ಬೆಂಗಳೂರು: ಈ ವಾರ ಬಿಗ್ ಬಾಸ್ (Bigg Boss Kannada ) ಮನೆಯಲ್ಲಿ ಸುದೀಪ್ ಅವರು ಗೈರಾಗಿದ್ದ ಕಾರಣ ಬಿಗ್ ಬಾಸ್ ಏಳು ಹಂತದಲ್ಲಿ ಆಟ ಆಡಿಸಿ ಎಲಿಮಿನೇಟ್ ಪ್ರಕ್ರಿಯೆ ಮುಗಿಸಿದ್ದಾರೆ. ಈ ವಾರ ಮಯೂರಿ ನಾಲ್ಕನೇ ಸ್ಪರ್ಧಿಯಾಗಿ ಮನೆಯಿಂದ ಹೊರ ನಡೆದರು.
ಮೊದಲ ಹಂತದಲ್ಲಿ ಪೆಡಸ್ಟ್ರಲ್ ಮೇಲೆ ಇರುವ ದ್ರವವನ್ನು ಕೊಳವೆ ಆಕಾರದ ಮೂಲಕ ಪರ್ವತದಲ್ಲಿ ಸುರಿಯಬೇಕಿತ್ತು. ಪರ್ವತದಲ್ಲಿ ಹಸಿರು ಜ್ವಾಲಾಮುಖಿ ಮೂಲಕ ಉಕ್ಕುವ ಸದಸ್ಯ ಸೇಫ್ ಆಗುತ್ತಾರೆ. ಕೆಂಪು ಜ್ವಾಲಾಮುಖಿ ಸುರಿದರೆ ಮುಂದಿನ ಸುತ್ತಿಗೆ ಕಾಯಬೇಕು. ಮೊದಲ ಸುತ್ತಿನಲ್ಲಿ ದಿವ್ಯಾ ಉರುಡುಗ ಸೇಫ್ ಆದರು.
ಎರಡನೇ ಹಂತದಲ್ಲಿ ಸದಸ್ಯರು ಹಗ್ಗವನ್ನು ಎಳೆದು ತಮ್ಮ ಕಂಬದಲ್ಲಿ ಇರುವ ಬ್ಯಾನರ್ ಅನಾವರಣಗೊಳಿಸಬೇಕಿತ್ತು. ತೆರೆದುಕೊಂಡ ಬ್ಯಾನರ್‌ನಲ್ಲಿ ಯಾರ ಹೆಸರು ಹಸಿರು ಬಣ್ಣದಲ್ಲಿ ಇರುತ್ತದೆಯೋ ಆ ಸದಸ್ಯ ಸೇಫ್ ಆಗುತ್ತಾನೆ. ಈ ಹಂತದಲ್ಲಿ ರೂಪೇಶ್ ಶೆಟ್ಟಿ ಸೇಫ್ ಆದರು.
ಮೂರನೇ ಹಂತದಲ್ಲಿ ಹಾರ್ನ್ಸ್ ಆದಾಗ ಎಲಿಮಿನೇಷನ್‌ನಲ್ಲಿ ಉಳಿದ ಸದಸ್ಯರು ಏಕಕಾಲಕ್ಕೆ ತಮಗೆ ಮೀಸಲಿರುವ ಸೇಬನ್ನು ಅರ್ಧಕ್ಕೆ ಕತ್ತರಿಸಿ ಅದರ ಒಳಭಾಗ ಮುಂದೆ ಕಾಣುವ ಹಾಗೆ ತೋರಿಸಬೇಕು. ಯಾರ ಸೇಬಿನಲ್ಲಿ ಹಸಿರು ಬಣ್ಣ ಇರುತ್ತದೆಯೋ ಅವರು ಸೇಫ್ ಆಗುತ್ತಾರೆ. ಇದರಲ್ಲಿ ಪ್ರಶಾಂತ್ ಸಂಬರಗಿ ಸೇಫ್ ಆದರು.
ನಾಲ್ಕನೇ ಹಂತದಲ್ಲಿ ಸ್ಕ್ರ್ಯಾಚ್ ಕಾರ್ಡ್ ಹಾಗೂ ಒಂದು ಕಪ್ಪು ತುಂಡು ಬಿಗ್ ಬಾಸ್ ನೀಡಿದ್ದರು. ಹಾರ್ನ್ ಆದಾಗ ಕಾರ್ಡ್‌ನ್ನು ಸ್ಕ್ರ್ಯಾಚ್ ಮಾಡಬೇಕು. ಯಾವ ಕಾರ್ಡ್‌ನಲ್ಲಿ ಸೇಫ್ ಎಂದು ಬರೆದಿರುತ್ತದೆಯೋ ಅವರು ಸೇಫ್ ಆಗುತ್ತಾರೆ. ಇದರಲ್ಲಿ ಆರ್ಯವರ್ಧನ್ ಸೇಫ್ ಆದರು.
ಐದನೇ ಹಂತದಲ್ಲಿ ಒಂದೊಂದು ಕಾಟನ್ ಕ್ಯಾಂಡಿ ಇಡಲಾಗಿತ್ತು. ಬಿಗ್ ಬಾಸ್ ಸೂಚಿಸಿದಾಗ ಸದಸ್ಯರು ಒಬ್ಬೊಬ್ಬರಾಗಿ ಬಂದು ಕಾಟನ್ ಕ್ಯಾಂಡಿಯನ್ನು ನೀರಿನಲ್ಲಿ ಅದ್ದಿ ಕರಗಿಸಬೇಕು. ಯಾರ ಕಡ್ಡಿಯಲ್ಲಿ ಸೇಫ್ ಎಂದು ಬರೆದಿರುತ್ತದೆಯೋ ಅವರು ಸೇಫ್ ಆಗಿತ್ತು. ಇದರಲ್ಲಿ ಸಾನ್ಯ ಸೇಫ್ ಆದರು.
ಆರನೇ ಹಂತದಲ್ಲಿ ಮೂರು ಒಣ ಮೆಣಸಿನ ಕಾಯಿಯ ಪ್ರತ್ಯೇಕ ಮೂಟೆಗಳನ್ನು ಬಿಗ್ ಬಾಸ್ ನೀಡಿದ್ದರು. ಅವುಗಳ ಪೈಕಿ ಒಂದು ಮೂಟೆಯಲ್ಲಿ ಮಾತ್ರ ಒಂದು ಹಸಿಮೆಣಸಿನಕಾಯಿ ಇತ್ತು. ಆ ಹಸಿ ಮೆಣಸಿನ ಕಾಯಿ ಯಾರ ಚೀಲದಲ್ಲಿ ಇರುತ್ತದೆಯೋ ಆ ಸ್ಪರ್ಧಿ ಸೇಫ್ ಆಗಿತ್ತು. ಇದರಲ್ಲಿ ಕಾವ್ಯಶ್ರೀ ಸೇಫ್ ಆದರು.
ಕೊನೆಯ ಹಂತದಲ್ಲಿ ನೇಹಾ ಮತ್ತು ಮಯೂರಿಗೆ ಬಿಗ್ ಬಾಸ್ ತಮ್ಮ ಅನುಭವವನ್ನು ಹಂಚಿಕೊಳ್ಳಲು ಹೇಳಿದರು. ನಂತರ ಬೈಕ್ ಮೂಲಕ ಮಯೂರಿಯನ್ನು ಕರೆದುಕೊಂಡು ಹೋಗಿದ್ದಾರೆ. ಮಯೂರಿ ಈ ವಾರ ಔಟ್ ಆದ ಸ್ಪರ್ಧಿಯಾಗಿದ್ದಾರೆ. ನೇಹಾ ಗೌಡ ಈ ವಾರ ಸೇಫ್ ಆದರು.
ಇದನ್ನೂ ಓದಿ | Bigg Boss Kannada | ಬಿಗ್ ಬಾಸ್ ಮನೆಯಿಂದ ನಟಿ ಮಯೂರಿ ಔಟ್!