ಬೆಂಗಳೂರು : ಬಿಗ್ ಬಾಸ್ ಸೀಸನ್ 9ರ (Bigg Boss Kannada) ಏಳನೇ ವಾರ ರೂಪೇಶ್ ರಾಜಣ್ಣ ಅವರು ಆರ್ಯವರ್ಧನ್ ಜತೆ ವಾದಕ್ಕೆ ಇಳಿದಿದ್ದಾರೆ. ಮನೆಯಲ್ಲಿ ಟಾಸ್ಕ್ ವಿಚಾರದಲ್ಲಿಯೂ ಧ್ವನಿ ಎತ್ತಿದ್ದಾರೆ. ಇನ್ನೊಂದೆಡೆ ರೂಪೇಶ್ ಶೆಟ್ಟಿ ಅವರಿಗೆ ಬಿಗ್ ಬಾಸ್ ಸಣ್ಣ ಶಿಕ್ಷೆಯನ್ನು ನೀಡಿದ್ದಾರೆ.
ಆರ್ಯವರ್ಧನ್ ಮತ್ತು ಪ್ರಶಾಂತ್ ಸಂಬರಗಿ ಮಾತನಾಡುವಾಗ ರೂಪೇಶ್ ರಾಜಣ್ಣ ಅವರು ಮಧ್ಯ ಪ್ರವೇಶಿಸಿದ್ದಾರೆ. ಆರ್ಯವರ್ಧನ್ ಅವರು ಏಕಾಏಕಿ ರೂಪೇಶ್ ರಾಜಣ್ಣ ಅವರ ಮೇಲೆ ಕಿಡಿಕಾರಿದ್ದಾರೆ. ರೂಪೇಶ್ ರಾಜಣ್ಣ ಅವರು ಕೂಡ ಈ ಬಗ್ಗೆ ʻʻಮನೆಯಲ್ಲಿ ನಿಮ್ಮ ಆಟಗಳನ್ನು ನನ್ನ ಮುಂದೆ ಆಡಬೇಡಿ, ನಾನು ಯಾವುದಕ್ಕೂ ಹೆದರುವುದಿಲ್ಲʼʼಎಂದು ಸವಾಲ್ ಹಾಕಿದ್ದಾರೆ. ಟಾಸ್ಕ್ ವಿಚಾರದಲ್ಲಿಯೂ ಕೂಡ ಚರ್ಚೆ ವೇಳೆಯಲ್ಲಿ ಒಮ್ಮತದ ನಿರ್ಧಾರ ಬಂದಾಗ, ರೂಪೇಶ್ ರಾಜಣ್ಣ ಒಪ್ಪಿರಲಿಲ್ಲ. ಬಿಗ್ ಬಾಸ್ ನಿಯಮದಂತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಿ ಎಂದು ಹೇಳಿದರೂ, ಸದಸ್ಯರು ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ರಾಕೇಶ್ ಅಡಿಗ ಜತೆ ರೂಪೇಶ್ ರಾಜಣ್ಣ ತರ್ಕ ಮಾಡಿದ್ದಾರೆ.
ಇದನ್ನೂ ಓದಿ | Bigg Boss Kannada | ಅರುಣ್ ಸಾಗರ್ ಬಗ್ಗೆ ಅಸಮಾಧಾನ ಹೊರ ಹಾಕಿದ ರೂಪೇಶ್ ಶೆಟ್ಟಿ!
ರಾಕೇಶ್ ಅಡಿಗ ಈ ಬಗ್ಗೆ ರೂಪೇಶ್ ರಾಜಣ್ಣ ಅವರ ಬಳಿ ಮಾತನಾಡಿ ʻʻಚರ್ಚೆ ಆಗಬೇಕಾದರೆ ನಿಮ್ಮ ಸರಿಯಾದ ನಿರ್ಧಾರವನ್ನು ಹೇಳಬೇಕಿತ್ತು. ಅದರ ಬದಲು ಕೊನೆಯಲ್ಲಿ ಎಲ್ಲರ ಮುಂದೆ ಚೆನ್ನಾಗಿರುವಂತೆ ನಾಟಕ ಮಾಡುವುದು ಸರಿಯಿಲ್ಲ. ನಿಮ್ಮ ಮಾತುಗಳನ್ನು ಕೇಳಿಸಿಕೊಳ್ಳಲು ಇಲ್ಲಿ ಯಾರು ತಯಾರಿಲ್ಲʼʼಎಂದು ಹೇಳಿಕೆ ನೀಡಿದ್ದಾರೆ.
ಫೇಕ್ ಮತ್ತು ರಿಯಲ್ ಟಾಸ್ಕ್ ವಿಚಾರವಾಗಿ ರೂಪೇಶ್ ರಾಜಣ್ಣ ಅವರು ಮನೆಯವರ ಮುಂದೆ ಚರ್ಚೆಗಳು ಸರಿಯಾಗಿ ಆಗಿಲ್ಲ ಎಂದು ಅಸಮಧಾನ ಹೊರ ಹಾಕಿದರು. ಬಳಿಕ ಪ್ರಶಾಂತ್ ಸಂಬರಗಿ ಅವರು ರೂಪೇಶ್ ರಾಜಣ್ಣ ಅವರನ್ನು ಸಮಾಧಾನಪಡಿಸಿದರು.
ರೂಪೇಶ್ ಶೆಟ್ಟಿಗೆ ಚಿಕ್ಕ ಲೋಟ, ದೊಡ್ಡ ಶಿಕ್ಷೆ
ರೂಪೇಶ್ ಶೆಟ್ಟಿ ಅವರು ಮನೆಯಲ್ಲಿ ಗ್ಲಾಸ್ ಒಡೆದು ಹಾಕಿದ್ದಕ್ಕೆ ಬಿಗ್ ಬಾಸ್ ಒಂದು ಶಿಕ್ಷೆಯನ್ನು ನೀಡಿದ್ದಾರೆ. ಇಡೀ ದಿನ ಚಿಕ್ಕ ಗ್ಲಾಸ್‌ನಲ್ಲಿ ಮಾತ್ರ ನೀರು ಕುಡಿಯಬೇಕು ಎಂದು ಆದೇಶ ನೀಡಿದ್ದಾರೆ. ಗ್ಲಾಸ್ ನೋಡುತ್ತಿದ್ದಂತೆ ಮನೆಯ ಸದಸ್ಯರು ರೂಪೇಶ್ ಶೆಟ್ಟಿ ಅವರನ್ನು ಆಡಿಕೊಂಡು ನಗಾಡಿದ್ದಾರೆ.
ಇದನ್ನೂ ಓದಿ | Bigg Boss Kannada | ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಆದವರು ಯಾರು? ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾದವರು ಇವರೇ!