ಬೆಂಗಳೂರು : ಬಿಗ್ ಬಾಸ್ ಸೀಸನ್ 9ರ (Bigg Boss Kannada) ವೀಕೆಂಡ್ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಕ್ಯಾಪ್ಟನ್ಸಿ ಟಾಸ್ಕ್ ಕುರಿತಾಗಿ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವಾರ ಬಿಗ್ ಬಾಸ್ ಗೊಂಬೆಗಳ ಟಾಸ್ಕ್ ನೀಡಿದ್ದರು. ಈ ಟಾಸ್ಕ್‌ನಲ್ಲಿ ಎರಡು ತಂಡಗಳು ರಚನೆ ಆಗಿದ್ದು, ಎರಡೂ ತಂಡಗಳ ಅಂಕ ಟೈ ಆಯಿತು. ಈ ಕಾರಣದಿಂದಾಗಿ ಕ್ಯಾಪ್ಟನ್ ಯಾರಾಗಬೇಕು ಎಂದು ಸ್ಪರ್ಧಿಗಳು ಚರ್ಚಸಿ ಹೇಳಬೇಕೆಂದು ಬಿಗ್ ಬಾಸ್ ಆದೇಶ ನೀಡಿದ್ದರು. ಆದರೆ ಸ್ಪರ್ಧಿಗಳು ಯಾರೊಬ್ಬರ ಹೆಸರನ್ನೂ ಹೇಳದ ಕಾರಣ ಈ ವಾರ ಕ್ಯಾಪ್ಟನ್ಸಿ ಟಾಸ್ಕ್ ಅನ್ನು ಕ್ಯಾನ್ಸಲ್ ಮಾಡಿದ್ದಾರೆ. ಈ ವಿಚಾರವನ್ನು ಕಿಚ್ಚ ಸುದೀಪ್ ಸ್ಪರ್ಧಿಗಳ ಮುಂದೆ ಪ್ರಸ್ತಾಪಿಸಿದ್ದಾರೆ.
ಕಿಚ್ಚ ಸುದೀಪ್ ಮಾತನಾಡಿ ʻʻಬಿಗ್ ಬಾಸ್ ಎನ್ನುವುದು ವ್ಯಕ್ತಿತ್ವಕ್ಕೆ ಸಂಬಂಧಪಟ್ಟಂತಹ ಶೋ. ನಾನು ಮೊದಲಿಂದಲೂ ಹೇಳುತ್ತಲೇ ಬಂದಿದ್ದೇ ಕ್ಯಾಪ್ಟನ್ಸಿ ಆಯ್ಕೆಯಲ್ಲಿ ಕೆಲವು ಟಾಸ್ಕ್‌ಗಳು ಬರಬಹುದು ಎಂದು. ಕೆಲವು ವಿಚಾರಗಳು ಬರಬಹುದು. ಆದರೆ ಬಿಗ್ ಬಾಸ್ ಗೆಲ್ಲುವುದಕ್ಕೆ ಎಲ್ಲವೂ ಮುಖ್ಯವಾಗುತ್ತದೆ. ಬಿಗ್ ಬಾಸ್ ಗೆಲುವು ಕೇವಲ ಟಾಸ್ಕ್ ಮಾತ್ರವಲ್ಲ. ಅದು ವ್ಯಕ್ತಿತ್ವಕ್ಕೆ ಕೂಡ ಸಂಬಂಧಿಸಿದೆ. ನಿರ್ಧಾರ ತೆಗೆದುಕೊಳ್ಳುವಾಗ ತಾಕಲಾಟ ಇದ್ದೇ ಇರುತ್ತದೆ. ಹಾಗಂದ ಮಾತ್ರಕ್ಕೆ ನಿರ್ಧಾರ ತೆಗೆದುಕೊಳ್ಳದೇ ಇರಲಾಗುತ್ತಾ? ಈ ಮನೆಯಲ್ಲಿ ಪ್ರತಿ ಹಂತದಲ್ಲಿ ನೀವೆಲ್ಲರೂ ಒಂದು ನಿರ್ಧಾರ ತೆಗೆದುಕೊಳ್ಳುತ್ತಿದ್ದೀರಿ. ಅದನ್ನು ನೀವೆಲ್ಲ ಅರ್ಥ ಮಾಡಿಕೊಳ್ಳಬೇಕು. ಬಿಗ್ ಬಾಸ್ ಮನೆಯಲ್ಲಿ ನಿರ್ಧಾರ ತೆಗೆದುಕೊಳ್ಳುವವರೇ ಇಲ್ಲಿ ಇರಬೇಕಾದವರು. ಒಂದು ವೇಳೆ ನಿರ್ಧಾರದಿಂದ ಎಸ್ಕೇಪ್ ಆಗುವಂತಿರುವವರು ಇದ್ದರೆ ಹೊರಗೆ ಹೋಗಹುದುʼʼಎಂದು ಖಡಕ್ ಆಗಿ ಹೇಳಿದ್ದಾರೆ.
ಇದನ್ನೂ ಓದಿ | Bigg Boss Kannada | ಚಾಮುಂಡಿ ಬೆಟ್ಟದಲ್ಲಿ ಕಾಣಿಸಿಕೊಂಡ ಬಿಗ್ ಬಾಸ್ ಕನ್ನಡ ಒಟಿಟಿ ಸ್ಪರ್ಧಿಗಳು!
ಏನಿದು ಬಿಗ್ ಬಾಸ್ ಆದೇಶ?
ಹಿಂದಿನ ಸಂಚಿಕೆಯಲ್ಲಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಗೊಂಬೆಗಳ ಟಾಸ್ಕ್ ನೀಡಿದ್ದರು. ಈ ಟಾಸ್ಕ್‌ನಲ್ಲಿ ಸೂಪರ್ ಸಿಕ್ಸ್ ತಂಡ ಹಾಗೂ ಗೋಲ್ಡನ್ ಗೊಂಬೆ ತಂಡಗಳು ಸಮನಾಗಿ ಅಂಕಗಳನ್ನು ಪಡೆದಿದ್ದಾರೆ. ಈ ನಿಟ್ಟಿನಲ್ಲಿ ಬಿಗ್ ಬಾಸ್ ಕ್ಯಾಪ್ಟನ್ ಆಯ್ಕೆಯನ್ನು ಚರ್ಚಿಸಿ ಹೇಳಿ ಎಂದು ಸ್ಪರ್ಧಿಗಳಿಗೆ ಆದೇಶ ನೀಡಿದ್ದಾರೆ. ಸ್ಪರ್ಧಿಗಳು ಒಮ್ಮತದಿಂದ ಬಿಗ್ ಬಾಸ್ ಕ್ಯಾಪ್ಟನ್ ಯಾರೆಂಬುದನ್ನು ಆಯ್ಕೆ ಮಾಡಬೇಕೆಂದು ಕೇಳಿಕೊಂಡಿದ್ದಾರೆ. ಇದರಿಂದ ಬಿಗ್ ಬಾಸ್, ಎರಡೂ ತಂಡಗಳಿಂದ ಕ್ಯಾಪ್ಟನ್ಸಿ ಟಾಸ್ಕ್‌ಗೆ ಯಾವುದೇ ಹೆಸರು ಬರದ ಕಾರಣ ಈ ವಾರ ಕ್ಯಾಪ್ಟನ್ಸಿ ಟಾಸ್ಕ್ ಇರುವುದಿಲ್ಲ. ಹಾಗೆಯೇ ಮುಂದಿನ ವಾರ ಮನೆಯಲ್ಲಿ ಯಾವ ಕ್ಯಾಪ್ಟನ್, ಇಮ್ಯುನಿಟಿ ಇರುವುದಿಲ್ಲ ಎಂದು ಆದೇಶ ನೀಡಿದ್ದರು.
ಇದನ್ನೂ ಓದಿ | Bigg Boss Kannada | ಕಳಪೆ ಪಟ್ಟದ ವಾದ- ಪ್ರತಿವಾದ: ಪ್ರಶಾಂತ್ ಸಂಬರಗಿಗೆ ಮನೆಮಂದಿ ನೀಡಿದ ಶಿಕ್ಷೆ ಏನು?