Site icon Vistara News

Bigg Boss Kannada | ಈ ವಾರದ ಕ್ಯಾಪ್ಟನ್‌ ಕಾವ್ಯಶ್ರೀ ಗೌಡ: ಕಳಪೆ ಪಟ್ಟ ಯಾರಿಗೆ?

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada) ಈ ವಾರ ಕಾವ್ಯಶ್ರೀ ಗೌಡ ಅವರು ಮನೆಯ ಕ್ಯಾಪ್ಟನ್‌ ಆಗಿ ಆಯ್ಕೆಯಾಗಿದ್ದಾರೆ. ಮನೆಯ ಸದಸ್ಯರು ಕಳಪೆಯನ್ನು ರೂಪೇಶ್‌ ರಾಜಣ್ಣ ಅವರಿಗೆ ನೀಡಿದರೆ, ಉತ್ತಮ ಪ್ರದರ್ಶನಕಾರರಾಗಿ ಕಾವ್ಯಶ್ರೀ ಗೌಡ ಹೊರಹೊಮ್ಮಿದ್ದಾರೆ.

ಹಿಂದಿನ ಸಂಚಿಕೆಯಲ್ಲಿ ಸರಣಿ ಟಾಸ್ಕ್‌ ಬಿಗ್‌ ಬಾಸ್‌ ನೀಡಿದ್ದು, ಅನುಪಮಾ ಗೌಡ, ಅಮೂಲ್ಯ ಮತ್ತು ಕಾವ್ಯಶ್ರೀ ಅವರು ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗಿದ್ದರು. ಕ್ಯಾಪ್ಟನ್ಸಿ ಟಾಸ್ಕ್‌ ಬಿಗ್‌ ಬಾಸ್‌ ನೀಡಿದ್ದು, ಇದರ ಅನುಸಾರ ಆಡುವ ಸದಸ್ಯರು ಮಂಜುಗಡ್ಡೆಯಿಂದ ತುಂಬಿರುವ ತೊಟ್ಟಿಯಲ್ಲಿ ಎರಡು ನಿಮಿಷ ಸರಿಯಾಗಿ ಕುಳಿತುಕೊಳ್ಳಬೇಕು. ಬಳಿಕ ತಾವು ಆರಿಸಿದ ಸ್ಟ್ಯಾಂಡ್‌ ಬಳಿ ಬಂದು ಮೇಲೆ ಮರದ ಹಲಗೆ ಮತ್ತು ತುಂಡುಗಳನ್ನು ಉಪಯೋಗಿಸಿ ಟವರ್‌ ಕಟ್ಟಬೇಕು. ಕಟ್ಟಿದ ಟವರ್‌ ಎತ್ತರ ಸೂಚಿಸಿರುವ ಕಂಬಿಯನ್ನು ದಾಟಿದಾಗ ಆ ಟವರ್‌ ಪೂರ್ಣವಾಗುತ್ತದೆ. ಈ ಟಾಸ್ಕ್‌ನಲ್ಲಿ ಕಾವ್ಯಶ್ರೀ ಗೌಡ ವಿಜೇತರಾಗಿ, ಮನೆಯ ಕ್ಯಾಪ್ಟನ್‌ ಆದರು.

ಇದನ್ನೂ ಓದಿ | Bigg Boss Kannada | ಭಿನ್ನಮತಕ್ಕೆ ಕಾರಣವಾದ ಒಮ್ಮತದ ಚರ್ಚೆ: ರೂಪೇಶ್ ಶೆಟ್ಟಿಗೆ ಚಿಕ್ಕ ಲೋಟ, ದೊಡ್ಡ ಶಿಕ್ಷೆ!

ಕ್ಯಾಮೆರಾ ಮುಂದೆ ಕಾವ್ಯಶ್ರೀ ಗೌಡ ಕ್ಯಾಪ್ಟನ್‌ ಆದ ಖುಷಿಗೆ ಕಣ್ಣೀರು ಹಾಕಿದ್ದಾರೆ. ಕಾವ್ಯಶ್ರೀ ಗೌಡ ಮಾತನಾಡಿ, ʻʻಮನೆಯಲ್ಲಿ ನನಗೆ ಸರಿಯಾಗಿ ಟಾಸ್ಕ್‌ ನಿಭಾಯಿಸುವುದಿಲ್ಲ ಎಂದು ಆಡಿಕೊಳ್ಳುತ್ತಿದ್ದರು. ಇದೀಗ ನನ್ನನ್ನು ನಾನು ಪ್ರೂವ್‌ ಮಾಡಿಕೊಂಡಿದ್ದೇನೆ. ಅವಕಾಶ ನೀಡಿದ ಬಿಗ್‌ ಬಾಸ್‌ಗೆ ಧನ್ಯವಾದʼʼಎಂದರು.

ಈ ವಾರದ ಕಳಪೆ ಸುತ್ತಿನಲ್ಲಿ ಮನೆಯ ಸದಸ್ಯರು ಹೆಚ್ಚಾಗಿ ರೂಪೇಶ್‌ ರಾಜಣ್ಣ ಅವರ ಹೆಸರನ್ನು ಸೂಚಿಸಿದ್ದಾರೆ. ಅತ್ಯುತ್ತಮವನ್ನು ಕಾವ್ಯಶ್ರೀ ಮತ್ತು ಪ್ರಶಾಂತ್‌ ಸಂಬರಗಿ ಎಂದು ಹೇಳಿದರು. ಪ್ರಶಾಂತ್‌ ಸಂಬರಗಿ ಈ ವಾರ ಮನೆಯಲ್ಲಿ ಕ್ಯಾಪ್ಟನ್ಸಿ ಜತೆ ಆಟ ನಿಭಾಯಿಸಿದ ರೀತಿ ಮತ್ತು ಅವರಲ್ಲಾದ ಬದಲಾವಣೆ ಬಗ್ಗೆ ಸದಸ್ಯರು ಸಂತಸ ವ್ಯಕ್ತಪಡಿಸಿದರು. ರೂಪೇಶ್‌ ರಾಜಣ್ಣ ಅವರ ಕುರಿತು ಮನೆಮಂದಿ ಅಸಮಾಧಾನ ಹೊರಹಾಕಿದರು. ಅವರು ಮಾತನಾಡುವ ಶೈಲಿ, ಒಬ್ಬರನ್ನು ನೋಯಿಸುವ ರೀತಿ ಸರಿಯಾಗಿರಲಿಲ್ಲ ಎಂದರು.

ಇದನ್ನೂ ಓದಿ | Bigg Boss Kannada | ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಡಲಿದ್ದಾರಾ ಸೋನು ಗೌಡ-ಚಕ್ರವರ್ತಿ ಚಂದ್ರಚೂಡ್‌?

Exit mobile version