Site icon Vistara News

Bigg Boss Kannada | ಚಿತ್ರ ವಿಚಿತ್ರ ಗೇಮ್‌ನಲ್ಲಿ ಆರ್ಯವರ್ಧನ್‌ ಫುಲ್‌ ಗರಂ!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) 26ನೇ ದಿನ ಒಟಿಟಿ ಫೇಮಸ್‌ ಗೇಮ್‌ ʻಚಿತ್ರ ವಿಚಿತ್ರʼ ಟಾಸ್ಕ್‌ಅನ್ನು ಬಿಗ್‌ ಬಾಸ್‌ ನೀಡಿತ್ತು. ಈ ಟಾಸ್ಕ್‌ ಆಡುವಾಗ ರೂಪೇಶ್‌ ರಾಜಣ್ಣ ಮತ್ತು ಆರ್ಯವರ್ಧನ್‌ ಕೂಗಾಡಿಕೊಂಡಿದ್ದಾರೆ. ಆರ್ಯವರ್ಧನ್‌ ಇದ್ದಕ್ಕಿದ್ದಂತೆ ಗರಂ ಆಗಿದ್ದಾರೆ.

ಒಂದು ಕಡೆ ಅರುಣ್ ಸಾಗರ್ ಟೀಂ ಇನ್ನೊಂದು ಕಡೆ ದಿವ್ಯಾ ಉರುಡುಗ ಟೀಂ ನಿಂತಿತ್ತು. ಮೊದಲಿಗೆ ಚಿತ್ರ ನೋಡಿ ಬರೆಯುವುದಕ್ಕೆ ದಿವ್ಯಾ ಮತ್ತು ಅರುಣ್ ಸಾಗರ್ ನಿಂತಿದ್ದರು. ಅದರಲ್ಲಿ ಅರುಣ್ ಸಾಗರ್ ಟೀಂನವರು ಕಷ್ಟಪಟ್ಟು ಹೇಳಿದ್ದಾರೆ. ಹಾಗೇ ಅದನ್ನು ಎಂಜಾಯ್ ಮಾಡಿದ್ದಾರೆ. ದಿವ್ಯಾ ಉರುಡುಗ ಟೀಂನಲ್ಲಿ ಆರ್ಯವರ್ಧನ್ ಅದನ್ನು ಎಂಜಾಯ್ ಮಾಡಿಲ್ಲ ಬದಲಿಗೆ ಆಕ್ರೋಶಗೊಂಡಿದ್ದಾರೆ.

ಇದನ್ನೂ ಓದಿ | Bigg Boss Kannada | ಒಟಿಟಿ ಸೀಸನ್‍‍ನ ಸೂಪರ್‌ ಹಿಟ್‌ ಟಾಸ್ಕ್‌ ನೀಡಿದ ಬಿಗ್‌ ಬಾಸ್‌: ಗಮ್ಮತ್ತು ಮಾಡಿದ್ರು ಸ್ಪರ್ಧಿಗಳು!

ದಿವ್ಯಾ ನೋಡಿ ಬರೆದದ್ದು ಒಂದು, ಅಮೂಲ್ಯ, ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ ಅರ್ಥ ಮಾಡಿಕೊಂಡಿದ್ದು ಮತ್ತೊಂದು. ಕಡೆಗೆ ಆರ್ಯವರ್ಧನ್ ಅರ್ಥ ಮಾಡಿಕೊಳ್ಳುವಲ್ಲಿ ಸೋತಿದ್ದಾರೆ. ಅದನ್ನು ನೇಹಾ ಗುರುತಿಸುವಲ್ಲಿ ತಲೆ ಕೆಟ್ಟಿದೆ. ಕೊನೆಯಲ್ಲಿ ಕಾವ್ಯಶ್ರೀ ಉತ್ತರಿಸುವಾಗ ಹರಸಾಹಸ ಪಟ್ಟಿದ್ದಾರೆ.

ಆರ್ಯವರ್ಧನ್ ನಡವಳಿಕೆಗೆ ಅವರ ತಂಡದ ಸದಸ್ಯರು ಬೇಸರವನ್ನು ಹೊರ ಹಾಕಿದರು. ಆರ್ಯವರ್ಧನ್‌ ಕೂಗಾಡಿ ʻʻಯಾರು ಬರೆಯೋದು. ಅಲ್ಲಿ ಹಾವು ಬರೆಯೋದು ಇಲ್ಲಿಗೆ ಬರುವಷ್ಟರಲ್ಲಿ ಜಿರಲೆ ಆಗೋದುʼʼ ಎಂದು ಧ್ವನಿ ಏರಿಸಿದ್ದಾರೆ. ಇದಕ್ಕೆ ಅಮೂಲ್ಯ, ʻʻಏನಕ್ಕೆ ಕಿರುಚಾಡುತ್ತಿದ್ದೀರಾ ಗುರುಗಳೇʼʼ ಎಂದಿದ್ದಾಳೆ. ನೇಹಾ ಬಾಯಿ ಮುಚ್ಚಿ ಎಂದು ಸನ್ನೆ ಮಾಡಿದ್ದಾರೆ.

ಕ್ಯಾಪ್ಟನ್‌ ರೂಪೇಶ್ ರಾಜಣ್ಣ, ಅಲ್ಲಿಯೇ ಕೋಪವಾಗಿದ್ದು ಗುರೂಜಿಗೆ, “ಏನು ತೋರಿಸುವುದು ನಿಮಗೆ. ಕಾಮನ್ ಸೆನ್ಸ್ ಇದೆಯಾ ನಿಮಗೆ. ಒಳ್ಳೆ ಕೋತಿ ಕೋತಿ ಥರ ಆಡುತ್ತೀರಲ್ಲ” ಎಂದಿದ್ದಾರೆ. ಆರ್ಯವರ್ಧನ್‌ ಮಾತನಾಡಿ ʻʻಬೇಗನೆ ಅಳಿಸಬೇಡಿ. ಫೈನಲ್‌ ಆದಮೇಲೆ ತೋರಿಸಿ. ಅಲ್ಲಿ ಚೆನ್ನಾಗಿ ಬರೆದಿದ್ದಾರೆ. ಬುಲೆಟ್‌ ಅಲ್ಲಿ ಬರೆದಿದ್ದಾರೆ. ಇಲ್ಲಿ ಬರೋ ಅಷ್ಟರಲ್ಲಿ ಜಿರಲೆ ಆಗುತ್ತದೆ. ನಾನು 100% ಬರೀತಿನಿ ʼʼಎಂದು ಕೂಗಾಡಿದರು.

ಇದನ್ನೂ ಓದಿ | Bigg Boss Kannada | ʻನೀವು ಗುದ್ದಾಡೋದಾದ್ರೆ ಆನೆ ಜತೆ ಗುದ್ದಾಡಿʼ: ರೂಪೇಶ್‌ ರಾಜಣ್ಣ-ದೀಪಿಕಾ ವಾರ್‌!

Exit mobile version