Site icon Vistara News

Bigg Boss Kannada | ಬಿಗ್‌ ಬಾಸ್‌ ಮನೆಯಲ್ಲಿ ಸ್ಥಾನಮಾನದ ಪೈಪೋಟಿ: ಗುರೂಜಿ ಸ್ಥಾನಕ್ಕೆ ಕಾಂಪಿಟೇಷನ್ ಇಲ್ಲ ಯಾಕೆ?

Bigg Boss Kannada

ಬೆಂಗಳೂರು: ಮನೆಯವರ ಸ್ಥಾನಮಾನ ಸಂಬಂಧ ಬಿಗ್‌ ಬಾಸ್‌ (Bigg Boss Kannada) ನೀಡಿದ್ದ ಟಾಸ್ಕ್‌ ಒಂದು ಸಾಕಷ್ಟು ಗಮನ ಸೆಳೆದಿದೆ. ಇದು ಒಮ್ಮತದ ತೀರ್ಮಾನ ಆಗಬೇಕೆಂಬ ಹಿನ್ನೆಲೆಯಲ್ಲಿ ಸಾಕಷ್ಟು ಕಸರತ್ತು ನಡೆದರೂ ಆರ್ಯವರ್ಧನ್‌ ಗುರೂಜಿ ಮಾತ್ರ ಒಬ್ಬಂಟಿಯಾಗಿದ್ದರು!

ಸ್ಪರ್ಧಿಗಳು ಯಾವ ಸ್ಥಾನದಲ್ಲಿ ತಾವು ಅರ್ಹರು ಎಂಬ ಲೆಕ್ಕಾಚಾರದ ಮೇರೆಗೆ ನಿಲ್ಲಬೇಕಿತ್ತು. ಸಂಖ್ಯೆಯ ಅನುಸಾರ ಸ್ಪರ್ಧಿಗಳು ನಿಲ್ಲಬೇಕಾಗುತ್ತದೆ. ಅದು ಕೂಡ ಎಲ್ಲರೂ ಚರ್ಚೆ ಮಾಡಿ ನಿಲ್ಲಬೇಕಾಗುತ್ತದೆ. ಈ ಆಟದಲ್ಲಿ ಒಂದು ಸಖ್ಯೆಯ ಹಿಂದೆ ಎಷ್ಟು ಜನ ಬೇಕಾದರೂ ನಿಲ್ಲಬಹುದು. ಆದರೆ, ಕೊನೆಯಲ್ಲಿ ಎಲ್ಲ ಸ್ಪರ್ಧಿಗಳು ಚರ್ಚೆ ಮಾಡಿ ನಿಲ್ಲಬೇಕಿತ್ತು. ನಂತರ ಆ ಸ್ಥಾನಕ್ಕೆ ತಾವು ಏಕೆ ಅರ್ಹರು ಎಂಬ ಸೂಕ್ತ ಕಾರಣವನ್ನು ನೀಡಬೇಕಿತ್ತು.

ಸೋಮಣ್ಣ , ರಾಕೇಶ್‌ ಹಾಗೂ ಸೋನು ಗೌಡ ಮೊದಲ ಸ್ಥಾನದಲ್ಲಿ ನಿಂತಿದ್ದು, ಸಾನ್ಯ ಮತ್ತು ರೂಪೇಶ್‌ ಎರಡನೇ ಸ್ಥಾನದಲ್ಲಿ ನಿಂತಿದ್ದರು. ಜಯಶ್ರೀ ಮತ್ತು ಜಶ್ವಂತ್‌ ಮೂರನೇ ಸ್ಥಾನದಲ್ಲಿ ನಿಂತರೆ, ಆರ್ಯವರ್ಧನ್‌ ಮಾತ್ರ 8ನೇ ಸ್ಥಾನದಲ್ಲಿ ನಿಂತಿದ್ದರು. ಸ್ಪರ್ಧಿಗಳು ತಮ್ಮ ಸ್ಥಾನಗಳ ಬಗ್ಗೆ ಕಾರಣವನ್ನು ನೀಡಿದ್ದಾರೆ.

ತಮ್ಮ ಸ್ಥಾನದ ಆಯ್ಕೆ ಬಗ್ಗೆ ಸೋಮಣ್ಣ ಮಾಚಿಮಾಡ ಮಾತನಾಡಿ, ʻʻನಾನು ಟಿವಿ ಸ್ಕ್ರೀನ್‌ನಲ್ಲಿ ಕಾಣಿಸಿಕೊಂಡಿದ್ದರಿಂದ ಮನೆ ಮಾತಾಗಿದ್ದೇನೆ. ಇನ್ನು ಟಾಸ್ಕ್‌ ವಿಚಾರಕ್ಕೆ ಬಂದರೆ ಎಲ್ಲ ಟಾಸ್ಕ್‌ನಲ್ಲಿಯೂ ಒಳ್ಳೆಯ ಪ್ರದರ್ಶನ ತೋರಿದ್ದೇನೆ. ಬರುವಾಗ ಒಬ್ಬನೇ ಬಂದೆ. ಹೋಗುವಾಗ ಕೂಡ ಒಬ್ಬನೇ ಹೋಗುತ್ತಿದ್ದೇನೆ. ನನಗೆ ಬಿಗ್‌ ಬಾಸ್‌ ಮೂಲಕ ಒಳ್ಳೆಯ ಕುಟುಂಬ ಸಿಕ್ಕಿದೆ. ನಾನು ಕೂಡ ಇಲ್ಲಿ ಹಲವಾರು ತಪ್ಪುಗಳನ್ನು ಮಾಡಿದ್ದೇನೆ. ಆದರೆ, ಜನರು ಇಲ್ಲಿಯವರೆಗೆ ತಂದು ನಿಲ್ಲಿಸಿದ್ದಾರೆʼʼಎಂದು ಹೇಳಿಕೊಂಡರು.

ಇದನ್ನೂ ಓದಿ | Bigg Boss Kannada | ನಂದಿನಿ ಗೂಡು ಬಿಟ್ಟು ಹೋದ್ರು, ಜಶ್ವಂತ್‌ ಒಂಟಿಯಾದ್ರು: ಇನ್ಮುಂದೆ ಸ್ಪರ್ಧೆ ಮತ್ತಷ್ಟು ಕಠಿಣ!

ರಾಕೇಶ್‌ ಮಾತನಾಡಿ ʻʻಮನೆಯವರು ವೋಟ್‌ ಮಾಡುವುದು ಯಾವುದು ಶಾಶ್ವತ ಅಲ್ಲ. ಅದರಲ್ಲಿ ಯಾವುದೂ ನಿರ್ಧಾರವಾಗುವುದಿಲ್ಲ. ಜನರು ನನಗೆ ಈಗಾಗಲೇ ವೋಟ್‌ ಹಾಕಿ ನೇರವಾಗಿ ಫಿನಾಲೆಗೆ ಕಳುಹಿಸಿದ್ದಾರೆ. ಆ ಆಧಾರದ ಮೇಲೆ ನಾನು ಮೊದಲ ಸ್ಥಾನಕ್ಕೆ ಅರ್ಹʼʼ ಎಂದು ಹೇಳಿದರು.

ಸೋನು ಗೌಡ ಮಾತನಾಡಿ ʻʻಬಿಗ್‌ ಬಾಸ್‌ ಮನೆಯಲ್ಲಿ ಟಾಸ್ಕ್‌ಗಿಂತ ವ್ಯಕ್ತಿತ್ವ ತುಂಬಾ ಮುಖ್ಯ. ನನ್ನ ಮಟ್ಟಿಗೆ ಇಲ್ಲಿಯವರೆಗೆ ಫನ್‌ ನೀಡಿದ್ದೇನೆ, ಸ್ಟ್ರಿಕ್ಟ್‌, ಕಾಮಿಡಿ ಹಾಗೂ ಬೈಸಿಕೊಂಡಿದ್ದೇನೆ. ಜನರು ಇಲ್ಲಿಯವರೆಗೆ ವೋಟ್‌ ಮಾಡಿದ್ದಾರೆ. ಆದ್ದರಿಂದ ಮೊದಲ ಸ್ಥಾನಕ್ಕೆ ನಾನು ಅರ್ಹʼʼ ಎಂದರು.

ಸಾನ್ಯ ಮಾತನಾಡಿ ʻʻಮೊದಲ ಸ್ಥಾನವನ್ನು ನಾನು ಆಯ್ಕೆ ಮಾಡಿಕೊಳ್ಳುವುದಕ್ಕಿಂತ ಜನರು ಅದನ್ನು ತೀರ್ಮಾನಿಸಬೇಕು. ನಾನು ಇಲ್ಲಿ ನನ್ನ ಬೆಳವಣಿಗೆಗೆ ಎಂದು ಬಂದೆ. ನಾನು ಕಲಿಯುವುದು ಸಾಕಷ್ಟು ಇದೆ. ನನ್ನ ಮಾತಿನಲ್ಲಿಯೂ ಸಾಕಷ್ಟು ಬದಲಾವಣೆ ಆಗಬೇಕಿದೆ. ಒಂದು ವೇಳೆ ಮೊದಲ ಸ್ಥಾನ ಆಯ್ಕೆ ಮಾಡಿಕೊಂಡರೆ ಬದಲಾವಣೆಗೆ ಆಸ್ಪದವೇ ಇರುವುದಿಲ್ಲ. ಜನ ನನ್ನನ್ನು ಮೊದಲ ಸ್ಥಾನಕ್ಕೆ ಕಳುಹಿಸಿದರೆ ಖಂಡಿತ ಖುಷಿ ಪಡುವೆʼʼಎಂದರು.

ರೂಪೇಶ್‌ ಶೆಟ್ಟಿ ಮಾತನಾಡಿ, ʻಮೊದಲ ಸ್ಥಾನಕ್ಕೆ ಬರುವ ಆಸೆಗಳು ಇವೆ. ಆದರೆ, ನಾನಿನ್ನೂ ಪರಿಪೂರ್ಣ ಆಗಿಲ್ಲ ಎಂದೆನಿಸುತ್ತದೆ. ನನಗೆ ಇನ್ನೂ ಸಮಯವಿದೆ. ಕೆಲವೊಂದಿಷ್ಟನ್ನು ನಾನು ತಿದ್ದಿಕೊಳ್ಳಬೇಕು. ಮೊದಲೆಲ್ಲ ನಾನು ಟಾಸ್ಕ್‌ ನಿಭಾಯಿಸುವುದಿಲ್ಲ ಎಂಬ ಮಾತುಗಳು ಇತ್ತು. ಆದರೆ, ನಾನು ಎಲ್ಲ ವಿಭಾಗಗಳಲ್ಲಿ ಗುರುತಿಸಿಕೊಂಡಿದ್ದೇನೆ. ಗೆಲ್ಲುವ ಪ್ರಯತ್ನ ಮಾಡಿದ್ದೇನೆ. ಎಲಿಮಿನೇಷನ್‌ ಕೂಡ ಒಂದೇ ಬಾರಿ ಆಗಿದ್ದು, ನೇರವಾಗಿ ಫಿನಾಲೆಗೆ ತಲುಪಿದ್ದೇನೆʼʼಎಂದರು.

ಜಯಶ್ರೀ ಮಾತನಾಡಿ ʻʻಈ ಮನೆಯಲ್ಲಿ ನನ್ನನ್ನು ಕೇವಲ ಜಗಳಗಂಟಿಯಾಗೇ ನೋಡಿದರು. ನನ್ನ ವ್ಯಕ್ತಿತ್ವವನ್ನು ಇನ್ನೂ ತೋರಿಸಿಕೊಂಡಿಲ್ಲ. ಮೊದಲಿಂದಲೂ ನಾಮಿನೇಟ್‌ ಆಗುತ್ತಲೇ ಬಂದೆ. ಆದರೆ ಜನರು ವೋಟ್‌ ಮಾಡಿ ಗೆಲ್ಲಿಸಿದರು. ಅತ್ಯುತ್ತಮ ಎಂದು ಜನರು ನೀಡಿದ್ದರು. ನನ್ನ ಸಾಮರ್ಥ್ಯ ಅನುಸಾರ ಗೆದ್ದಿದ್ದೇನೆ ಎಂದರು.

ಇದನ್ನೂ ಓದಿ | Bigg Boss Kannada | ಮುಗಿಯಿತು 5 ವಾರ; ಎಲಿನಿಮಿನೇಷನ್ನಿಂದ ಯಾರು ಪಾರು, ಯಾರು ಗಡಿಪಾರು?

ಜಶ್ವಂತ್‌ ಮಾತನಾಡಿ ʻʻನನ್ನನು ನಾನು ಪ್ರೂವ್‌ ಮಾಡಲು ಇಲ್ಲಿಗೆ ಬಂದಿದ್ದೇನೆ. ಫಿನಾಲೆಗೆ ನಾನು ಬರುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಈ ಕಡೆ ಫ್ಯಾನ್ಸ್‌ ಇಲ್ಲ, ಭಾಷೆ ಬರುವುದಿಲ್ಲ, ಜತೆಗೆ ರಿಲೇಶನ್‌ಶಿಪ್‌ ಅನ್ನು ಸಹ ಬ್ಯಾಲೆನ್ಸ್‌ ಮಾಡಬೇಕಿತ್ತು. ಇದು ನನಗೆ ಬಹುದೊಡ್ಡ ಟಾಸ್ಕ್‌ ಆಗಿತ್ತು. ಭಾಷೆಯೂ ಬರದೇ ಇಷ್ಟು ದಿನ ಮನೆಯಲ್ಲಿ ಇದ್ದ್ದದ್ದು ನನ್ನ ಮಟ್ಟಿಗೆ ತುಂಬಾ ಚಾಲೆಂಜಿಂಗ್‌ʼʼಎಂದರು.

ಗುರೂಜಿ ಕಾರಣ ನೀಡಿದ್ದು ವಿಶೇಷವಾಗಿದ್ದು, ʻʻನಂಬರ್‌ ಅಂದರೆ ನಾನು . ನಾನು ಅಂದರೆ ನಂಬರ್‌. 8 ನನಗೆ ತುಂಬಾ ಅದೃಷ್ಟದ ನಂಬರ್‌ ಆಗಿದೆ. ಬಿಗ್‌ ಬಾಸ್‌ನಲ್ಲಿ ಮೊದಲು ಬಂದವನು ನಾನು. ತೂಕದಲ್ಲಿ 100 ಕೆ.ಜಿ ದಾಟಿದ್ದೇನೆ. ಅದೇ ರೀತಿ ಟಾಸ್ಕ್‌ ಅನ್ನು ನಿಭಾಯಿಸಿದ್ದೇನೆ. ಟಾಸ್ಕ್‌ ಅಲ್ಲಿ ಗೆದ್ದು ತೋರಿಸಿದ್ದೇನೆ. ಬಿಗ್‌ ಬಾಸ್‌ನಲ್ಲಿ ಅತಿ ಹೆಚ್ಚು ಕೆಲಸ ಮಾಡಿದ್ದು ನಾನು ಎಂಬ ಹೆಮ್ಮೆ ಇದೆ. ಇಲ್ಲಿಯ ತನಕ ಗೆಲ್ಲಿಸಿದ್ದೀರಿ ಮುಂದೆ ಗೆಲ್ಲಿಸುತ್ತೀರಿ ಎಂಬ ನಂಬಿಕೆ ಇದೆʼʼ ಎಂದರು.

ಇದನ್ನೂ ಓದಿ | Bigg Boss Kannada | ರೂಪೇಶ್ ಕ್ಯಾಪ್ಟನ್ಸಿ ಪರೀಕ್ಷೆ ಮುಗೀತು: ಮನೆಯವರು ಕೊಟ್ಟ ರೇಟಿಂಗ್ಸ್, ರಿವ್ಯೂ ಏನು?

Exit mobile version