Site icon Vistara News

Bigg Boss Kannada | ಈ ವಾರದ ಕ್ಯಾಪ್ಟನ್‌ ರೇಸ್‌ನಲ್ಲಿ ಈ ಮೂವರು ಸ್ಪರ್ಧಿಗಳು!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌9ರ (Bigg Boss Kannada) ಮೂರನೇ ವಾರದ ಕ್ಯಾಪ್ಟನ್ಸಿ ಟಾಸ್ಕ್‌ಗೆ ದೀಪಿಕಾ ದಾಸ್‌, ಅನುಪಮಾ ಹಾಗೂ ರೂಪೇಶ್‌ ಗೌಡ ಆಯ್ಕೆಯಾಗಿದ್ದಾರೆ. ಈ ಮೂವರಲ್ಲಿ ಒಬ್ಬರು ಕ್ಯಾಪ್ಟನ್‌ ಆಗಿ ಆಯ್ಕೆಯಾಗಲಿದ್ದಾರೆ. ಈ ವಾರದ ಗೇಮ್‌ ಸ್ಟ್ರ್ಯಾಟಜಿ ಉಲ್ಟಾ ಆಗಿದೆ.

ಆರಂಭದಲ್ಲಿಯೇ ದೀಪಿಕಾ ದಾಸ್‌ ಮತ್ತು ಅನುಪಮಾ ಸೋತಿದ್ದರು. ಮೊದಲಿಗೆ ಅನುಪಮಾ, ನೇಹಾ, ರಾಕೇಶ್‌, ದಿವ್ಯಾ, ಅಮೂಲ್ಯ, ದಿವ್ಯಾ ಉರುಡುಗ ಗ್ರೂಪ್‌‌ ಮಾಡಿಕೊಂಡು ಡೀಲಿಂಗ್‌ಗೆ ಇಳಿದರು. ಟಾಸ್ಕ್‌ ಶುರುವಾಗಲೇ ದೀಪಿಕಾ ದಾಸ್‌ ಔಟ್‌ ಆದರು. ಪ್ರಶಾಂತ್‌ ಸಂಬರಗಿ ಅನುಪಮಾ ಗೌಡರನ್ನು ಔಟ್‌ ಮಾಡುವಲ್ಲಿ ವಿಜೇತರಾದರು. ದೀಪಿಕಾ ದಾಸ್‌ಗೂ ಕೂಡ ಗ್ರೂಪ್‌ ಒಡೆಯಬೇಕು ಎನ್ನುವ ಉದ್ದೇಶ ಹೊಂದಿದ್ದರು.

ಇದನ್ನೂ ಓದಿ | Bigg Boss Kannada | ಪ್ರಶಾಂತ್‌ಗೆ ವಿನೋದ್‌ ಅಕ್ಕರೆ ತೋರಿಸಿದರೆ: ಸ್ಟೇಟ್‌ಮೆಂಟ್‌ ಪಾಸ್‌ ಮಾಡಬೇಡಿ ಅಂದ್ರು ಅನುಪಮಾ!

ನೇಹಾ, ದಿವ್ಯಾ, ಅಮೂಲ್ಯರನ್ನು ಔಟ್‌ ಮಾಡುವಲ್ಲಿ ಪ್ರಶಾಂತ್‌ ಸಕ್ಸೆಸ್‌ ಆದರು. ನಂತರ ಬಿಗ್‌ ಬಾಸ್‌ ಎರಡು ಅವಕಾಶಗಳನ್ನು ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ನೀಡಿದರು. ಅದರಂತೆ ಟಂಗ್‌ ಟ್ವಿಸ್ಟರ್‌ ಮೂಲಕ ದೀಪಿಕಾ ದಾಸ್‌ ಮತ್ತೆ ಮರಳಿದರು. ಚಿನ್ನವನ್ನು ವಿನಿಯೋಗಿಸಿ ತಾವೇ ಮರಳುವ ಅವಕಾಶವನ್ನು ಔಟ್‌ ಆಗಿದ್ದ ಸ್ಪರ್ಧಿಗಳಿಗೆ ನೀಡಿದ್ದರು. ಈ ಅವಕಾಶ ಅನುಪಮಾ ಪಡೆದುಕೊಂಡರು.

ಇತ್ತ ರೂಪೇಶ್‌ ಹೆಚ್ಚು ಚಿನ್ನವನ್ನು ಪಡೆಯುವಲ್ಲಿ ವಿಜೇತರಾದರು. ನಿಧಿ ಶೋಧಕರ ಪೈಕಿ ಅನುಪಮಾ ಮತ್ತು ದೀಪಿಕಾ ಆಯ್ಕೆ ಆಗಿದ್ದಾರೆ. ವಿಸರ್ಜಕರ ಪೈಕಿ ರೂಪೇಶ್‌ ಶೆಟ್ಟಿ ಆಯ್ಕೆ ಆಗಿದ್ದಾರೆ. ಈ ಮೂವರಲ್ಲಿ ಯಾರು ಕ್ಯಾಪ್ಟನ್‌ ಆಗುತ್ತಾರೆ ಎಂಬ ಕುತೂಹಲ ಹೆಚ್ಚಿದೆ.

ಇದನ್ನೂ ಓದಿ | Bigg Boss Kannada | ಕಾವ್ಯಶ್ರೀ ಮಚ್ಚೆಗೆ ಆರ್ಯವರ್ಧನ್‌ ಭವಿಷ್ಯ: ಕ್ಯಾಮೆರಾ ಸ್ವಲ್ಪ ತಿರುಗಣ್ಣ ಅಂದ್ರು ರಾಜಣ್ಣ!

Exit mobile version