ಬೆಂಗಳೂರು: ಬಿಗ್ಬಾಸ್ ಮನೆಯಲ್ಲಿ (Bigg Boss Kannada) ಮಂಗಳವಾರ ಸ್ಟಾರ್ ಆಫ್ ಅಟ್ರಾಕ್ಷನ್ ಆಗಿದ್ದು ಎಂದರೆ ರಾಕೇಶ್ ಅಡಿಗ. ಆ್ಯಕ್ಟಿಂಗ್ಗೂ ಸೈ, ಸಿಂಗಿಂಗ್ಗೂ ಜೈ ಎನ್ನುವ ರಾಕೇಶ್, ತಮ್ಮ ರ್ಯಾಪ್ ಸಾಂಗ್ ಮೂಲಕವೂ ಗಮನ ಸೆಳೆದಿದ್ದರು. ಆದರೆ ಬುಧವಾರ (ಆ.10) ಬಿಗ್ಬಾಸ್ ಮನೆಯಲ್ಲಿ ಸೈಲೆಂಟ್ ಮೋಡ್ಗೆ ಜಾರಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಯಾವಾಗಲೂ ಬೆಳಗ್ಗೆ ಹಾಡಿನ ಮೂಲಕ ಸ್ಪರ್ಧಿಗಳನ್ನು ಎಬ್ಬಿಸಲಾಗುತ್ತದೆ. ಎಕ್ಕ ರಾಜ ರಾಣಿ ಹಾಡಿಗೆ ಸಖತ್ ಎನರ್ಜಿಯಿಂದ ಭರ್ಜರಿ ಸ್ಟೆಪ್ ಹಾಕಿದ್ದಾರೆ ಸ್ಪರ್ಧಿಗಳು. ಅದರಲ್ಲಿಯೂ ಸೋಮಣ್ಣ ಮಾಚಿಮಾಡ ಹಾಗೂ ಕಿರಣ್ ಧೂಳೆಬ್ಬಿಸಿದ್ದಾರೆ. ಎಲ್ಲ ಸ್ಪರ್ಧಿಗಳು ಒಟ್ಟಾಗಿ ಡ್ಯಾನ್ಸ್ ಮಾಡಿದರೆ, ರಾಕೇಶ್ ಮಾತ್ರ ಪ್ರತ್ಯೇಕವಾಗಿ ಕೂತು ಧ್ಯಾನಸ್ಥರಾಗಿದ್ದಾರೆ.
ಹಿಂದಿನ ದಿನ ಮನೆಯಲ್ಲಿ ತುಂಬಾ ಚುರುಕಿನಿಂದ ಆಟ ಆಡಿದ್ದ ರಾಕೇಶ್, ಇದೀಗ ಮೌನಕ್ಕೆ ಜಾರಿರುವುದು ಗೇಮ್ ಪ್ಲಾನ್ ಇರಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಜನ ಮಾತನಾಡಿಕೊಳ್ಳುತ್ತಿದ್ದಾರೆ. ರಾಕೇಶ್ ಅಡಿಗ ಅವರು ಆರ್ಯವರ್ಧನ್ ಗುರೂಜಿ ರೀತಿಯಲ್ಲೇ ಮಾತನಾಡಿ, ಏನ್ ನಿಮ್ಮ ಸಮಸ್ಯೆ? ಇದು ಪರಿಹಾರವಾಗಬೇಕು ಎಂದರೆ ಕಾಲು ಕೆಜಿ ಪನ್ನೀರು, ಜೀರಾ ರೈಸ್ ಕಳಿಸಿಕೊಟ್ಟು ಬಿಡಿ ಎಂದು ಮಿಮಿಕ್ರಿ ಕೂಡ ಮಾಡಿ ರಂಜಿಸಿದ್ದರು. ಕಾಲೇಜಿನಲ್ಲಿ ಹುಡುಗಿಗೆ ಲವ್ ಲೆಟರ್ ಕೊಟ್ಟಿದ್ದರ ಬಗ್ಗೆ ರ್ಯಾಪ್ ಸಾಂಗ್ ಹಾಡುವ ಮೂಲಕ ಮೋಡಿ ಮಾಡಿದ್ದರು.
ಇದನ್ನೂ ಓದಿ | Bigg Boss Kannada | ಅಮ್ಮನ ನೆನೆದು ಭಾವುಕರಾದ ಸ್ಫೂರ್ತಿ ಗೌಡ