Site icon Vistara News

Bigg Boss Kannada | ಮೆದುಳಿಗೇ ಕೈ ಹಾಕಿದ್ದರೂ ಬಿಟ್ಟುಕೊಡದ ಹೆಣ್ಮಕ್ಕಳು: ಪ್ರಶಾಂತ್‌- ವಿನೋದ್‌ ಶಾಕ್‌!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9 (Bigg Boss Kannada) ಎರಡನೇ ದಿನ ಪ್ರಾರಂಭಗೊಂಡಿದೆ. ಈ ಸಂಚಿಕೆಯಲ್ಲಿ ಬಿಗ್‌ ಬಾಸ್‌ ಹೆಚ್ಚಾಗಿ ಟಾಸ್ಕ್‌ಗಳನ್ನು ನೀಡಿದ್ದಾರೆ. ಎರಡನೇ ದಿನ ಮೆದುಳು ಟಾಸ್ಕ್‌ ಅನ್ನು ನೀಡಿತ್ತು. ಪ್ರಶಾಂತ್‌ ಸಂಬರಗಿ ಹಾಗೂ ವಿನೋದ್‌ ಮುಂದಾಳತ್ವದಲ್ಲಿ ಟಾಸ್ಕ್‌ ನಡೆದಿದೆ.

ಮನುಷ್ಯನ ಭಾವನೆ, ಸಾಮರ್ಥ್ಯ, ನೆನಪು, ಇಚ್ಛಾಶಕ್ತಿ, ಕ್ರಿಯಾ ಶಕ್ತಿ, ತಂತ್ರಗಾರಿಕೆ ಎಲ್ಲವನ್ನೂ ಸೆರೆ ಹಿಡಿಯುವ ಗೂಡು ಮೆದುಳು. ದೈಹಿಕ ಶಕ್ತಿ, ನೆನಪಿನ ಶಕ್ತಿ ಹಾಗೇ ಸಮಸ್ಯೆ ಪರಿಹರಿಸುವ ಶಕ್ತಿ ಎಂಬ ಮೆದುಳಿನ ಮೂರು ಮುಖ್ಯ ವಿಚಾರವನ್ನು ಆಧರಿಸಿ, ಟಾಸ್ಕ್‌ಗಳ ರೂಪಗೊಂಡಿತ್ತು. ಇದರ ಅನುಸಾರ ಗಾರ್ಡನ್‌ ಏರಿಯಾದಲ್ಲಿ ಬಿಗ್‌ ಬಾಸ್‌ ಮೆದುಳು ರೂಪಿಸಿದ್ದರು. ಪ್ರತಿ ಟಾಸ್ಕ್‌ನಲ್ಲಿ ಕೇವಲ ಮೂರು ಜೋಡಿಗಳು ಆಡಬೇಕಾಗುತ್ತದೆ. ಎರಡು ಜೋಡಿಗಳು ಟಾಸ್ಕ್‌ ಆಡಬೇಕು. ಮೂರನೇ ಜೋಡಿ ಆ ಟಾಸ್ಕ್‌ನ ಮೇಲೆ ಪಂದ್ಯ ಕಟ್ಟಬೇಕು. ಪ್ರತಿ ಟಾಸ್ಕ್‌ನಲ್ಲಿ ಗೆಲ್ಲುವ ಜೋಡಿಗೆ ಒಂದು ಅಂಕ ಲಭಿಸುತ್ತದೆ. ಪಂದ್ಯ ಕಟ್ಟುವ ಜೋಡಿ ಗೆದ್ದರೆ ಆ ಜೋಡಿಗೂ ಒಂದು ಅಂಕ ದೊರೆಯುತ್ತದೆ. ವಾರದ ಕೊನೆಯಲ್ಲಿ ಗರಿಷ್ಠ ಅಂಕ ಗಳಿಸದ ಜೋಡಿಗಳು ಕ್ಯಾಪ್ಟನ್‌ಶಿಪ್‌ ಅಭ್ಯರ್ಥಿಯಾಗಿ ಆಯ್ಕೆ ಆಗತ್ತಾರೆ.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಸೀಸನ್‌-9ರ ಮೊದಲ ವಾರದ ನಾಮಿನೇಟ್‌ ಆದ ಸ್ಪರ್ಧಿಗಳು ಇವರೇ!

1.55 ಮಧ್ಯಾಹ್ನದ ಸುಮಾರಿಗೆ ಟಾಸ್ಕ್‌ ಆರಂಭಗೊಂಡಿದ್ದು, ರೂಪೇಶ್‌ ರಾಜಣ್ಣ ಹಾಗೂ ರೂಪೇಶ್‌ ಶೆಟ್ಟಿ ಮತ್ತು ಕಾವ್ಯಶ್ರಿ ಗೌಡ ಮತ್ತು ರೂಪೇಶ್‌ ಶೆಟ್ಟಿ ಜೋಡಿಗಳನ್ನು ಪ್ರಶಾಂತ್‌ ಸಂಬರಗಿ ಟೀಮ್‌ ಆಯ್ಕೆ ಮಾಡಿಕೊಂಡಿತು. ಮೊದಲನೇ ಹಂತದ ನೆನಪಿನ ಶಕ್ತಿ ಟಾಸ್ಕ್‌ಗೆ ʻಓ ನೆನಪೇʼ ಎಂಬ ಹೆಸರನ್ನು ಬಿಗ್‌ ಬಾಸ್‌ ನೀಡಿದ್ದರು.

ʻಓ ನೆನಪೇʼ ಟಾಸ್ಕ್‌!
ಮಿಟುಕುವ ಜಾದಲ್ಲಿ ಇದ್ದ ಬಾಕ್ಸ್‌ಗಳನ್ನು ತೆಗೆಯುವ ಟಾಸ್ಕ್‌ ನೀಡಿತ್ತು. ಎರಡು ಟಾಸ್ಕ್‌ ಆಕ್ಟಿವಿಟೀಸ್‌ ರೂಮ್‌ನಲ್ಲಿ ಮತ್ತು ಗಾರ್ಡ್‌ನ್‌ ಏರಿಯಾದಲ್ಲಿ ನಡೆದಿತ್ತು. ಅದರಲ್ಲಿ ಪ್ರಶಾಂತ್‌ ಸಂಬರಗಿ ಮತ್ತು ವಿನೋದ ಗೊಬ್ಬರಗಾಲಗೆ ಬಿಗ್‌ ಬಾಸ್‌ ಆಯ್ಕೆಗಳನ್ನು ನೀಡಿದ್ದರು. ಆಯ್ಕೆ 1 ನಿಮ್ಮ ಪ್ರಕಾರ ರಾಕೇಶ್‌ ಮತ್ತು ರೂಪೇಶ್‌ ಗೆಲ್ಲುತ್ತಾರೆ. ಆಯ್ಕೆ ಎರಡು ರೂಪೇಶ್‌ ಮತ್ತು ಕಾವ್ಯಶ್ರೀ ಗೆಲ್ಲುತ್ತಾರೆ. ಆಯ್ಕೆ 3 ಯಾರೂ ಗೆಲ್ಲವುದಿಲ್ಲ ಎಂದು. ಪ್ರಶಾಂತ್‌ ಟೀಮ್‌ ಆಯ್ಕೆ ಮೂರನ್ನು ಸೆಲೆಕ್ಟ್‌ ಮಾಡಿಕೊಂಡಿದ್ದರು.ಅದರಂತೆ ರಾಕೇಶ್‌ ಜೋಡಿ ಮತ್ತು ರೂಪೇಶ್‌ ಜೋಡಿ ಸೋತಿತ್ತು. ಪ್ರಶಾಂತ್‌ ಮತ್ತು ವಿನೋದ್‌ 1 ಅಂಕ ಗಳಿಸಿ ಈ ಟಾಸ್ಕ್‌ನಲ್ಲಿ ವಿಜೇತರಾದರು.

ಹೆಣ್ಮಕ್ಕಳೇ ಸ್ಟ್ರಾಂಗು ಗುರು!
ರಾತ್ರಿ 9.15ಕ್ಕೆ ಬಿಗ್‌ ಬಾಸ್‌ ದೈಹಿಕ ಸಾಮರ್ಥ್ಯದಲ್ಲಿ ʻನಿಲ್ಲೆ ನಿಲ್ಲೆ ಕಾವೇರಿʼ ಎಂಬ ಹೆಸರಿನ ಟಾಸ್ಕ್‌ನ್ನು ನೀಡಿತ್ತು. ಅದರಲ್ಲಿ ಪ್ರಶಾಂತ್‌-ವಿನೋದ್‌ ಆಯ್ಕೆ ಮಾಡಿದ ಜೋಡಿಗಳು ದೀಪಿಕಾ ದಾಸ್‌ ಮತ್ತು ಅಮೂಲ್ಯ ಗೌಡ ಹಾಗೂ ನೇಹಾ ಗೌಡ ಮತ್ತು ಅನುಪಮಾ ಗೌಡ ಜೋಡಿಗಳು.

ಈ ಟಾಸ್ಕ್‌ನಲ್ಲಿ ಸೀಸ ಮಾದರಿಯ ಅರ್ಧ ವೃತ್ತಾಕಾರದಲ್ಲಿ ಜೋಡಿಗಳು ನಿಂತು ತಮ್ಮನ್ನು ತಾವು ಸಂಭಾಳಿಸಬೇಕು. ಕೊನೆಯವರೆಗೆ ಯಾರು ಗೆಲ್ಲುತ್ತಾರೋ ಅವರು ಅಂಕ ಪಡೆಯುತ್ತಾರೆ. ಬಿಗ್‌ ಬಾಸ್‌ ಪ್ರಶಾಂತ್‌ ಜೋಡಿಗೆ ಊಹೆಯನ್ನು ಕೇಳಿದಾಗ, ದೀಪಿಕಾ ಮತ್ತು ಅಮೂಲ್ಯ ಗೆಲ್ಲುತ್ತಾರೆ ಎಂದು ಹೇಳಿದರು.

ಸತತ 4 ಗಂಟೆಗಳ ಕಾಲ ದೀಪಿಕಾ ಜೋಡಿ ಮತ್ತು ಅನುಪಮಾ ಜೋಡಿ ನಿಂತರು. ಕೊನೆಯ ಕ್ಷಣದಲ್ಲಿ ನೇಹಾ ಮತ್ತು ಅನುಪಮಾ ಗೌಡ ಜೋಡಿ ಸೋತಿದ್ದಾರೆ. ದೀಪಿಕಾ ದಾಸ್‌ ಮತ್ತು ಅಮೂಲ್ಯ ಗೌಡ ಈ ಟಾಸ್ಕ್‌ನಲ್ಲಿ ಗೆದ್ದು 1 ಅಂಕ ಪಡೆದುಕೊಂಡರು. ಅದೇ ರೀತಿ ಪ್ರಶಾಂತ್‌ ಸಂಬರಗಿ ಕೂಡ ಊಹೆ ಸರಿಯಾಗಿದ್ದರಿಂದ 1 ಅಂಕವನ್ನು ಪಡೆದಿದ್ದಾರೆ. ಎರಡನೇ ದಿನ ಪ್ರಶಾಂತ್‌ ಸಂಬರಗಿ ತಂಡ ಸ್ಮಾರ್ಟ್‌ ಆಗಿ ಆಟವನ್ನು ನಿಭಾಯಿಸಿದ್ದಾರೆ. ಇನ್ನೂ ಮೂರನೇ ಹಂತದ ಟಾಸ್ಕ್‌ ಉಳಿದುಕೊಂಡಿದ್ದು ಸಮಸ್ಯೆ ಬಗೆಹರಿಯುವ ಟಾಸ್ಕ್‌ ಮುಂದಿನ ಸಂಚಿಕೆಯಲ್ಲಿ ಪ್ರಸಾರವಾಗಲಿದೆ.

ಇದನ್ನೂ ಓದಿ | Bigg Boss Kannada | ಪ್ರಶಾಂತ್ ಸಂಬರಗಿ- ರೂಪೇಶ್ ರಾಜಣ್ಣ ವಾರ್‌: ಒಗ್ಗರಣೆ ಹಾಕಿದ ಅರುಣ್‌ ಸಾಗರ್‌!

Exit mobile version