Site icon Vistara News

Bigg Boss Kannada | ಕ್ಯಾಪ್ಟನ್ಸಿ ಪಾಯಿಂಟ್ಸ್‌ ಬೇಕಾ, ಉಡುಗೊರೆ ಬೇಕಾ: ದೂರು, ದುರಾಸೆಗಳ ನಡುವೆ ಹೆಚ್ಚಾಯ್ತು ವಾಗ್ವಾದ!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada ) ಐದನೇ ವಾರ ದೀಪಾವಳಿಗೆ ಬಿಗ್‌ ಬಾಸ್‌ ಒಂದು ಟಾಸ್ಕ್‌ಅನ್ನು ನೀಡಿತ್ತು. ‘ಉಡುಗೊರೆ ಮುಖ್ಯವೇ ಅಥವಾ ಕ್ಯಾಪ್ಟನ್ಸಿ ಪಾಯಿಂಟ್ಸ್‌ ಮುಖ್ಯವೇʼ ಎಂಬುದಾಗಿತ್ತು. ಈ ಕುರಿತಂತೆ ರೂಪೇಶ್‌ ರಾಜಣ್ಣ ಮತ್ತು ಪ್ರಶಾಂತ್‌ ನಡುವೆ ಜಗಳ ತಾರಕಕ್ಕೇರಿದೆ. ಅರುಣ್‌ ಸಾಗರ್‌ ಅವರ ʻದುರಾಸೆʼ ಎನ್ನುವ ಪದ ಮನೆಯನ್ನು ಅಲ್ಲೋಲ ಕಲ್ಲೋಲ ಆಗುವಂತೆ ಮಾಡಿದೆ.

‘ಬಿಗ್‌ ಬಾಸ್‌ ಉಡುಗೊರೆ ಮುಖ್ಯವೇ ಅಥವಾ ಕ್ಯಾಪ್ಟನ್ಸಿ ಪಾಯಿಂಟ್ಸ್‌ ಮುಖ್ಯವೇʼ ಎನ್ನುವ ಟಾಸ್ಕ್‌ನಲ್ಲಿ ಮನೆಯಲ್ಲಿ ಕೆಲವರು ಎರಡೂ ಮುಖ್ಯ ಎಂಬಂತೆ ಟಾಸ್ಕ್‌ ನಿಭಾಯಿಸುತ್ತಿದ್ದರು. ಆದರೆ ಅರುಣ್‌ ಸಾಗರ್‌ ಈ ಬಗ್ಗೆ ʻʻಕ್ಯಾಪ್ಟನ್ಸಿ ಟಾಸ್ಕ್‌ ಕೂಡ ಬೇಕು, ಉಡುಗೊರೆ ಬೇಕು ಎನ್ನುವುದು ದುರಾಸೆʼʼ ಎಂದು ಹೇಳಿದರು. ಈ ಕುರಿತು ರೂಪೇಶ್‌ ರಾಜಣ್ಣ ಅವರು ಅರುಣ್‌ ಸಾಗರ್‌ ಅವರಿಗೆ ʻʻಈ ರೀತಿ ಪದ ಬಳಸಬೇಡಿʼʼ ಎಂದರು. ರೂಪೇಶ್‌ ರಾಜಣ್ಣ ಅವರಿಗೂ ನೇಹಾ ಅವರು ಸಾಥ್‌ ನೀಡಿದರು.

ಇದನ್ನೂ ಓದಿ | Bigg Boss Kannada | ಸಾನ್ಯ ನೇರವಾಗಿ ನಾಮಿನೇಟ್‌ ಮಾಡಿದ್ದಕ್ಕೆ ಆರ್ಯವರ್ಧನ್‌ ಫುಲ್‌ ಗರಂ!

ರೂಪೇಶ್‌ ರಾಜಣ್ಣ ಅವರು ಅರುಣ್‌ ಸಾಗರ್‌ ಅವರಿಗೆ ಸಮಾಧಾನದಿಂದಲೇ ʻʻನೀವು ದುರಾಸೆ ಎಂದು ಪದ ಬಳಸಬೇಡಿ. ಇಲ್ಲಿ ಯಾರೂ ದರಾಸೆಯಿಂದ ಆಡುತ್ತಿಲ್ಲ. ನಿಮ್ಮ ಸಮಸ್ಯೆ ಏನೇ ಇದ್ದರೂ ಕ್ಯಾಪ್ಟನ್‌ ಜತೆ ಚರ್ಚಿಸಿʼʼಎಂದರು.

ಅರುಣ್‌ ಸಾಗರ್‌ ಮತ್ತು ರೂಪೇಶ್‌ ರಾಜಣ್ಣ ಅವರ ಮಾತುಕತೆ ತಾರಕಕ್ಕೆ ಏರುತ್ತಲೇ ಹೋಯಿತು. ರೂಪೇಶ್‌ ರಾಜಣ್ಣ ಅವರು ಅರುಣ್‌ ಸಾಗರ್‌ ಮಾತಿಗೆ ಖಂಡಿಸಿದರೆ, ಅರುಣ್‌ ಸಾಗರ್‌ ಅವರು ಕೇಳಲು ತಯಾರು ಇರಲಿಲ್ಲ. ನೇಹಾ ಗೌಡ ಕೂಡ ಅರುಣ್‌ ಸಾಗರ್‌ ಅವರಿಗೆ ಮನವರಿಕೆ ಮಾಡಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲೇ ಇಲ್ಲ. ಇಷ್ಟಾದ ಮೇಲೆ ಪ್ರಶಾಂತ್‌ ಸಂಬರಗಿ ಚರ್ಚೆಗೆ ಎಂಟ್ರಿ ಕೊಟ್ಟರು.

ಮೊದ ಮೊದಲು ರೂಪೇಶ್‌ ರಾಜಣ್ಣ ಅವರ ಜತೆ ಸಮಾಧಾನವಾಗಿಯೇ ಮಾತನಾಡಿದ ಪ್ರಶಾಂತ್‌ ನಂತರ ʻʻಹೇಳೋದು ತಿಳ್ಕೊಲಲೇʼʼ ಎಂದು ಹೇಳಿದರು. ರೂಪೇಶ್‌ ರಾಜಣ್ಣ ಅವರಿಗೆ ಕೋಪ ನೆತ್ತಿಗೆ ಏರಿದ್ದು ʻʻಸರಿಯಾಗಿ ಮಾತನಾಡುವುದು ಕಲಿತುಕೊಳ್ಳಿʼʼ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ | Bigg boss Kannada | ಕರಿಬೇವು ಚೆಲ್ಲಿದ ವಿನೋದ್ ಗೊಬ್ಬರ ಗಾಲಗೆ ಕ್ಲಾಸ್ ತೆಗೆದುಕೊಂಡ ಕಾವ್ಯ ಶ್ರೀ

Exit mobile version