Site icon Vistara News

Bigg Boss Kannada | ಜಶ್ವಂತ್‌ಗೆ ಸಖತ್‌ ಕ್ಲಾಸ್‌ ತೆಗೊಂಡ್ರು ಜಯಶ್ರೀ: ಐದನೇ ವಾರದ ಬಾಸ್‌ ಇವರೆ!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ (Bigg Boss Kannada) ಒಟಿಟಿ ಕಾರ್ಯಕ್ರಮ ಶುರುವಾಗಿ ನಾಲ್ಕು ವಾರಗಳು ಕಳೆದಿವೆ. ಮುಂದಿನ ವಾರ ಗ್ರ್ಯಾಂಡ್ ಫಿನಾಲೆ ವೀಕ್ ಆಗಿದ್ದು, ಮುಂದಿನ ವಾರಾಂತ್ಯದಲ್ಲಿ ಫಿನಾಲೆ ನಡೆಯಲಿದೆ. ಈ ವಾರದ ಕಳಪೆ ಪ್ರದರ್ಶನ ಜಸ್ವಂತ್‌ ತೋರಿದ್ದಾರೆ. ಈ ವಿಚಾರವಾಗಿ ಜಶ್ವಂತ್‌ ಮುನಿಸು ತೋರಿದರು. ಜಯಶ್ರೀ ಸ್ಪರ್ಧಿಗಳ ಮುಂದೆ ಜಶ್ವಂತ್‌ಗೆ ಕ್ಲಾಸ್‌ ತೆಗೆದುಕೊಂಡರು.

ಐದನೇ ವಾರದ ಬಾಸ್‌ ರೂಪೇಶ್‌!
ಕಾರ್ಯಕ್ರಮದಲ್ಲಿ ರೂಪೇಶ್‌ ಶೆಟ್ಟಿ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ಈ ವಾರ ಮತ್ತೆ ʻಬಾಸ್‌ʼ ಆಗಿ ಹೊರಹೊಮ್ಮಿದ್ದಾರೆ. ಈ ಹಿಂದೆ ಮೂರನೇ ವಾರ ಹಾಗೂ ನಾಲ್ಕನೇ ವಾರ ‘ಬಿಗ್ ಬಾಸ್’ ಮನೆಯ ‘ಬಾಸ್’ ಆಗಿ ರೂಪುಗೊಂಡಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿ ರೂಪೇಶ್‌ ಕ್ಯಾಪ್ಟನ್‌ಶಿಪ್‌ ನಿನ್ನೆ ಅಷ್ಟೇ ಅಂತ್ಯಗೊಂಡಿತ್ತು. ಬಿಗ್‌ ಬಾಸ್‌ ಮನೆಯಲ್ಲಿ ರೂಪೇಶ್‌ ಶೆಟ್ಟಿ ಸತತ ಎರಡು ಬಾರಿ ಬಾಸ್‌ ಪಟ್ಟವನ್ನು ಅಲಂಕರಿಸಿದ್ದರು. ಐದನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ರೂಪೇಶ್ ಶೆಟ್ಟಿ ಸೇಫ್ ಆಗಿದ್ದರು. ಹೀಗಾಗಿ, ನೇರವಾಗಿ ರೂಪೇಶ್ ಶೆಟ್ಟಿ ಆರನೇ ವಾರ ಅಂದರೆ ಫಿನಾಲೆ ವಾರಕ್ಕೆ ಲಗ್ಗೆ ಇಟ್ಟಿದ್ದರು. ಹಣ ಗಳಿಕೆಯನ್ನೂ ಟಾಸ್ಟ್‌ ಮುಖಾಂತರ ಮಾಡಬೇಕಿತ್ತು. ರೂಪೇಶ್‌ ಅದನ್ನು ಚೆನ್ನಾಗಿ ನಿಭಾಯಿಸಿದ್ದಾರೆ.

ಈ ವಾರದ ಬೆಸ್ಟ್‌ ಹಾಗೂ ವರ್ಸ್ಟ್‌!
ಈ ವಾರ ಬಿಗ್‌ ಬಾಸ್‌ನಲ್ಲಿ ಜಶ್ವಂತ್‌ ಕಳಪೆ ಪ್ರದರ್ಶನ ತೋರಿದ್ದಾರೆ ಹಾಗೂ ರೂಪೇಶ್‌ ಶೆಟ್ಟಿ ಈ ವಾರ ಬೆಸ್ಟ್‌ ಪರ್‌ಫಾರ್ಮರ್‌ ಎಂಬ ಕ್ರೆಡಿಟ್‌ ಸಿಕ್ಕಿದೆ.

ಇದನ್ನೂ ಓದಿ | Bigg Boss Kannada | ರೂಪೇಶ್ ಕ್ಯಾಪ್ಟನ್ಸಿ ಪರೀಕ್ಷೆ ಮುಗೀತು: ಮನೆಯವರು ಕೊಟ್ಟ ರೇಟಿಂಗ್ಸ್, ರಿವ್ಯೂ ಏನು?

ಈ ವಾರ ಜಶ್ವಂತ್‌ ವರ್ಸ್ಟ್‌ ಪರ್‌ಫಾರ್ಮರ್‌ ಆಗಿದ್ದು, ಜಶ್ವಂತ್‌ ಮುನಿಸನ್ನು ಹೊರಹಾಕಿದ್ದಾರೆ. ಇದಕ್ಕೆ ಜಯಶ್ರೀ ಪ್ರತಿಕ್ರಿಯೆ ನೀಡಿದ್ದು ʻʻಇಷ್ಟೂ ದಿನ ಬಿಗ್‌ ಬಾಸ್‌ ಮನೆಯಲ್ಲಿ ಯಾರೆಲ್ಲ ಕಳಪೆ ಪ್ರದರ್ಶನಕ್ಕೆ ಆಯ್ಕೆ ಆಗಿದ್ದರೂ ಯಾರೂ ನಿಮ್ಮ ತರಹ ಮುನಿಸನ್ನು ತೋರಿಸಿಲ್ಲ. ಇದರಲ್ಲೇ ಅರ್ಥ ಆಗುತ್ತದೆ. ನಿಮಗೆ ಗೆಲ್ಲುವುದು ಮಾತ್ರ ಮುಖ್ಯ. ಸೋಲನ್ನು ಕೂಡ ಅದೇ ರೀತಿ ತೆಗೆದುಕೊಳ್ಳಬೇಕು. ಇದರಲ್ಲಿ ನಿಮ್ಮ ಗುಣ ಹಾಗೂ ವ್ಯಕ್ತಿತ್ವ ತೋರುತ್ತಿದೆʼʼ ಎಂದು ಖಡಕ್‌ ಆಗಿ ಹೇಳಿದರು.

ಐದನೇ ವಾರದ ನಾಮಿನೇಷನ್‌ನಿಂದ ರಾಕೇಶ್ ಅಡಿಗ ಅವರನ್ನ ವೀಕ್ಷಕರೇ ಸೇಫ್ ಮಾಡಿದ್ದರು. ಹೀಗಾಗಿ, ರಾಕೇಶ್ ಅಡಿಗ ನೇರವಾಗಿ ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾರೆ. ರಾಕೇಶ್ ಅಡಿಗ ಜತೆಗೆ ರೂಪೇಶ್ ಶೆಟ್ಟಿ ಹಾಗೂ ಸಾನ್ಯ ಅಯ್ಯರ್ ಕೂಡ ಫಿನಾಲೆ ವಾರಕ್ಕೆ ಲಗ್ಗೆ ಇಟ್ಟಿದ್ದಾರೆ.

ಜನಮನ್ನಣೆಗೆ ಪಾತ್ರವಾಗಿರುವ ಬಿಗ್‌ ಬಾಸ್‌ ಶೋ ಮುಗಿಯಲು ದಿನಗಣನೆ ಆರಂಭವಾಗಿದೆ. ಜನರ ಕುತೂಹಲ ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಯಾರು ಉಳಿಯಲಿದ್ದಾರೆ? ಯಾರು ಹೊರಬರಲಿದ್ದಾರೆ? ಅಂತಿಮವಾಗಿ ಯಾರು ಗೆಲುವು ಸಾಧಿಸಲಿದ್ದಾರೆ ಎಂಬ ಕುತೂಹಲವಂತೂ ಹೆಚ್ಚಾಗಿದೆ.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಕನ್ನಡ ಸೀಸನ್‌ 9ಕ್ಕೆ ದಿನಗಣನೆ ಶುರು!

Exit mobile version