೀನೆಂದರೆ ನನ್ನೋಳಗೆʼ ಎಂಬ ಹಾಡಿಗೆ ಸೂಪರ್ ಆಗಿ ದೀಪಿಕಾ ದಾಸ್ ಹೆಜ್ಜೆ ಹಾಕಿದ್ದಾರೆ. ಆರ್ಯವರ್ಧನ್ ಗುರೂಜಿ ಜತೆ ಡ್ಯಾನ್ಸ್ ಮಾಡುತ್ತಾ ಮಿಂಚಿದ್ದಾರೆ. ಈ ವೇಳೆ ಗುರೂಜಿ ಕೂಡ ದೀಪಿಕಾರನ್ನ ಎತ್ತಿಕೊಂಡು ಕುಣಿದಾಡಿದ್ದಾರೆ. ಇದು ಶೋನಲ್ಲಿ ಮತ್ತಷ್ಟು ಹೈಲೈಟ್ ಆಗಿದೆ.

ಅಮೂಲ್ಯ ಮತ್ತು ದಿವ್ಯಾ ಟೀಂ ಯಾವುದೇ ಹಾಡು ಬಂದು ನಾಲಿಗೆ ತುದಿಯಲ್ಲಿ ಬಂದರು ಹಾಡನ್ನು ಗುರುತಿಸುವುದಕ್ಕೆ ಆಗಲಿಲ್ಲ. ಆದರೆ ಅನುಪಮಾ ಎಲ್ಲಾ ಹಾಡುಗಳನ್ನು ಸಖತ್ತಾಗಿ ಗುರುತಿಸಿದ್ದಾರೆ. ಆದರೆ ಒಂದು ಸಾಂಗಿಗೆ ಅನುಪಮಾ ತುಂಬಾ ಕಣ್ಣಿರು ಹಾಕಿದ್ದಾರೆ.

ದೀಪಿಕಾ ದಾಸ್‌ ಅವರನ್ನು ಆರ್ಯವರ್ಧನ್‌ ಗುರೂಜಿ ಎತ್ತಿ ಡ್ಯಾನ್ಸ್‌ ಮಾಡಿದ್ದಾರೆ. ಒಂದು ಕಡೆ ದೀಪಿಕಾ ದಾಸ್‌ ಮನೆಯವರ ಜತೆ ಬೆರೆಯುವುದು ಹೊಸ ಬದಲಾವಣೆ ಆದರೆ ಇನ್ನೊಂದು ಕಡೆ ರೂಪೇಶ್‌ ಶೆಟ್ಟಿ ಸಾನ್ಯ ನೆನೆದು ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ | Bigg Boss Kannada | ಕ್ಯಾಪ್ಟನ್‌ ದೀಪಿಕಾ ದಾಸ್‌ ವಿರುದ್ಧ ತಿರುಗಿ ಬಿದ್ದ ಕಾಮನ ಬಿಲ್ಲು ತಂಡ: ಇಲ್ಲಿವೆ ಫೋಟೊಗಳು!

Exit mobile version