Site icon Vistara News

Bigg Boss Kannada | ʻಕಳಪೆʼಯಾದ ರಾಕೇಶ್‌ ಅಡಿಗ: ಈ ವಾರದ ʻಬೆಸ್ಟ್‌ ಪರ್ಫಾರ್ಮರ್‌ʼ ಆರ್ಯವರ್ಧನ್‌ ಗುರೂಜಿ!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9 (Bigg Boss Kannada ) ಇನ್ನು ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳುತ್ತದೆ. ಈ ಸೀಸನ್‌ 95 ದಿನಗಳನ್ನು ಪೂರೈಸಿದೆ. ಗ್ರ್ಯಾಂಡ್‌ ಫಿನಾಲೆಗೆ ದಿನಗಣನೆ ಆರಂಭಗೊಂಡಿದೆ. ಇದೀಗ ರಾಕೇಶ್ ಅಡಿಗ ಎರಡನೇ ಬಾರಿ ಕಳಪೆ ಹಣೆಪಟ್ಟಿ ಪಡೆದು ಬಿಗ್‌ ಬಾಸ್‌ ಮನೆಯ ಜೈಲಿಗೆ ಹೋಗಿದ್ದಾರೆ.

13ನೇ ವಾರ ಬಿಗ್‌ ಬಾಸ್‌ ಮನೆಯಲ್ಲಿ ಸರಣಿ ಟಾಸ್ಕ್‌ಗಳನ್ನು ನೀಡಿದ್ದರು. ಟಾಸ್ಕ್‌ಗಳಲ್ಲಿ ಎಲ್ಲರೂ ಪಾಲ್ಗೊಳ್ಳಬೇಕಿತ್ತು. ಟಾಸ್ಕ್‌ಗಳನ್ನು ಎಷ್ಟು ಬೇಗ ಮುಗಿಸುತ್ತಾರೆ ಎಂಬ ಆಧಾರದ ಮೇಲೆ ಸ್ಪರ್ಧಿಗಳಿಗೆ ಪಾಯಿಂಟ್‌ಗಳನ್ನು ನೀಡಲಾಗಿತ್ತು. ಟಾಸ್ಕ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆರ್ಯವರ್ಧನ್ ಗುರೂಜಿ ‘ಬೆಸ್ಟ್ ಪರ್ಫಾಮೆನ್ಸ್’ ಮೆಡಲ್ ಪಡೆದಿದ್ದಾರೆ. ಒಂದು ಆಟವನ್ನು ಸಂಪೂರ್ಣವಾಗಿ ಮುಗಿಸದೆ ಗಿವಪ್ ಮಾಡಿದ ಕಾರಣಕ್ಕೆ ರಾಕೇಶ್ ಅಡಿಗ ‘ಕಳಪೆ’ ಪಟ್ಟ ಪಡೆದು ಜೈಲಿಗೆ ತೆರಳಿದ್ದಾರೆ.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಕನ್ನಡ ಸೀಸನ್‌ 9ರ ಫಿನಾಲೆ ಡೇಟ್‌ ಫೀಕ್ಸ್‌: ಈ ವಾರ ಡಬಲ್‌ ಎಲಿಮಿನೇಷನ್‌ ಸಾಧ್ಯತೆ!

ಟಾಸ್ಕ್ ವೊಂದರಲ್ಲಿ ರಾಕಿ ಗಿವಪ್ ಮಾಡಿದ್ದರು. ಇದನ್ನು ಆಧರಿಸಿ‌ ಮನೆ ಮಂದಿ ಕಳಪೆ ಹಣೆಪಟ್ಟಿ ನೀಡಿದ್ದರು. ಈ ವಾರ ಟಾಸ್ಕ್‌ಗಳನ್ನು ಚೆನ್ನಾಗಿ ಆಡಿದ ಗುರೂಜಿ ಪರವಾಗಿ ದಿವ್ಯಾ ಉರುಡುಗ, ರೂಪೇಶ್ ರಾಜಣ್ಣ, ಅಮೂಲ್ಯ ಗೌಡ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಅರುಣ್ ಸಾಗರ್ ವೋಟ್ ಮಾಡಿದರು. ಹೀಗಾಗಿ ಈ ವಾರದ ಬೆಸ್ಟ್ ಪರ್ಫಾಮೆನ್ಸ್ ಮೆಡಲ್ ಆರ್ಯವರ್ಧನ್ ಗುರೂಜಿ ಪಾಲಾಯಿತು.

ಕಳಪೆಯಲ್ಲಿ ಟೈ ಆಗಿದ್ದ ಸಂದರ್ಭದಲ್ಲಿ ಅಮೂಲ್ಯ ಗೌಡ ಹಾಗೂ ದಿವ್ಯಾ ಉರುಡುಗ ವೋಟ್‌ಗಳನ್ನು ಚೇಂಜ್ ಮಾಡಿದರು. ರೂಪೇಶ್ ರಾಜಣ್ಣ ಅವರಿಗೆ ಅಮೂಲ್ಯ ಗೌಡ ಕಳಪೆ ಕೊಟ್ಟರೆ, ರಾಕೇಶ್ ಅಡಿಗಗೆ ದಿವ್ಯಾ ಉರುಡುಗ ಕಳಪೆ ನೀಡಿದರು. ಆಗ ಮತ್ತೆ ರೂಪೇಶ್ ರಾಜಣ್ಣ ಹಾಗೂ ರಾಕೇಶ್ ಅಡಿಗ ಮಧ್ಯೆ ಟೈ ಆಯ್ತು. ಈ ವೇಳೆ ಆರ್ಯವರ್ಧನ್ ಗುರೂಜಿ ವೋಟ್ ಚೇಂಜ್ ಮಾಡಿ ರಾಕೇಶ್ ಅಡಿಗಗೆ ಕಳಪೆ ಕೊಟ್ಟರು.

ಇಬ್ಬರು ಸ್ಪರ್ಧಿಗಳಿಗೆ ಈ ವಾರ ಮನೆ ಆಟ ಕೊನೆಯಾಗಲಿದೆ. ನವೀನರು ಹಾಗೂ ಪ್ರವೀಣರೊಂದಿಗೆ ಶುರುವಾದ ಕನ್ನಡದ ಬಿಗ್ ಬಾಸ್ ಇದೀಗ ಕೊನೆಯ ಹಂತಕ್ಕೆ ಬಂದು ನಿಂತಿದೆ. ಸದ್ಯ ಮನೆಯಲ್ಲಿ ರೂಪೇಶ್ ರಾಜಣ್ಣ, ಅಮೂಲ್ಯ ಗೌಡ. ದಿವ್ಯಾ ಉರುಡುಗ, ಅರುಣ್ ಸಾಗರ್, ದೀಪಿಕಾ ದಾಸ್, ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ ಉಳಿದುಕೊಂಡಿದ್ದಾರೆ.

ಇದನ್ನೂ ಓದಿ | Bigg Boss Kannada | ಮನೆಮಂದಿಗೆ ಪತ್ರ ಬರೆದ ಅರುಣ್‌ ಸಾಗರ್‌: ಫುಲ್‌ ಖುಷ್‌ ಆದ್ರು ಸ್ಪರ್ಧಿಗಳು!

Exit mobile version