Site icon Vistara News

Bigg Boss Kannada | ಕಾಡಿನಲ್ಲಿ ಕಷ್ಟ-ಸುಖ ಮಾತನಾಡಿದ ಸ್ಪರ್ಧಿಗಳು!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ನೇ (Bigg Boss Kannada) ದಿನ ಅರಣ್ಯದಲ್ಲಿ ವಾಸಿಸುವ ಟಾಸ್ಕ್‌ ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ನೀಡಿದ್ದರು. ಈ ವೇಳೆ ಸ್ಪರ್ಧಿಗಳು ತಮ್ಮ ಜೀವನದಲ್ಲಿ ಆಗಿರುವಂತಹ ನೋವುಗಳನ್ನು ಮನೆಮಂದಿ ಮುಂದೆ ಹಂಚಿಕೊಂಡರು. ಅದರಲ್ಲಿ ದಿವ್ಯಾ ಉರುಡುಗ ಮತ್ತು ಅಮೂಲ್ಯ ಅವರು ನೋವುಗಳನ್ನು ಹಂಚಿಕೊಂಡು ಕಣ್ಣೀರು ಹಾಕಿದ್ದಾರೆ.

ದಿವ್ಯಾ ಉರುಡುಗ ಅವರು ತಮ್ಮ ಚಿಕ್ಕಪ್ಪನನ್ನು ಕಳೆದುಕೊಂಡಿರುವ ದುಃಖದ ಸಂಗತಿಗಳನ್ನು ಹೇಳಿಕೊಂಡರು. ದಿವ್ಯಾ ಮಾತನಾಡಿ ʻʻಬಿಗ್‌ ಬಾಸ್‌ ಸೀಸನ್‌ನಲ್ಲಿ ಈ ಹಿಂದೆ ನನ್ನನ್ನು ಕಳುಹಿಸುವಾಗ ನನ್ನ ಚಿಕ್ಕಪ್ಪ ತುಂಬ ಖುಷಿಯಲ್ಲಿ ಕಳುಹಿಸಿದ್ದರು. ಅವರಿಗೂ ನಾನು ಅಂದರೆ ಇಷ್ಟ. ಮಗಳ ರೀತಿ ನೋಡುತ್ತಿದ್ದರು. ಆದರೆ ನಾನು ಬಿಗ್‌ ಬಾಸ್‌ ಸೀಸನ್‌ ಮುಗಿಸಿ ಹೋಗುವಷ್ಟರಲ್ಲಿ ಅವರು ತೀರಿಕೊಂಡಿದ್ದರುʼʼಎಂದು ಭಾವುಕರಾದರು.

ಅಮೂಲ್ಯ ಅವರು ತಮ್ಮ ತಾಯಿಯನ್ನು ನೆನೆದು ಕಣ್ಣೀರು ಹಾಕಿದರು. ಅಮೂಲ್ಯ ಮಾತನಾಡಿ ʻʻನನ್ನ ಜೀವನದಲ್ಲಿ ಅಮ್ಮನನ್ನು ಕಳೆದುಕೊಂಡದ್ದು ಮರೆಯಲಾರದ ಘಟನೆ. ಅವರಿಗೆ ಎರಡೂ ಕಿಡ್ನಿ ಫೇಲ್ಯೂರ್ ಆಗಿ ನಮ್ಮನ್ನು ಬಿಟ್ಟು ಹೋದರು. ಆಗಿನಿಂದಲೂ ನನ್ನ ಅಣ್ಣ ಮತ್ತು ಅಪ್ಪ ತುಂಬ ಮುದ್ದಾಗಿ ಸಾಕಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿಯೇ ತುಂಬ ಕಷ್ಟ ಎಂದೆನಿಸುತ್ತಿದೆʼʼಎಂದರು.

ಇದನ್ನೂ ಓದಿ | Bigg Boss Kannada | ಆರ್ಯವರ್ಧನ್‌ ಗುರೂಜಿಯಿಂದಾಗಿ ಮನೆಮಂದಿಗೆ ಆಟವೂ ಇಲ್ಲ, ಸೌಕರ್ಯವು ಇಲ್ಲ!

Bigg Boss Kannada

ರಾಕೇಶ್‌ ಅಡಿಗ ಅವರು ಮಾತನಾಡಿ ʻʻಸಿನಿಮಾದಲ್ಲಿ ಹೆಸರು ಗಳಿಸುವುದಕ್ಕಿಂತ ಮುಂಚೆ ತುಂಬ ಕಷ್ಟ ಪಟ್ಟಿದ್ದೆ. ಊಟಕ್ಕೂ ಅನ್ನ ಇರಲಿಲ್ಲ. ಬಳಿಕ ನಾನು ಡ್ರಗ್‌ ಸೇವಿಸುತ್ತಿದ್ದೇನೆ ಎನ್ನುವ ಗಾಸಿಪ್‌ಗಳು ಹರಿದಾಡಿದವು. ಕ್ರಮೇಣ ಅವಕಾಶಗಳು ಕಡಿಮೆ ಆದವು. ತುಂಬ ಜನ ಸಜೇಶನ್‌ ಕೊಡಲು ಬಂದಿದ್ದರು. ಕೊನೆಗೆ ನನ್ನ ತಾಳ್ಮೆ ನನ್ನನ್ನು ಗೆಲ್ಲಿಸಿತುʼʼಎಂದರು.

ರೂಪೇಶ್‌ ಶೆಟ್ಟಿ ಮಾತನಾಡಿ ʻʻತುಳು ಸಿನಿಮಾದಲ್ಲಿ ಮೊದ ಮೊದಲು ಅವಕಾಶಗಳು ಕಡಿಮೆ ಆದವು. ಹಣವನ್ನು ಕಳೆದುಕೊಂಡೆ. ಸೂಸೈಡ್‌ ಮಾಡಿಕೊಳ್ಳಬೇಕು ಎನ್ನುವ ಹಂತಕ್ಕೆ ಹೋದೆ. ಕೊನೆಯಲ್ಲಿ ಒಂದು ಸಿನಿಮಾಗೆ ನಿರ್ದೇಶನ ಮಾಡಿದೆ. 200ದಿನ ಆ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿತುʼʼಎಂದು ಹೇಳಿಕೊಂಡರು.

Bigg Boss Kannada

ಇದನ್ನೂ ಓದಿ | Bigg Boss Kannada | ಹೇಗಿತ್ತು ಮನೆಯಲ್ಲಿ ರೂಪೇಶ್‌ ರಾಜಣ್ಣರ ನಳಪಾಕ?

Exit mobile version