Site icon Vistara News

Bigg Boss Kannada | ಮಹಿಳಾ ರೇಸರ್‌ ಐಶ್ವರ್ಯ ಪಿಸೆ 16ನೇ ಸ್ಪರ್ಧಿ : ಮಂಗಳ ಗೌರಿ ಬಿಗ್‌ ಬಾಸ್‌ ಮನೆಗೆ!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರ 16ನೇ ಸ್ಪರ್ಧಿಯಾಗಿ (Bigg Boss Kannada) ಐಶ್ವರ್ಯ ಪಿಸೆ ನ್ಯಾಷನಲ್‌ ರೋಡ್‌ರೇಸ್‌ನಲ್ಲಿ ಮಿಂಚಿದ ಬೆಂಗಳೂರಿನ ಬೆಡಗಿ. ಮೋಟಾರ್‌ ಸ್ಪೋರ್ಟ್ಸ್ ಜಗತ್ತಿನಲ್ಲಿ ಉದಯೋನ್ಮುಖ ಮಹಿಳಾ ರೇಸರ್‌ ಆಗಿ ಹೊರಹೊಮ್ಮುತ್ತಿದ್ದಾರೆ.

ತಾಯಿ ದೀಪಿಕಾ ಅವರ ಆರೈಕೆಯಲ್ಲಿ ಬೆಳೆದ ಐಶ್ವರ್ಯ ಪಿಸೆ ಸೋದರಸಂಬಂಧಿಯೊಬ್ಬರ ಬೈಕ್‌ನಲ್ಲಿ ರೈಡಿಂಗ್‌ ಕಲಿತು, ತಮ್ಮ 17ನೇ ವಯಸ್ಸಿಗೆ ಕೆಟಿಎಂ ಡ್ಯೂಕ್‌ 200 ಬೈಕ್‌ ಖರೀದಿಸಿದರು. ಬಳಿಕ ಅಪೆಕ್ಸ್‌ ರೇಸಿಂಗ್‌ ಅಕಾಡೆಮಿಯಲ್ಲಿ ವೃತ್ತಿಪರ ರೈಡರ್‌ ಆಗಿ ಬೆಳೆದ ಐಶ್ವರ್ಯ ಅವರಿಗೆ ಜೀವ ರೆಡ್ಡಿ ಹಾಗೂ ಅನಿಲ್‌ ಕುಮಾರ್‌ ಮಾರ್ಗದರ್ಶನ ನೀಡುವ ಮೂಲಕ ರೇಸಿಂಗ್‌ ತಂತ್ರಗಾರಿಕೆಯನ್ನು ಕರಗತ ಮಾಡಿಸಿಕೊಟ್ಟರು.

5.9 ಅಡಿ ಎತ್ತರದ ಚೆಲುವೆ ಐಶ್ವರ್ಯ, ಅವಕಾಶ ಮತ್ತು ಸಮಯ ಸಿಕ್ಕಾಗಲೆಲ್ಲ ಮಾಡೆಲಿಂಗ್‌ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೀಗ ಬಿಗ್‌ ಬಾಸ್‌ ಮನೆಗೆ ಪ್ರವೇಶಿಸಿದ್ದಾರೆ.

ಇದನ್ನೂ ಓದಿ | Bigg Boss Kannada | 12ನೇ ಸ್ಪರ್ಧಿ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ: ಆರ್ಯವರ್ಧನ್‌ ನಂಬರ್ ಲೆಕ್ಕ ಹೇಗಿದೆ?

ಮಂಗಳ ಗೌರಿ ಮದುವೆ ಧಾರಾವಾಹಿ ಖ್ಯಾತಿಯ ಕಾವ್ಯಶ್ರೀ ಗೌಡ 17ನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ಕಾಲಿಟ್ಟಿದ್ದಾರೆ. ಚನ್ನಪಟ್ಟಣ ಊರಿನವರಾದ ಇವರು ಪತ್ರಿಕೋದ್ಯಮದಲ್ಲಿ ಪದವಿ ಪಡೆದರು. ಮನೆಯೇ ಮಂತ್ರಾಲಯ ಧಾರಾವಾಹಿ ಮೂಲಕ ಪದಾರ್ಪಣೆ ಮಾಡಿದರು.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟ ನೇಹಾ ಗೌಡ: 11ನೇ ಸ್ಪರ್ಧಿಯಾಗಿ ವಿನೋದ್ ಗೊಬ್ಬರಗಾಲ!

Exit mobile version