Site icon Vistara News

Bigg Boss Kannada | ಕಾಂಪಿಟೇಟರ್ ಅಲ್ಲ ಅಂತ ಹೇಳೋಕೂ ಮನೆಯಲ್ಲಿ ಬಿಗ್ ಕಾಂಪಿಟೇಶನ್!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) ಆರನೇ ವಾರ ಯಾರು ತಮಗೆ ಪ್ರತಿ ಸ್ಪರ್ಧಿ ಹಾಗೂ ಪ್ರತಿ ಸ್ಪರ್ಧಿ ಅಲ್ಲ ಎಂದು ಸ್ಪರ್ಧಿಗಳು ಹೇಳಬೇಕಿತ್ತು. ಜತೆಗೆ ಕಾರಣವನ್ನು ನೀಡಬೇಕಿತ್ತು. ನಿಯಮದಂತೆ ಗಾರ್ಡನ್‌ ಏರಿಯಾದಲ್ಲಿ ಪ್ರತಿಯೊಬ್ಬ ಸದಸ್ಯ ತಮಗೆ ಯಾರು ಕಠಿಣ ಸ್ಪರ್ಧಿ ಯಾರು ಎಂದು ಘೋಷಿಸಿ ಕಾರಣ ನೀಡಬೇಕು. ನಂತರ ಆ ಸ್ಪರ್ಧಿಯನ್ನು ಫೋಟೊ ಫ್ರೇಮ್‌ನಲ್ಲಿ ಅಂಟಿಸಬೇಕು. ತಮಗೆ ಯಾರು ಪ್ರತಿ ಸ್ಪರ್ಧಿಯೇ ಅಲ್ಲ ಎಂದು ಘೋಷಿಸಿ ಸೂಕ್ತ ಕಾರಣಗಳೊಂದಿಗೆ ಚಿತ್ರವನ್ನು ಪೇಪರ್‌ ಶೆಡರ್‌ನಲ್ಲಿ ಹಾಕಬೇಕು.

ರಾಕೇಶ್‌ ಅವರು ರೂಪೇಶ್‌ ಶೆಟ್ಟಿ ತನ್ನ ಪ್ರತಿ ಸ್ಪರ್ಧಿ ಎಂದು ಫ್ರೇಮ್‌ನಲ್ಲಿ ಅಂಟಿಸಿದರು. ಸಾನ್ಯ ಅವರನ್ನು ಪೇಪರ್‌ ಶೆಡ್‌ನಲ್ಲಿ ಹಾಕಿದರು. ಆರ್ಯವರ್ಧನ್‌ ಅವರು ಅನುಪಮಾ ಅವರನ್ನು ಕಾಂಪಿಟೇಟರ್‌ ಆಗಿ ಸ್ವೀಕರಿಸಿದರೆ ಸಾನ್ಯ ಅವರನ್ನು ಸ್ಪರ್ಧಿಯೇ ಅಲ್ಲ ಎಂದು ಹೇಳಿದರು. ಅಮೂಲ್ಯ ಅವರು ಅನುಪಮಾ ಅವರು ಕಾಂಪಿಟೇಟರ್‌ ಹಾಗೂ ಪ್ರಶಾಂತ್‌ ಅವರು ಅಲ್ಲ ಎಂದು, ದೀಪಿಕಾ ಅವರು ಅರುಣ್‌ ಸಾಗರ್‌ ಕಾಂಪಿಟೇಟರ್‌ ಹಾಗೂ ರೂಪೇಶ್‌ ರಾಜಣ್ಣ ಅವರು ಅಲ್ಲ ಎಂದು, ರೂಪೇಶ್‌ ಶೆಟ್ಟಿ ಅವರು ರಾಕೇಶ್‌ ಅಡಿಗ ಕಾಂಪಿಟೇಟರ್‌ ಮತ್ತು ಆರ್ಯರ್ಧನ್‌ ಅಲ್ಲ ಎಂದು, ದಿವ್ಯಾ ಉರುಡುಗ ಅವರು ಅನುಪಮಾ ಅವರು ಕಾಂಪಿಟೇಟರ್‌ ಮತ್ತು ಆರ್ಯವರ್ಧನ್‌ ಅಲ್ಲ ಎಂದು, ಅರುಣ್‌ ಸಾಗರ್‌ ಅಮೂಲ್ಯ ಅನುಪಮಾ ಕಾಂಪಿಟೇಟರ್‌ ಮತ್ತು ಆರ್ಯವರ್ಧನ್‌ ಅಲ್ಲ ಎಂದರು.

ಇದನ್ನೂ ಓದಿ | Bigg Boss Kannada | ಈ ವಾರ ನಾಮಿನೇಟ್‌ ಆದ ಆರು ಸ್ಪರ್ಧಿಗಳು , ಯಾರವರು?

ಸಾನ್ಯ ಅವರು ದಿವ್ಯಾ ಉರುಡುಗ ಕಾಂಪಿಟೇಟರ್‌ ಮತ್ತು ರೂಪೇಶ್‌ ರಾಜಣ್ಣ ಅಲ್ಲ ಎಂದು, ಕಾವ್ಯಶ್ರೀ ಗೌಡ ಅವರು ಅರುಣ್‌ ಸಾಗರ್‌ ಕಾಂಪಿಟೇಟರ್‌ ಮತ್ತು ಆರ್ಯವರ್ಧನ್‌ ಅಲ್ಲ ಎಂದು, ಪ್ರಶಾಂತ್‌ ಸಂಬರಗಿ ಅವರು ಅರುಣ್‌ ಸಾಗರ್‌ ಕಾಂಪಿಟೇಟರ್‌ ಮತ್ತು ರೂಪೇಶ್‌ ರಾಜಣ್ಣ ಅಲ್ಲ ಎಂದು ಮತ್ತು ಅನುಪಮಾ ಅವರು ದಿವ್ಯಾ ಉರುಡುಗ ಕಾಂಪಿಟೇಟರ್‌ ಮತ್ತು ರೂಪೇಶ್‌ ರಾಜಣ್ಣ ಇಲ್ಲ ಎಂದರು.

ಮನೆಯಲ್ಲಿ ಪ್ರತಿಯೊಬ್ಬರು ಒಂದೊಂದು ಕಾರಣ ನೀಡಿದ್ದು, ಅದರಲ್ಲಿ ಅನುಪಮಾ ಅವರನ್ನು ಬಹು ಮಂದಿ ಕಾಂಪಿಟೇಟರ್‌ ಎಂದು ಆಯ್ಕೆ ಮಾಡಿದರು. ಆರ್ಯವರ್ಧನ್‌ ಮತ್ತು ರೂಪೇಶ್‌ ರಾಜಣ್ಣ ನಮ್ಮ ಪ್ರತಿ ಸ್ಪರ್ಧಿಯಾಗುವುದಿಲ್ಲ ಎಂದು ಬಹುತೇಕ ಸ್ಪರ್ಧಿಗಳು ಹೇಳಿಕೆ ನೀಡಿದರು. ಟಾಸ್ಕ್‌ ನಡುವೆ ಆರ್ಯವರ್ಧನ್‌ ಮತ್ತು ಕಾವ್ಯಶ್ರೀ ನಡುವೆ ವಾದ ಆಗಿದ್ದು, ಆರ್ಯವರ್ಧನ್‌ ಅವರು ʻʻತಮ್ಮ ಫಾಲೊವರ್ಸ್‌ ಅವರನ್ನು ಆಟದಲ್ಲಿ ತರಬೇಡಿʼʼ ಎಂದು ಕಾವ್ಯಶ್ರೀಗೆ ಖಡಕ್‌ ವಾರ್ನಿಂಗ್‌ ಮಾಡಿದರು.

ಇದನ್ನೂ ಓದಿ | Bigg Boss Kannada | ಬೈಕ್‌ ಗಿಫ್ಟ್‌ ಕೊಡ್ತಾರಂತೆ ರೂಪೇಶ್‌ ಶೆಟ್ಟಿ: ವಿರಹ ವೇದನೆಯಲ್ಲಿ ಇದ್ದಾರಂತೆ ದಿವ್ಯಾ!

Exit mobile version