Site icon Vistara News

Bigg Boss Kannada | ಕ್ಯಾಪ್ಟನ್‌ ದೀಪಿಕಾ ದಾಸ್‌ ಫೇವರಿಸಮ್‌ ಆಟ ಆಡ್ತಿದ್ದಾರೆ: ರೂಪೇಶ್‌ ರಾಜಣ್ಣ ಕೆಂಡಾಮಂಡಲ!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9 (Bigg Boss Kannada) 25ನೇ ದಿನಕ್ಕೆ ಕಾಲಿಟ್ಟಿದೆ. ʻಗುಂಪಿಗೆ ಸೇರದ ಪದʼ ಎನ್ನುವ ಟಾಸ್ಕ್‌ನ್ನು ಬಿಗ್‌ ಬಾಸ್‌ ನೀಡಿದ್ದರು. ಈ ಟಾಸ್ಕ್‌ ವಿಚಾರಕ್ಕೆ ಕ್ಯಾಪ್ಟನ್‌ ದೀಪಿಕಾ ದಾಸ್‌ ಮತ್ತು ರೂಪೇಶ್‌ ರಾಜಣ್ಣ ಮಧ್ಯೆ ವಾರ್‌ ಆಗಿದೆ.

ಪರಸ್ಪರ ಸವಾಲೊಡ್ಡುವ ಸಲುವಾಗಿ, ಬಿಗ್‌ ಬಾಸ್‌ ಒಂದು ಟಾಸ್ಕ್‌ ನೀಡಿದ್ದರು. ಅದುವೇ ಗುಂಪಿಗೆ ಸೇರದ ಪದ. ಮೊದಲ ಹಂತದ ಅನುಸಾರ ಪ್ರತಿ ತಂಡದ ಸದಸ್ಯರು ಚರ್ಚಿಸಿ ಎದುರಾಳಿ ತಂಡಕ್ಕೆ ಕೇಳಲು ಪ್ರತಿ ಗುಂಪಲ್ಲಿ ಐದು ಪದಗಳಿರುವಂತೆ 21 ಗುಂಪುಗಳನ್ನು ತಯಾರಿಸಬೇಕು. ಪ್ರತಿ ಗುಂಪಿನಲ್ಲಿ ಒಂದು ಗುಂಪಿಗೆ ಸೇರದ ಪದ ಇರಬೇಕು. ಎರಡನೇ ಹಂತದಲ್ಲಿ ಪ್ರತಿ ತಂಡದ ಏಳು ಸದಸ್ಯರು ತಯಾರಿಸಿದ ಪದಗಳಲ್ಲಿ ಪದ ಯಾವುದೆಂದು ಗುರುತಿಸಬೇಕು.

ಎರಡನೇ ಹಂತದಲ್ಲಿ ಕ್ಯಾಪ್ಟನ್ ದೀಪಿಕಾ‌, ತಂಡದ ಸದಸ್ಯರನ್ನು ಸಾಲಾಗಿ ನಿಲ್ಲಿಸಿ, ಎದುರಾಳಿ ತಂಡದವರು ತಯಾರಿಸಿದ ಪ್ರಶ್ನೆಗಳನ್ನು ನಿಂತಿರುವ ಸದಸ್ಯರಿಗೆ ಸರದಿ ಪ್ರಕಾರ ಒಂದೊಂದಾಗಿಯೇ ಪ್ರಶ್ನೆಗಳನ್ನು ಕೇಳಬೇಕು. ಗುಂಪಿಗೆ ಸೇರದ ಪದ ಯಾವುದೆಂದು ಹೇಳಬೇಕು. ಪ್ರತಿ ತಂಡಕ್ಕೆ 21 ಪ್ರಶ್ನೆಗಳನ್ನು 10 ನಿಮಿಷ 30 ಸೆಕೆಂಡ್‌ ಕಾಲಾವಕಾಶ ನೀಡಲಾಗುತ್ತದೆ. ಪ್ರತಿ ಉತ್ತರಕ್ಕೆ 10 ಅಂಕ ಇರುತ್ತದೆ. ಪ್ರತಿ ಪ್ರಶ್ನೆಯ ಉತ್ತರ, ಕಾರಣ ಹೇಳಬೇಕು. ಒಂದು ವೇಳೆ ಪ್ರಶ್ನೆ ತಪ್ಪಾಗಿದ್ದಾರೆ 5 ಅಂಕ ಕಳಿಯಬೇಕಾಗುತ್ತದೆ. ಈ ಟಾಸ್ಕ್‌ನಲ್ಲಿ ಪ್ರಶಾಂತ್‌ ಸಂಬರಗಿ ಟೀಮ್‌ ʻಧಮ್‌ ಪವರ್‌ʼ ವಿಜೇತರಾಗಿ ಹೊರಹೊಮ್ಮಿತು. ರೂಪೇಶ್‌ ರಾಜಣ್ಣ ಅವರ ʻಕಾಮನ ಬಿಲ್ಲುʼ ತಂಡ ಸೋಲನುಭವಿಸಿತು.

ಇದನ್ನೂ ಓದಿ | Bigg Boss Kannada | ಪ್ರಶಾಂತ್‌-ಸಾನ್ಯ ತರ್ಲೆ: ರೂಪೇಶ್ ರಾಜಣ್ಣ ಗಿರಿಗಿಟ್ಲೆ!

ಈ ಟಾಸ್ಕ್‌ನಲ್ಲಿ ಬೆಂಗಳೂರು ಸಿಲಿಕಾನ್‌ ಸಿಟಿ ಎಂಬ ಉತ್ತರಕ್ಕೆ ವಾದ ವಿವಾದಗಳು ಆಗಿದ್ದು, ಪ್ರಶಾಂತ್‌ ಟೀಮ್‌ಗೆ ದೀಪಿಕಾ ಫೇವರಿಸಮ್‌ ಮಾಡುತ್ತಿದ್ದಾರೆ ಎಂದು ರೂಪೇಶ್‌ ರಾಜಣ್ಣ ಕೂಗಾಡಿದರು. ಆಟದ ಮಧ್ಯದಲ್ಲೇ ಎದ್ದು ಹೋಗಿದ್ದಾರೆ. ಕಾಮನಬಿಲ್ಲು ತಂಡಕ್ಕೆ ʻವಾದ ಮಾಡಬೇಕು ಎಂದು ಮಾಡಬೇಡಿʼ ಎಂದು ದೀಪಿಕಾ ಹೇಳಿದ್ದಾರೆ. ʻಆದರೆ ಪ್ರಶ್ನೆಯೇ ತಪ್ಪಾಗಿದ್ದರೆ. ಉತ್ತರ ಹೇಗೆ ಹೇಳುತ್ತಾರೆʼʻ ಎಂದು ಕಾಮನಬಿಲ್ಲು ತಂಡ ದೀಪಿಕಾಗೆ ಪ್ರಶ್ನೆ ಕೇಳಿದ್ದಾರೆ. ʻಹಾಗೇ ಮಲ್ಟಿಪಲ್‌ ಡೈಮೆನ್ಷನ್‌ ಬಂದರೆ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದೀರಿ ಆದರೆ ಅವರಿಗೆ ಯಾಕೆ ಬೇರೆ ತರಹ ನೋಡಿಲ್ಲ, ನಮಗೆ ಪರಿಶೀಲಿಸಿದಂತೆ ಅವರಿಗೆ ಯಾಕೆ ಸರಿಯಾಗಿ ಗಮನಿಸಿಲ್ಲʼʼ ಎಂದು ದಿವ್ಯಾ ಉರುಡುಗ ಅವರು ದೀಪಿಕಾ ಜತೆ ವಾದ ಮಾಡಿದ್ದಾರೆ.

ಈ ಕುರಿತು ಕಾಮನಬಿಲ್ಲು ತಂಡದ ಕ್ಯಾಪ್ಟನ್‌ ರೂಪೇಶ್‌ ರಾಜಣ್ಣ ಕೋಪಗೊಂಡಿದ್ದು ʻʻದೀಪಿಕಾ ಅವರು ಹೆಚ್ಚು ಕಮ್ಮಿ 90% ಪ್ರಶಾಂತ್‌ ಟೀಮ್‌ ಅವರಿಗೆ ಫೇವರ್‌ ಆಗಿ ಮಾತನಾಡುತ್ತಿದ್ದಾರೆ ಹೊರತು, ಕ್ಯಾಪ್ಟನ್‌ ದೀಪಿಕಾ ಕೇಳಿಸಿಕೊಳ್ಳಲು ತಯಾರಿಲ್ಲ. ನಮ್ಮವರು ಅಷ್ಟು ಚೆನ್ನಾಗಿ ಆಡಿದ್ದಾರೆ. ಆದರೆ ಉತ್ತರವನ್ನು ತೆಗೆದುಕೊಳ್ಳಲು ದೀಪಿಕಾ ತಯಾರಿಲ್ಲʼʼ. ಎಂದಿದ್ದಾರೆ. ನಂತರ ರೂಪೇಶ್‌ ರಾಜಣ್ಣ ಅವರಿಗೆ ಅಮೂಲ್ಯ ʻʻನಾವು ಫೇವರಿಸಮ್‌ ಎಂಬ ಪದ ಉಪಯೋಗಿಸಿ ತಪ್ಪು ಮಾಡುವುದು ಬೇಡ. ಬೇಕಾದರೆ ನ್ಯಾಯ ಕೇಳೋಣ, ಫೇವರಿಸಮ್‌ ಎನ್ನುವುದು ಅದು ನೀವು ಬಳಿಸಿದ ಪದʼʼ ಎಂದಿದ್ದಾರೆ.

ಇದನ್ನೂ ಓದಿ | Bigg Boss Kannada | ಹೆಣ್ಣಿಗೆ ಹೆಣ್ಣೇ ಶತ್ರು , ಆ ಗ್ರೂಪ್‌ನಲ್ಲಿ ಇದ್ದಿದ್ದರೆ ನಾಮಿನೇಟ್‌ ಆಗ್ತಾ ಇರಲಿಲ್ಲ: ಕಾವ್ಯಶ್ರೀ

Exit mobile version