Site icon Vistara News

Bigg Boss Kannada | ರಾಕೇಶ್‌ ಅಡಿಗ-ಅಮೂಲ್ಯ ನಡುವೆ ಮನಸ್ತಾಪ: ಕಣ್ಣಿಂದಾಚೆ, ಗಮನದಿಂದಲೂ ಆಚೆ ಆದ್ರಾ ಅಮ್ಮು!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada)ಈ ವಾರ ವಿನೋದ್‌ ಗೊಬ್ಬರಗಾಲ ಅವರು ಮನೆಯಿಂದ ಹೊರನಡೆದಿದ್ದಾರೆ. ಈ ವಾರ ರಾಕೇಶ್‌ ಅಡಿಗ ಅವರು ಕ್ಯಾಪ್ಟನ್‌ ಆಗಿ ಆಯ್ಕೆ ಆಗಿದ್ದಾರೆ. ಅಮೂಲ್ಯ ಗೌಡ ಮತ್ತು ರಾಕೇಶ್‌ ಅಡಿಗ ಮನೆಯಲ್ಲಿ ಸಖತ್‌ ಹೈಲೈಟ್‌ ಇರುವ ಜೋಡಿ. ಇದೀಗ ಅವರಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿದೆ. ಟೀ ವಿಚಾರಕ್ಕೆ ರಾಕೇಶ್‌ ಅಡಿಗ ಮತ್ತು ಅಮೂಲ್ಯ ದೂರವಾಗಿದ್ದಾರೆ.

ರಾಕೇಶ್‌ ಅಡಿಗ ಅವರು ಮನೆಯ ಸದಸ್ಯರಿಗೆ ʻʻನಾನು ಟೀ ಎಲ್ಲರಿಗೂ ಮಾಡೋದಾ, ಅಥವಾ ಅವರವರೇ ಮಾಡಿಕೊಳ್ಳುತ್ತೀರಾʼʼಎಂದು ಕೇಳಿದ್ದಾರೆ. ಈ ವೇಳೆ ಅಮೂಲ್ಯ ಅವರು ಪ್ರತಿಕ್ರಿಯೆ ನೀಡಿ ʻʻನನಗೆ ಹಾಲಿಗೆ ಜಾಸ್ತಿ ನೀರು ಹಾಕಬೇಡಿ. ನನಗೆ ಒಂದು ಪ್ಯಾಕೇಟ್ ಹಾಲು ಕೊಟ್ಟು ಬಿಡಿʼʼ ಎಂದು ಹೇಳಿದ್ದಾರೆ. ಈ ವೇಳೆ ಅಮೂಲ್ಯ ಅವರು ರಾಕೇಶ್‌ ಮೇಲೆ ಬೇಸರಗೊಂಡಿದ್ದಾರೆ. ರಾಕೇಶ್‌ ಅವರ ಬಳಿ ಅಮೂಲ್ಯ ಮಾತನಾಡಿ ʻʻನೀವು ಟೀ ವಿಚಾರ ಮಾತನಾಡುವಾಗ ನಿಮ್ಮ ಮಾತು ಗಮನಕ್ಕೆ ಬಂದಿಲ್ಲ ಎಂದು ನನಗೆ ಹೇಳಿದ್ದೀರಿ. ಆ ಮಾತು ನನಗೆ ಹಿಂಸೆ ಆಯ್ತುʼʼ. ಎಂದಿದ್ದಾರೆ. ಈ ಬಗ್ಗೆ ರಾಕೇಶ್‌ ಅಡಿಗ ಮಾತನಾಡಿ ʻʻನೀವು ದೂರ ಕೂತಿದ್ದೀರಿ. ನಾನು ನಿಮ್ಮ ಮಾತನ್ನು ಗಮನಿಸಿಲ್ಲ. ನೀವು ಎರಡು ಹೆಜ್ಜೆ ಮುಂದೆ ಬಂದಿದ್ದರೆ ನಿಮ್ಮ ಇಗೋ ಕಮ್ಮಿಯಾಗುತ್ತಿರಲಿಲ್ಲʼʼಎಂದಿದ್ದಾರೆ.

ಇದನ್ನೂ ಓದಿ | Bigg Boss Kannada | ಈ ವಾರ ಮನೆಯ ಕ್ಯಾಪ್ಟನ್‌ ರಾಕೇಶ್‌ ಅಡಿಗ: ತಂದೆ ಮಾತಿಗೆ ಮನೆಮಂದಿ ಫಿದಾ!

ಅಮೂಲ್ಯ ಈ ಬಗ್ಗೆ ಬೇಸರಗೊಂಡು ಪ್ರತಿಕ್ರಿಯೆ ನೀಡಿ ʻʻನನಗೆ ಕಾಮನ್ ಸೆನ್ಸ್ ಇಲ್ಲಾ, ನಿಮ್ಮಷ್ಟು ಥಿಂಕಿಂಗ್ ಲೆವಲ್‌ಗೆ ನಾನಿಲ್ಲʼʼ ಎಂದು ರಾಕಿ ಮುಂದೆ ಕಣ್ಣೀರಿಟ್ಟಿದ್ದಾರೆ. ಇದೀಗ ಜೋಡಿ ನಡುವೆ ಟೀ ವಿಚಾರಕ್ಕೆ ದೊಡ್ಡ ಕಲಹ ಉಂಟಾಗಿದೆ. ಮೊದಲಿನಿಂದಲೂ ಅಮ್ಮು (ಅಮೂಲ್ಯ) ಮತ್ತೆ ರಾಕಿ‌ (ರಾಕೇಶ್‌ ಅಡಿಗ) ಒಬ್ಬರಿಗೊಬ್ಬರು ಸಾಥ್ ನೀಡುತ್ತಾ ಪ್ರಶಂಸೆ ವ್ಯಕ್ತಪಡಿಸುತ್ತಿದ್ದ ಈ ಜೋಡಿಯ ನಡುವೆ ಬಿರುಕು ಉಂಟಾಗಿದೆ.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಮನೆಯಿಂದ ಹೊರನಡೆದ ವಿನೋದ್‌ ಗೊಬ್ಬರಗಾಲ

Exit mobile version